Delhi Election | ನಾಮಪತ್ರ ಸಲ್ಲಿಸಲು ಹೋದ ಸಿಎಂ ಅತಿಶಿ ವಾಪಸ್​​; ನಾಳೆ ನಾಮಿನೇಷನ್​ ಮಾಡಲು ತೀರ್ಮಾನ.. ಕಾರಣ ಏನು ಗೊತ್ತಾ?

Untitled design - 2025-01-13T173734.378
Published on

ನವದೆಹಲಿ: ವಿಧಾನಸಭಾ ಚುನಾವಣೆ(Delhi Election) ಹಿನ್ನೆಲೆ ರಾಷ್ಟ್ರರಾಜಧಾನಿ ರಣರಂಗವಾಗಿ ಮಾರ್ಪಟ್ಟಿದೆ. ಆರೋಪ-ಪ್ರತ್ಯಾರೋಪಗಳ ನಡುವೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. ಇಂದು ಅಂದರೆ ಸೋಮವಾರ(ಜನವರಿ 13) ಮುಖ್ಯಮಂತ್ರಿ ಅತಿಶಿ ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಬಯಸಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ನಾಳೆ ನಾಮಪತ್ರ ಸಲ್ಲಿಸಿದ್ದಾರೆ.

ಅಸಲಿಗೆ, ಅತಿಶಿ ಅವರು ನಾಮಪತ್ರ ಸಲ್ಲಿಸಲು ವಿಳಂಬವಾದ ಕಾರಣ ತೊಂದರೆಯಾಗಿದೆ ಎಂದು ಹೇಳಲಾಗುತ್ತಿದೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೊಂದಿಗೆ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ಅತಿಶಿ ನಾಮಪತ್ರ ಸಲ್ಲಿಸುವ ಕಚೇರಿಯಿಂದ ಹೊರಟರು. ಆದರೆ ವಿಳಂಬವಾದ ಕಾರಣ ಚುನಾವಣಾ ಆಯುಕ್ತರನ್ನು ಭೇಟಿ ಮಾಡಬೇಕಾಯಿತು. ಮೂಲಗಳ ಪ್ರಕಾರ ಸಿಎಂ ಅತಿಶಿ ನಾಳೆ ಕಲ್ಕಾಜಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಅವರು ಈ ಕ್ಷೇತ್ರದ ಹಾಲಿ ಶಾಸಕರೂ ಹೌದು.

ಕಾಂಗ್ರೆಸ್‌ನ ಅಲ್ಕಾ ಲಾಂಬಾ ಕೂಡ ಮಂಗಳವಾರ (ಜನವರಿ 14) ನಾಮಪತ್ರ ಸಲ್ಲಿಸಲಿದ್ದಾರೆ. ದೆಹಲಿಯ ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಅತಿಶಿ ವಿರುದ್ಧ ಕಾಂಗ್ರೆಸ್ ಅಲ್ಕಾ ಲಾಂಬಾ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ.

ಮತ್ತೊಂದೆಡೆ ಆಮ್ ಆದ್ಮಿ ಪಕ್ಷದ ಪಟ್ಪರ್‌ಗಂಜ್ ಅಭ್ಯರ್ಥಿ ಅವಧ್ ಓಜಾ ಅವರ ಮತ ವರ್ಗಾವಣೆಯ ವಿಷಯ ಇತ್ಯರ್ಥಗೊಂಡಿದೆ. ಸೋಮವಾರ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು ಚುನಾವಣಾ ಆಯೋಗವನ್ನು ಭೇಟಿ ಮಾಡಿದರು. ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ನಂತರ ಕೇಜ್ರಿವಾಲ್ ಅವರು ಓಜಾ ಅವರ ಮತವನ್ನು ವರ್ಗಾಯಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಕೃತಜ್ಞತೆ ಸಲ್ಲಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net