

Exit Poll: ಬಹುನಿರೀಕ್ಷಿತ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು (ಫೆ.08) ಹೊರಬಿದ್ದಿದ್ದು, ಹ್ಯಾಟ್ರಿಕ್ ಗೆಲುವಿನ ಆಸೆಯಲ್ಲಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಮುಖಭಂಗ ಉಂಟಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ತಡ ಯಾರ ಪರ ಫಲಿತಾಂಶ ಬರಲಿದೆ? ಯಾರ ಪಾಲಾಗಲಿದೆ ದೆಹಲಿಯ ಅಧಿಕಾರ ಎಂಬ ಪ್ರಶ್ನೆ, ಕುತೂಹಲಕ್ಕೆ ಕಡೆಗೂ ತೆರೆ ಬಿದ್ದಿದೆ. 27 ವರ್ಷಗಳ ಬಳಿಕ ದೆಹಲಿಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಈಗ ಸರ್ಕಾರ ರಚಿಸಲು ಎದುರುನೋಡುತ್ತಿದೆ.
ಒಂದೆಡೆ, ಬಿಜೆಪಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ದೆಹಲಿ ಜನತೆಗೆ ಧನ್ಯವಾದ ಅರ್ಪಿಸಿದರೆ, ಮೂರನೇ ಬಾರಿಗೆ ದೆಹಲಿ ಗೆದ್ದುಗೆ ಏರುವ ಕನಸು ಕಂಡಿದ್ದ ಎಎಪಿಗೆ ಈ ಸೋಲು ಸದ್ಯ ಭಾರೀ ಆಘಾತವನ್ನೇ ತಂದೊಡ್ಡಿದೆ. ಒಟ್ಟು 70 ಕ್ಷೇತ್ರಗಳಿಗೆ ನಡೆದ ಚನಾವಣೆಯಲ್ಲಿ ಬಿಜೆಪಿ 48 ಪಡೆದರೆ, ಎಎಪಿ 22 ಮತ್ತು ಕಾಂಗ್ರೆಸ್ ಶೂನ್ಯ ದಾಖಲಿಸಿದೆ. ಇದು ಆಮ್ ಆದ್ಮಿ ಪಕ್ಷದ ಗೆಲುವಿನ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಅಸಲಿಗೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಹೊರಬಿದ್ದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಹಳ ನಿಖರವಾಗಿ ಯಾವ ಪಕ್ಷಕ್ಕೆ ಎಷ್ಟು? ಯಾರಿಗೆ ಗೆಲುವು? ಎಂಬುದನ್ನು ತಿಳಿಸಿತ್ತು. ಇದು ಈಗ ನಿಜವಾಗಿದೆ. ಹಾಗಿದ್ರೆ, ಯಾವೆಲ್ಲಾ ಕಂಪನಿಗಳು ನಿಖರವಾಗಿ ಸಮೀಕ್ಷೆ ವರದಿ ನೀಡಿತ್ತು? ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಎಕ್ಸಿಟ್ ಪೋಲ್ಗಳ ವಿಷಯಕ್ಕೆ ಬಂದರೆ ಬಹುತೇಕ ಕಂಪನಿಗಳು ಬಿಜೆಪಿಗೇ ಗೆಲುವು ಸೂಚಿಸಿತ್ತು. ಎಲ್ಲಾ ಸಮೀಕ್ಷಾ ಕಂಪನಿಗಳು ಈ ಬಾರಿ ರಾಷ್ಟ್ರ ರಾಜಧಾನಿಯಲ್ಲಿ 'ಕಮಲ' ಭರ್ಜರಿ ಗೆಲುವು ಸಾಧಿಸಲಿದೆ ಹಾಗೂ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದೇ ಭವಿಷ್ಯ ನುಡಿದಿತ್ತು. ಆದಾಗ್ಯೂ, ಕೆಕೆ ಸಮೀಕ್ಷೆಯು ಎಎಪಿ 39 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಬಿಜೆಪಿ 22 ಸ್ಥಾನಗಳನ್ನು ಪಡೆಯುತ್ತದೆ ಎಂದು ನೀಡಿದ ಸಮೀಕ್ಷೆ ಮಾತ್ರ ದೆಹಲಿ ಜನತೆಯಲ್ಲಿ ಕುತೂಹಲ ಕೆರಳಿಸಿ, ಚುನಾವಣಾ ಫಲಿತಾಂಶ ಹೊರಬೀಳುವ ತನಕ ಕಾತರ ಉಳಿಸಿಕೊಳ್ಳುವಂತೆ ಮಾಡಿತ್ತು.
ಮ್ಯಾಟ್ರಿಕ್ಸ್
ಬಿಜೆಪಿ + 35-40 ಸ್ಥಾನಗಳು
ಎಎಪಿ 32-37 ಸ್ಥಾನಗಳು
ಕಾಂಗ್ರೆಸ್ 0-1 ಸ್ಥಾನ
PMARQ
ಎಎಪಿ 21-31 ಸ್ಥಾನಗಳು
ಬಿಜೆಪಿ + 39-49 ಸ್ಥಾನಗಳು
ಕಾಂಗ್ರೆಸ್ 0-1 ಸ್ಥಾನ
ಜೆವಿಸಿ
ಎಎಪಿ 22-31 ಸ್ಥಾನಗಳು
ಬಿಜೆಪಿ + 39-45 ಸ್ಥಾನಗಳು
ಕಾಂಗ್ರೆಸ್ 0-2 ಸ್ಥಾನ
ಇದನ್ನೂ ಓದಿ: ಮಹಿಳೆಯೊಬ್ಬರನ್ನು ಕಚ್ಚಿ ಪ್ರಾಣ ಬಿಟ್ಟ ಹಾವು! ಈಕೆ ಪ್ರಾಣಾಪಾಯದಿಂದ ಪಾರು..Snakeಪೀಪಲ್ಸ್ ಪಲ್ಸ್
ಎಎಪಿ 10-19 ಸ್ಥಾನಗಳು
ಬಿಜೆಪಿ + 51-60 ಸ್ಥಾನಗಳು
ಕಾಂಗ್ರೆಸ್ 0 ಸ್ಥಾನಗಳು
ಪೀಪಲ್ಸ್ ಇನ್ಸೈಟ್
ಎಎಪಿ 25-29 ಸ್ಥಾನಗಳು
ಬಿಜೆಪಿ + 40-44 ಸ್ಥಾನಗಳು
ಕಾಂಗ್ರೆಸ್ 1 ಸ್ಥಾನ
ಚಾಣಕ್ಯ
ಎಎಪಿ 25-28 ಸ್ಥಾನಗಳು
ಬಿಜೆಪಿ + 39-44 ಸ್ಥಾನಗಳು
ಕಾಂಗ್ರೆಸ್ 2-3 ಸ್ಥಾನ
AAP 18-25
ಬಿಜೆಪಿ 42-50
ಕಾಂಗ್ರೆಸ್ 0-2
ಡಿವಿ ರಿಸರ್ಚ್
AAP 26-34
ಬಿಜೆಪಿ ಪ್ಲಸ್ 36-44
ಕಾಂಗ್ರೆಸ್ 0
ವೀ ಪ್ರಿಸೈಡ್
AAP 46-52
ಬಿಜೆಪಿ ಪ್ಲಸ್ 18-23
ಕಾಂಗ್ರೆಸ್ 0-1
ಫೆಬ್ರವರಿ 5ರಂದು ಒಂದೇ ಹಂತದಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆದಿದ್ದು, 70 ವಿಧಾನಸಭಾ ಸ್ಥಾನಗಳಿಗೆ 699 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಒಂದೆಡೆಯಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣಾ ಪ್ರಚಾರವನ್ನು ಬಿರುಸಿನಿಂದ ನಡೆಸಿ, ಅಖಾಡದಲ್ಲಿ ಭಾರೀ ಸದ್ದು ಮಾಡಿತು. ಫಲಿತಾಂಶಗಳ ಬಗ್ಗೆ ಮೂರು ಪಕ್ಷಗಳಲ್ಲಿ ಬಲವಾದ ವಿಶ್ವಾಸ ಮೂಡಿತ್ತು. ಗೆಲುವು ತಮ್ಮದೇ ಎಂದು ಹೇಳಿಕೊಂಡಿತ್ತು. ಈ ಮಧ್ಯೆ, ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ವಿಶ್ವಾಸದಲ್ಲಿ ಎಎಪಿ ಇತ್ತು. ಆದರೆ, ಗೆಲುವು ಬಿಜೆಪಿಯತ್ತ ಮುಖಮಾಡಿದ ಬೆನ್ನಲ್ಲೇ ಪಟ್ಟಕ್ಕೇರುವ ಆಸೆ ಕಮರಿ ಹೋಯಿತು.
ನವದೆಹಲಿಯಿಂದ ಎಎಪಿಯ ಅರವಿಂದ್ ಕೇಜ್ರಿವಾಲ್, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಇಲ್ಲಿ ಸ್ಪರ್ಧಿಸಿದ್ದರು. ಕಲ್ಕಾಜಿ ಕ್ಷೇತ್ರದಿಂದ ಎಎಪಿ ಅಭ್ಯರ್ಥಿ ಹಾಗೂ ದೆಹಲಿ ಸಿಎಂ ಅತಿಶಿ, ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ್ ಬಿದುರಿ ಸ್ಪರ್ಧಿಸಿದ್ದರು. ಎಎಪಿಯಿಂದ ಮನೀಶ್ ಸಿಸೋಡಿಯಾ, ಬಿಜೆಪಿಯಿಂದ ತರವಿಂದರ್ ಸಿಂಗ್ ಮತ್ತು ಕಾಂಗ್ರೆಸ್ನಿಂದ ಸಿಂಗ್ ಮಾರ್ವಾ ಜಂಗ್ಪುರದಿಂದ ಸ್ಪರ್ಧಿಸಿದ್ದರು. ಹಿರಿಯ ಎಎಪಿ ನಾಯಕ ಸತ್ಯೇಂದ್ರ ಜೈನ್ ಮತ್ತು ಬಿಜೆಪಿ ಅಭ್ಯರ್ಥಿ ಕರ್ನೈಲ್ ಸಿಂಗ್ ಶಕುರ್ ಬಸ್ತಿಯಿಂದ ಸ್ಪರ್ಧಿಸಿದ್ದರು,(ಏಜೆನ್ಸೀಸ್).