ಪೊಲೀಸ್ ನಾಯಿಯನ್ನೇ ಕಚ್ಚಿದ ಮದ್ಯ ವ್ಯಸನಿ ಅರೆಸ್ಟ್​​!

Drunk Man Bites Police Dog Multiple Times To Resist Arrest
Published on

ಅಮೆರಿಕಾ: ವ್ಯಕ್ತಿಯೊಬ್ಬ ಪೊಲೀಸ್​ ನಾಯಿಯನ್ನು ಕಚ್ಚಿದ್ದಲ್ಲದೆ ಪೊಲೀಸರಿಬ್ಬರ ಮೇಲೆ ದಾಳಿ ಮಾಡಿ ಈಗ ಜೈಲಿನಲ್ಲಿದ್ದಾನೆ. ಈ ಘಟನೆ ಅಮೆರಿಕಾದ ಡೆಲಾವೆರ್​ನಲ್ಲಿ ನಡೆದಿದೆ.

47 ವರ್ಷದ ಈ ಅಪರಾಧಿ ಜಮಲ್ ವಿಂಗ್​ ವಿಲ್ಮಿಂಗ್ಟನ್​ನ ನಿವಾಸಿ. ಮಧ್ಯಪಾನ ಮಾಡಿ ವೇಗವಾಗಿ ಗಾಡಿ ಚಲಾಯಿಸಿದ್ದು, ಮಾತ್ರವಲ್ಲದೇ ಪೊಲೀಸರ ಮೇಲೆ ದಾಳಿ ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಪೊಲೀಸ್ ಇಲಾಖೆಯ ಪ್ರಕಾರ, ಜು.8ರಂದು ರಾತ್ರಿ 1.41 ನಿಮಿಷಕ್ಕೆ ಇವನು ವಾಹನವನ್ನು ವೇಗದಲ್ಲಿ ಚಲಾಯಿಸಿಕೊಂಡು ಬಂದಿದ್ದಾನೆ. ಗಸ್ತು ತಿರುಗುತ್ತಿದ್ದ ಪೊಲೀಸರು ಈ ವಾಹವನ್ನು ತಡೆದರು. ಆ ಸಂದರ್ಭದಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳಲು ಮಾಕೋ ಎಂಬ ಪೊಲೀಸ್​ ನಾಯಿಯನ್ನು ಹಲವಾರು ಇವನು ಬಾರಿ ಕಚ್ಚಿದ. ಪೊಲೀಸರು ಅವನನ್ನು ಬಂಧಿಸಿದರು.

ಪ್ರಾಣಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಮತ್ತು ಇನ್ನಿತರೇ ಅಪರಾಧಗಳಡಿ ಇವನನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಲಾಯಿತು. ಈ ವಿಷಯವನ್ನು ಡೆಲಾವೇರ್ ಸ್ಟೇಟ್​ ಪೊಲೀಸರು ತಮ್ಮ ಫೇಸ್​ಬುಕ್​ ಪುಟದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಪೊಲೀಸ್​​ ಅಧಿಕಾರಿಯೊಬ್ಬರು ಮಾತನಾಡಿ, ಅವನು ಮದ್ಯಪಾನ ಮಾಡಿದ್ದನು. ಗಾಯಗಳಿಗೆ ಚಿಕಿತ್ಸೆ ನೀಡಲು ಇವನನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಲಾಯಿತು. ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಒಬ್ಬ ಅಧಿಕಾರಿ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net