

ಮುಂಬೈ: ‘ದಿ ಆರ್ಚೀಸ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಯುವ ನಟ ವೇದಂಗ್ ರೈನಾ ಅವರ ಇತ್ತೀಚಿನ ಚಿತ್ರ 'ಲಿಗ್ರಾ' ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ದ ಪ್ರಚಾರದ ಭಾಗವಾಗಿ ವೇದಾಂಗ ಸರಣಿ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದು, ಅವರು ತನ್ನ ಮೊದಲ ಚಲನಚಿತ್ರದ ಕೋ ಸ್ಟಾರ್ಗಳಾದ ಸುಹಾನಾ ಖಾನ್(Suhana Khan) ಮತ್ತು ಖುಷಿ ಕಪೂರ್ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.
ಸುಹಾನಾ ಖಾನ್ ಮೇಕಪ್ ಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಳು ಎಂದು ವೇದಾಂಗ ಹೇಳಿದ್ದು, ಇದೀಗ ಈ ಕಾಮೆಂಟ್ಗಳು ವೈರಲ್ ಆಗಿವೆ.
"ಸುಹಾನಾ ತುಂಬಾ ಒಳ್ಳೆಯವಳು. ಅವಳು ತನ್ನ ಸುತ್ತಮುತ್ತಲಿನ ಜನರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾಳೆ. ಆದರೆ, ಅವಳು ರೆಡಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾಳೆ. ಸೆಟ್ನಲ್ಲಿರುವ ಹುಡುಗರೆಲ್ಲಾ 15 ನಿಮಿಷದಲ್ಲಿ ರೆಡಿಯಾಗುತ್ತಿದ್ದರು. ನಾವು ಅವಳಿಗಾಗಿ 40 ನಿಮಿಷಗಳಿಗಿಂತ ಹೆಚ್ಚು ಕಾಲ ಕಾಯುತ್ತಿದ್ದೆವು ಎಂದು ವೇದಂಗ್ ಹೇಳಿದ್ದಾರೆ.
ಸುಹಾನಾ ಜತೆಗಿದ್ದ ಟೀಮ್ ನಮಗೆ ಅಡ್ಡಿಪಡಿಸುತ್ತಿತ್ತು. ಟೇಕ್ಗಳ ಮಧ್ಯದಲ್ಲಿ 'ಕೂದಲು ಚೆನ್ನಾಗಿಲ್ಲ' ಎಂದು ಹೇಳುವ ಮೂಲಕ ನಮಗೆ ಸ್ವಲ್ಪ ತೊಂದರೆ ನೀಡಿತು. ಆದರೆ ಅದು ಅವಳ ಪಾತ್ರಕ್ಕೆ ತಕ್ಕಂತೆ ಮೇಕಪ್ ಮಾಡಬೇಕಾಗಿತ್ತು ಎಂದು ವೇದಾಂಗ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಖುಷಿ ಕಪೂರ್ ತುಂಬಾ ಮುದ್ದಾಗಿದ್ದಾಳೆ. ಅವಳು ಎಲ್ಲರೊಂದಿಗೆ ಮೋಜು ಮಾಡುತ್ತಾಳೆ. ಕೆಲವು ವಿಷಯಗಳಲ್ಲಿ ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾಳೆ. ತನ್ನನ್ನು ತಾನು ಕಡಿಮೆ ಅಂದಾಜು ಮಾಡಿಕೊಳ್ಳುತ್ತಾಳೆ. ಅದು ನನಗೆ ಇಷ್ಟವಾಗಲಿಲ್ಲ ಎಂದು ವೇದಾಂಗ್ ಹೇಳಿದ್ದಾರೆ.
ವೇದಾಂಗ್ ರ ಈ ಕಾಮೆಂಟ್ಗಳು ಸಿನಿಪ್ರಿಯರ ಗಮನ ಸೆಳೆದಿವೆ. ಸಾಕಷ್ಟು ನೆಟ್ಟಿಗರು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.