

ನವದೆಹಲಿ: ನಗರದಲ್ಲಿ ನಿರಂತರ ಮಳೆಯಿಂದಾಗಿ ದೆಹಲಿಯ ಹಲವು ಭಾಗಗಳು ಜಲಾವೃತಗೊಂಡ ಬೆನ್ನಲ್ಲೇ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರವಾಹ ಪರಿಹಾರ ಕಿಟ್‌ಗಳನ್ನು ಒಳಗೊಂಡಿರುವ ಗೋದಾಮು ಜಲಾವೃತಗೊಂಡಿದೆ.
ರಾಜಧಾನಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳಯಿಂದ ತೊಂದರೆಗೆ ಸಿಲುಕಿದವರಿಗೆ ರೇಷನ್ ಕಿಟ್ ನೀಡುವ ಸಲುವಾಗಿ ಉಂಟಾದಜಂಗ್ಪುರದ ವಾರ್ಡ್ ಸಂಖ್ಯೆ 142 ರಲ್ಲಿ ಸಂಗ್ರಹಿಸಿಟ್ಟಿದ್ದ ಗೋದಾಮು ಜಲಾವೃತಗೊಂಡ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಮಳೆಯಿಂದ ತತ್ತರಿಸಿದ ದೆಹಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, "ಇದು ಒಬ್ಬರು ಮತ್ತೊಬ್ಬರನ್ನು ದೂಷಿಸಿ ಮಾತನಾಡುವ ಸಮಯವಲ್ಲ. ಎಲ್ಲಾ ಪೀಡಿತ ರಾಜ್ಯಗಳ ಸರ್ಕಾರಗಳು ಪರಿಹಾರ ನೀಡಲು ಒಟ್ಟಾಗಿ ಕೆಲಸ ಮಾಡುವುದು ಅಗತ್ಯವಿದೆ" ಎಂದು ಒತ್ತಿ ಹೇಳಿದರು,(ಏಜೆನ್ಸೀಸ್).