

ಮಾಡರ್ನ್ ಲೈಫ್ಸ್ಟೈಲ್ನಲ್ಲಿ ಕಾಯಿಲೆಗಳಿಗೆ ಬರವಿಲ್ಲ. ಆದರೆ ಆಹಾರಕ್ಕೆ ಖಂಡಿತ ಬರವಿದೆ! ಒತ್ತಡ, ಅಜೀರ್ಣ ಸಮಸ್ಯೆ, ಒಬೆಸಿಟಿ ಇತ್ಯಾದಿ ಕಾಯಿಲೆಗಳು ಆಹಾರ ಕೊರತೆಗೆ ಸಾಕ್ಷಿಯಾಗಿವೆ. ಹೆಚ್ಚಿನ ಕಾಯಿಲೆಗಳು ಇತ್ತೀಚೆಗೆ ಉಲ್ಬಣಗೊಳ್ಳುತ್ತಿರುವುದಕ್ಕೆ ಕಾರಣ ಸರಿಯಾದ ಆಹಾರ ಕ್ರಮ ಇಲ್ಲದಿರುವುದು. ಹಾಗಾದರೆ ಎಂತಹ ಆಹಾರವನ್ನು ಸೇವಿಸಿದರೆ ಒಳಿತು ಎಂಬುದು ನಿಮ್ಮ ಪ್ರಶ್ನೆ ಅಲ್ಲವೇ? ಇದಕ್ಕೆ ಖಂಡಿತ ಉತ್ತರವಿದೆ. ಹೆಲ್ತಿ ಡಯಟ್‌ನಿಂದ ಕಾಯಿಲೆಗಳು ಬರದಂತೆ ತಡೆಯುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ನ್ಯಾಚುರೋಪಥಿ ತಜ್ಞರು. ಹೆಲ್ತಿ ಡಯಟ್ ಎಂದಾಕ್ಷಣ ನಿಮ್ಮ ತಲೆಯಲ್ಲಿ ಒಂದು ಚಪಾತಿ, ಮೊಟ್ಟೆ, ಜ್ಯೂಸ್ ನೆನಪಾಗುತ್ತಿದ್ದರೆ ವೆರಿ ಸಾರಿ. ಯಾಕಂದ್ರೆ ಇಲ್ಲಿ ತಜ್ಞರು ಹೇಳುತ್ತಿರುವುದು ಫ್ರೂಟ್ ಥೆರಪಿಯ ಬಗ್ಗೆ. ಸಿಂಪಲ್ ಆಂಡ್ ಗುಡ್ ಡಯಟ್ ಆಗಿರುವ ಈ ಥೆರಪಿಯ ಬಗ್ಗೆ ವೈದ್ಯರು ಈಗಾಗಲೇ ಸಾಕಷ್ಟು ಸಂಶೋಧನೆ ಸಹ ನಡೆಸಿದ್ದಾರೆ. ದುಬಾರಿ ಅಲ್ಲದ ನ್ಯಾಚುರಲ್ ಗಿಫ್ಟ್ ಫ್ರೂಟ್ಸ್ ಬಳಸಿ ದೇಹವನ್ನು ಹೇಗೆ ಸ್ವಸ್ಥವಾಗಿಡಬಹುದು ಎಂಬುದನ್ನು ನೋಡೋಣ ಬನ್ನಿ.
ನಿನ್ನೆ ಮೊನ್ನೆಯದಲ್ಲ
ಫ್ರೂಟ್ ಥೆರಪಿ ಅಂದರೆ ಹಣ್ಣಿನ ಚಿಕಿತ್ಸೆ. ಇದು ಅನಾದಿಕಾಲದಿಂದಲೂ ಇದೆ. ಋಷಿಗಳು ಸಹ ಫಲಹಾರವನ್ನೇ ಸೇವಿಸಿ ಧೀರ್ಘಾಯುಷಿಗಳಾಗಿದ್ದರು. ಭಾರತದಲ್ಲಿ ಆಯುರ್ವೇದ ಪದ್ಧತಿ ಅಭ್ಯಾಸ ಮಾಡುವವರಿಗೆ ಫ್ರೂಟ್ ಥೆರಪಿ ನ್ಯಾಚುರೋಪಥಿಯಲ್ಲಿ ಒಂದು ಭಾಗವಾಗಿ ಇರುತ್ತದೆ. ಅನೇಕ ಕಡೆ ಈ ಥೆರಪಿ ಇದೆಯಾದರೂ ದಕ್ಷಿಣ ಏಷ್ಯಾದ ಚಿಕಿತ್ಸಕರು ಇದನ್ನು ಆರಂಭಿಸಿದರು. ಹೀಲಿಂಗ್ ಟ್ರೀಟ್‌ಮೆಂಟ್‌ಗೂ ಇದನ್ನು ಉಪಯೋಗಿಸುತ್ತಾರೆ.
ಯಶಸ್ವಿ ಪ್ರಯೋಗ
ಮಿಸ್ಸಿಸ್ಸಿಪ್ಪಿ ಸೆಂಟ್ರಲ್ ಟೌನ್ ಪ್ರಿಸನ್ ಒಮ್ಮೆ ತನ್ನಲ್ಲಿನ ಕೈದಿಗಳಿಗೆ ರಿಚ್ ವಿಟಮಿನ್ ಇರುವ ಮಾಂಸ, ಮೀನು, ಕೋಲಾ, ಕಾಫಿ, ಅನ್ನ, ಮೊಟ್ಟೆಯನ್ನು ದಿನನಿತ್ಯದ ಡಯಟ್‌ಗೆ ನೀಡಿತು. ಇದರ ಪರಿಣಾಮ ಅವರಲ್ಲಿ ತ್ವಚೆಯ ಸಮಸ್ಯೆ, ಮಲಬದ್ಧತೆ ಇತರೆ ಕಾಯಿಲೆಗಳು ಕಾಣಿಸಿಕೊಂಡವು. ಇಲ್ಲಿ ಇನ್ನೊಂದು ಉದಾಹರಣೆಯಿದೆ. ಯುಎಸ್‌ಎನಲ್ಲಿ ಡಾ. ಕರೆಲ್ ಎಂಬುವವರು ನಾಯಿಯಿಂದ ೪ ಪಿಂಟ್(೨೦ ಔನ್ಸ್/೦.೫೬೮ ಲೀಟರ್) ರಕ್ತವನ್ನು ತೆಗೆದರು. ಆಗ ನಾಯಿಗೆ ಸರಿಯಾಗಿ ನಿಲ್ಲಲ್ಲು, ನಡೆಯಲಾಗದೆ ಅಸಮರ್ಥಗೊಂಡಿತು. ನಂತರ ೪ ಪಿಂಟ್ ತಾಜಾ ಫ್ರೂಟ್ ಜ್ಯೂಸ್ ಅನ್ನು ಅದಕ್ಕೆ ಕುಡಿಸಿದರು. ಅತ್ಯಲ್ಪ ಸಮಯದಲ್ಲೇ ನಾಯಿ ಓಡಾಡಲು ಶುರುವಿಟ್ಟುಕೊಂಡಿತು. ಈ ಪ್ರಯೋಗಗಳು ಹಣ್ಣು ಎಷ್ಟು ಸತ್ವವುಳ್ಳದ್ದು ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತವೆ. ತಿನ್ನುವ ಆಹಾರದಲ್ಲಿ ಹಣ್ಣು ಇರಲೇಬೇಕೆಂಬುದು ಇದರಿಂದ ತಿಳಿಯುತ್ತದೆ. ರಕ್ತಹೀನತೆ, ನಿಶ್ಯಕ್ತಿ, ಜ್ವರ ಯಾವುದೇ ಕಾಯಿಲೆಗಳಿಗೆ ವೈದ್ಯರ ಬಳಿ ಹೋದಾಗ ಅವರು ಸಹ ಪ್ರತಿ ಸಾರಿ ಹೇಳುವುದು ಲಿಕ್ವಿಡ್ ಫುಡ್ ಕೊಡಿ ಅರ್ಥಾತ್ ಫ್ರೂಟ್ ಜ್ಯೂಸ್ ಕೊಡಿ.
ವಿಟಮಿನ್‌ಗಳ ಆಗರ
ಯಾವುದೋ ಒಂದು ಹಣ್ಣು ತಿಂದರೆ ನಮ್ಮ ದೇಹಕ್ಕೆ ಬೇಕಾದ ಜೀವಸತ್ವಗಳು ಸಿಗುವುದಿಲ್ಲ. ಕೆಲವು ಹಣ್ಣುಗಳಲ್ಲಿ ಮಿನರಲ್ಸ್, ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲೊರಿ ಇದ್ದರೆ, ಇನ್ನು ಹಲವು ನ್ಯಾಚುರಲ್ ಫ್ಯಾಟ್ಸ್, ಹೆಲ್ತಿ ಶುಗರ್, ಪ್ಯೂರ್ ವಾಟರ್, ಪ್ರೋಟಿನ್, ಕಿಣ್ವಗಳನ್ನು ಹೊಂದಿರುತ್ತವೆ. ಎಲ್ಲಾ ತರಹದ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹವು ಶುದ್ಧೀಕರಣಗೊಳ್ಳುವುದರ ಜೊತೆಗೆ ಅಗತ್ಯವಾದ ಪೋಷಕಾಂಶವನ್ನು ಪಡೆಯುತ್ತದೆ. ೨೦ ನಿಮಿಷದಲ್ಲಿಯೇ ಸರಾಗವಾಗಿ ಜೀರ್ಣಕ್ರಿಯೆ ಆಗುತ್ತದೆ. ದಿನವಿಡೀ ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ. ನಿತ್ಯ ಹಣ್ಣುಗಳನ್ನು ಸೇವಿಸುತ್ತಾ ಬಂದರೆ ನಮ್ಮ ದೇಹದಿಂದ ವಾರಕ್ಕೆ ಒಂದು ಸಾರಿ ವಿಷ ವಸ್ತುಗಳು ಹೊರಹಾಕಲ್ಪಡುತ್ತವೆ. ಫ್ರೂಟ್ ಡಯಟ್ ಮಾಡುವವರು ಒಮ್ಮೆ ವೈದ್ಯರನ್ನು ಸಂಪರ್ಕಿಸಿದರೆ ಒಳಿತು.
ನ್ಯಾಚುರಲ್ ಟ್ರೀಟ್‌ಮೆಂಟ್
ಬಹುಪಯೋಗಿ ಹಣ್ಣು ಆರೋಗ್ಯಕರ ಆಹಾರ. ನೂರಾರು ಕಾಯಿಲೆಗಳಿಗೆ ರಾಮಬಾಣ. ಬೆಸ್ಟ್ ನ್ಯಾಚುರಲ್ ಡಿಟಾಕ್ಸ್ ಎಂದೇ ಕರೆಯುವ ಹಣ್ಣಿನ ಸೇವನೆಯಿಂದ ಯಾವ ಯಾವ ಕಾಯಿಲೆಗಳು ನಿರ್ಮೂಲನವಾಗುತ್ತವೆ ತಿಳಿಯೋಣವೇ?
ಸಿಟ್ರಸ್ ಹಣ್ಣುಗಳು
ರೋಗನಿರೋಧಕ ಶಕ್ತಿ ಹೆಚ್ಚಲು.
ಹೃದಯ ಸಂಬಂಧಿ ಕಾಯಿಲೆಗಳಿಗೆ.
ಡೀಟಾಕ್ಸಿಕೇಶನ್‌ಗೆ.
ರಕ್ತದೊತ್ತಡ ಕಡಿಮೆಯಾಗಲು.
ಚರ್ಮರೋಗಗಳಿಗೆ.
(ದಾಳಿಂಬೆ, ನಿಂಬೆಹಣ್ಣು, ಕಿತ್ತಳೆ, ಮೋಸಂಬಿ, ಚಕೋತ ಸಿಟ್ರಸ್ ಹಣ್ಣುಗಳಾಗಿವೆ)
ಚೆರ‍್ರಿ
ಸಂಧಿವಾತ ನಿವಾರಣೆಗೆ.
ದಂತಕ್ಷಯಕ್ಕೆ.
ದೇಹದ ತೂಕ ಕಡಿಮೆಯಾಗಲು.
ನಿದ್ರಾಹೀನತೆಗೆ.
ತೀವ್ರ ಭಾವೋದ್ವೇಗಕ್ಕೆ
ದ್ರಾಕ್ಷಿ
ಕ್ಯಾನ್ಸರ್‌ಕಾರಕ ಜೀವಕೋಶಗಳ ನಾಶಕ್ಕೆ.
ಕೊಲೆಸ್ಟಾçಲ್ ಕಡಿಮೆಯಾಗಲು.
ಬ್ಯಾಕ್ಟೀರಿಯಾ ಸೋಂಕುಗಳಿಗೆ.
ದೀರ್ಘಾಯುಷಿಗಳಾಗಲು.
ಅಸ್ತಮಾ ಕಾಯಿಲೆಗೆ.
ಮಾವಿನ ಹಣ್ಣು
ಅನಿಮಿಯಾ ಕೊರತೆಗೆ.
ದೇಹವನ್ನು ಸಮತೋಲನದಲ್ಲಿಡಲು.
ಜೀರ್ಣಕ್ರಿಯೆಗೆ.
ಕಣ್ಣಿನ ಆರೋಗ್ಯಕ್ಕೆ.
ಅಸಿಡಿಟಿಗೆ.
ಬಾಳೆಹಣ್ಣು
ಜೀರ್ಣಕ್ರಿಯೆಗೆ.
ರಕ್ತ ಹೆಚ್ಚಳಕ್ಕೆ.
ಚಟುವಟಿಕೆಯಿಂದರಲು.
ಪಪ್ಪಾಯ
ಹೃದ್ರೋಗ ತಡೆಗಟ್ಟಲು.
ಕಿವಿ ಸೋಂಕಿಗೆ.
ಸ್ಟೊçÃಕ್ ತಡೆಗಟ್ಟಲು.
ರೋಗನಿರೋಧಕ ಶಕ್ತಿ ಹೆಚ್ಚಲು.
ಡಯಾಬಿಟಿಸ್ ರೋಗಿಗಳಿಗೆ.
ಸೇಬುಹಣ್ಣು
ಹೃದ್ರೋಗ ತಡೆಗಟ್ಟಲು.
ಮೆಟಾಬಾಲಿಕ್ ಸಿಂಡ್ರೋಮ್‌ಗೆ.
ಡಯಾಬಿಟಿಸ್‌ಗೆ
ಹೈಪರ್‌ಟೆನ್‌ಷನ್‌ಗೆ
ಅಧಿಕ ಕೊಲೆಸ್ಟಾçಲ್ ತಡೆಯಲು.
ಕಲ್ಲಂಗಡಿ
ಕಿಡ್ನಿ ಸಂಬಂಧಿ ಕಾಯಿಲೆ ನಿವಾರಣೆಗೆ.
ಲೈಂಗಿಕ ಆಸಕ್ತಿ ಹೆಚ್ಚಲು.
ಅಧಿಕ ರಕ್ತದೊತ್ತಡಕ್ಕೆ.
ಸೋಂಕನ್ನು ತಡೆಗಟ್ಟಲು.
ಬ್ರೆಸ್ಟ್ ಕ್ಯಾನ್ಸರ್ ತಡೆಯಲು.
ಅನಾನಸ್
ಕೆಮ್ಮು ಮತ್ತು ಶೀತ ತಡೆಯಲು.
ಮೂಳೆಗಳು ಬಲಗೊಳ್ಳಲು.
ಹಲ್ಲುಗಳು ಗಟ್ಟಿಮುಟ್ಟಾಗಲು.
ಅಕ್ಷಿಪಟಲ ಹಾಳಾಗದಿರಲು.
ಸಂಧಿವಾತ ಉಪಶಮನಕ್ಕೆ.
ಬೆರ‍್ರಿ ಹಣ್ಣುಗಳು
ಒಳ್ಳೆಯ ಕೊಲೆಸ್ಟಾçಲನ್ನು ಹೆಚ್ಚಿಸುತ್ತದೆ.
ಡಯಾಬಿಟಿಸ್ ತಡೆಗಟ್ಟಲು.
ಬುದ್ಧಿಮಟ್ಟ ಹೆಚ್ಚಲು.
ಸಮತೋಲನ ತೂಕಕ್ಕೆ.
ಮೂಳೆಗಳು ಬಲಗೊಳ್ಳಲು.
(ಸ್ಟಾçಬರ‍್ರಿ, ಬ್ಲೂಬರ‍್ರಿ, ಬ್ಲಾಕ್‌ಬರ‍್ರಿ, ರಾಸ್ಪ್ಬರ‍್ರಿಗಳು ಬರ‍್ರಿ ಹಣ್ಣುಗಳಾಗಿವೆ)
ಮರಸೇಬು
ಜ್ವರಕ್ಕೆ ಪರಿಣಾಮಕಾರಿ.
ಊರಿಯುತ ನಿವಾರಣೆಗೆ.
ಗಂಟಲಿನ ಸಮಸ್ಯೆಗಳಿಗೆ.
ರಕ್ತದಲ್ಲಿನ ಸಕ್ಕರೆಮಟ್ಟ ನಿಯಂತ್ರಿಸಲು.
ಉಸಿರಾಟದ ತೊಂದರೆ ಕಡಿಮೆಯಾಗಲು.
ನರಮಂಡಲಕ್ಕೆ ಉಪಯುಕ್ತ.