cafe: ಕಾಫಿಯಲ್ಲಿ ಕಾಫಿ ಬೀಜ ಇರಬಹುದು ಎಂದುಕೊಂಡವನಿಗೆ ಕಾದಿತ್ತು ಶಾಕ್​! ಅದು..

cafe
Published on

ನವದೆಹಲಿ: ಪ್ರಸಿದ್ಧ ಹೋಟೆಲ್​ಗಳಲ್ಲಿ ಕಳಪೆ ಆಹಾರ ಕೊಡುವುದು ಹೊಸವಿಷಯವೇನಲ್ಲ. ಅದೇ ರೀತಿ ದೆಹಲಿಯ ಖಾನ್ ಮಾರ್ಕೆಟ್‌ನ ಪ್ರಸಿದ್ಧ ಕೆಫೆ(cafe)ಯೊಂದರಲ್ಲಿ ಇಂತಹುದೇ ಪ್ರಕರಣ ನಡೆದಿದೆ. ಅಲ್ಲಿ ಗ್ರಾಹಕರೊಬ್ಬರು ಉಪ್ಪುಸಹಿತ ಕ್ಯಾರಮೆಲ್ ಕಾಫಿಯೊಂದಿಗೆ ಐಸ್ಡ್ ಲ್ಯಾಟೆಯನ್ನು ಆರ್ಡರ್ ಮಾಡಿದ್ದರು. ಅದರಲ್ಲಿ ಸತ್ತ ಜಿರಳೆ ಕಂಡು ಬಂದಿದೆ.

ರೆಡ್ಡಿಟ್‌ನಲ್ಲಿ "WaltzSimple6037" ಎಂಬ ಬಳಕೆದಾರ ಇದನ್ನು ಪೋಸ್ಟ್​ ಮಾಡಿದ್ದು, ಕಾಫಿಯ ತಳಭಾಗದಲ್ಲಿ ಕಂಡ ಜಿರಳೆಯನ್ನು ಮೊದಲು ಕಾಫಿ ಬೀಜ ಎಂದುಕೊಂಡಿದ್ದರು. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಸತ್ತ ಜಿರಳೆ ಎಂದು ಅರಿತುಕೊಂಡಿದ್ದಾರೆ.

ಬಳಿಕ ಆ ವ್ಯಕ್ತಿ ಕೆಫೆಯ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಆದರೆ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಕ್ಷಮೆಯಾಚಿಸಿ ಸುಮ್ಮನಾಗಿದ್ದಾರೆ.

ಕೆಫೆಯ ಮೆನುವಿನ ಪ್ರಕಾರ 365 ಮಿಲಿ ಐಸ್ಡ್ ಲ್ಯಾಟೆ ಬೆಲೆ 315 ರೂ.ಇದೆ. ಆದರೆ, ಗ್ರಾಹಕರ ಬಿಲ್ ನಲ್ಲಿ ಆತನ ಐಸ್ಡ್ ಲ್ಯಾಟೆ ಬೆಲೆ 335 ರೂ. ಆಗಿದೆ.

ಆ ವ್ಯಕ್ತಿ ಪೋಸ್ಟ್‌ನಲ್ಲಿ ತಮ್ಮ ಅನುಭವವನ್ನು ವಿವರಿಸಿದ್ದಾರೆ. ಕಾಫಿಯಲ್ಲಿ ಸತ್ತ ಜಿರಳೆ ಕಂಡಿದ್ದು, ಈ ಸ್ಥಳ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ನಾನು ಗಂಭೀರವಾಗಿ ಪ್ರಶ್ನಿಸುತ್ತಿದ್ದೇನೆ. ಸಿಬ್ಬಂದಿಯ ಅಸಡ್ಡೆ ವರ್ತನೆ ನನಗೆ ನಿರಾಸೆ ತಂದಿದೆ ಎಂದಿದ್ದಾರೆ.

ಪೋಸ್ಟ್ ತಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದ್ದು, ಅನೇಕ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗ, "ನಾನು ಹೊರಗೆ ತಿನ್ನುವುದನ್ನು ಎಂದಿಗೂ ಅವಲಂಬಿಸಲಾರೆ" ಎಂದು ಹೇಳಿದರೆ, ಇನ್ನೊಬ್ಬರು "ಪ್ರತಿ ಊಟದಲ್ಲಿ ಹೆಚ್ಚುವರಿ ಪ್ರೋಟೀನ್" ಇದು ಎಂದು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net