

ನವದೆಹಲಿ: ಜುಲೈ 22 ರವರೆಗೆ ದೆಹಲಿಯಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 187ಕ್ಕೆ ತಲುಪಿದ್ದು, 5 ವರ್ಷಗಳಲ್ಲಿ ಇದೇ ಅತ್ಯಧಿಕ. ಹಾಗಾಗಿ ಶಾಲೆಗಳಲ್ಲಿ ಮತ್ತು ಸಾಮಾನ್ಯ ಜನರಲ್ಲಿ ರೋಗದ ಕುರಿತು ಅಭಿಯಾನಗಳನ್ನು ನಡೆಸಲು ಈಗಾಗಲೇ ದೆಹಲಿ ಸರ್ಕಾರ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿದೆ ಎಂದು ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಶಾಲೆಗಳಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಡೆಂಗ್ಯೂ ವೈರಸ್ ಬಗ್ಗೆ ಅಭಿಯಾನ ನಡೆಸಲು ನಾವು ಆರೋಗ್ಯ ಇಲಾಖೆ ಮತ್ತು ಡಿಐಪಿಗೆ ವಿಶೇಷ ಸೂಚನೆ ನೀಡಿದ್ದೇವೆ. ಡೆಂಗ್ಯೂ ಪ್ರಕರಣಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ನಾನು ಇಂದು ಎಂಸಿಡಿ ಕಮಿಷನರ್ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದೇನೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಭಾರೀ ಮಳೆಯಿಂದ ದೆಹಲಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾದ ಬಳಿಕ ಡೆಂಗ್ಯೂ ವೈರಸ್ ಉಲ್ಬಣಗೊಂಡಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).