ದೆಹಲಿ ಚುನಾವಣೆ ಫಲಿತಾಂಶ; ಜನರ ತೀರ್ಪು ಸ್ವೀಕರಿಸುವೆ: ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ | Delhi Election

dk - 2025-02-08T151813.925
Published on

Delhi Election ನವದೆಹಲಿ: ಬಿಜೆಪಿಯಿಂದ ಹೀನಾಯ ಸೋಲು ಅನುಭವಿಸಿದ ತಮ್ಮದೇ ಆದ ಕ್ಷೇತ್ರವನ್ನು ಕಳೆದುಕೊಂಡ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಜನರ ತೀರ್ಪನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಕೇಜ್ರಿವಾಲ್​, "ದೆಹಲಿ ಚುನಾವಣೆಯ ಫಲಿತಾಂಶಗಳನ್ನು ಇಂದು ಘೋಷಿಸಲಾಗಿದೆ ಮತ್ತು ನಾವು ಜನರ ತೀರ್ಪನ್ನು ಸ್ವೀಕರಿಸುತ್ತೇವೆ. ಜನರ ನಿರ್ಧಾರವು ಅತ್ಯುನ್ನತವಾಗಿದೆ. ಬಿಜೆಪಿಯ ಗೆಲುವಿಗೆ ನಾನು ಅಭಿನಂದಿಸುತ್ತೇನೆ. ಅವರಿಗೆ ಬಹುಮತ ನೀಡಿದ ಜನರ ಭರವಸೆಗಳು ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 47, ಎಎಪಿ 23, ಕಾಂಗ್ರೆಸ್​ 0 ಸ್ಥಾನಗಳು ಗೆದಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net