ಬಿಜೆಪಿಯಿಂದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಫಿಲ್ಮಿ ಪೋಸ್ಟರ್ ರಿಲೀಸ್!

aap
Published on

ನವದೆಹಲಿ: ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಮತ್ತು ಸಂಸದ ಸಂಜಯ್ ಸಿಂಗ್ ಅವರೊಂದಿಗೆ ಭೇಟಿ ನೀಡಿದ್ದಾರೆ.

ಕೇಜ್ರಿವಾಲ್ ಇದೇ ದಿನ ತಮ್ಮ ಪ್ರಚಾರ ಚಟುವಟಿಕೆಗಳಿಗೆ ವೇಗ ನೀಡಿದ್ದಾರೆ. ಆದರೆ ಅವರು ಮತ್ತೆ ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ, ಬಿಜೆಪಿ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕ್ರೇಜಿವಾಲ್​ ಅವರನ್ನು ಗುರಿಯಾಗಿಸಿ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು "ಭ್ರಷ್ಟಾಚಾರ್ ಕಾ ಬೇತಾಜ್ ಬಾದಶಾ" (ಭ್ರಷ್ಟಾಚಾರದ ಕಿರೀಟವಿಲ್ಲದ ರಾಜ) ಎಂದು ಪೋಸ್ಟರ್​ ಹಾಕುವ ಮೂಲಕ ದೆಹಲಿ ಬಿಜೆಪಿಯ ಅಧಿಕೃತ ಎಕ್ಸ್ ಪೇಜ್​ನಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ ಅಲ್ಲದೆ ಭ್ರಷ್ಟ ವ್ಯಕ್ತಿ ಜೈಲಿನಲ್ಲಿರಲಿ ಅಥವಾ ಹೊರಗಿರಲಿ ಆ ಭ್ರಷ್ಟ ವ್ಯಕ್ತಿ ಭ್ರಷ್ಟನಾಗಿಯೇ ಉಳಿಯುತ್ತಾನೆ! ಎಂದು ಬರೆದಿದ್ದಾರೆ.

ಜಾಮೀನಿನ ಮೇಲೆ ಕೇಜ್ರಿವಾಲ್ ತಮ್ಮ ಶೈಲಿಯಿಂದಾಗಿ ಚುನಾವಣಾ ಪ್ರಚಾರದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಎಂದು ಬಿಜೆಪಿಗೆ ಭಯ ಇರುವುದರಿಂದ ಭ್ರಷ್ಟಾಚಾರದ ವಿಷಯದಲ್ಲಿ ಎಎಪಿ ಮತ್ತು ಕೇಜ್ರಿವಾಲ್ ಅವರನ್ನು ಎದುರಿಸಲು ಬಿಜೆಪಿ ಮುಂದಾಗಿದ್ದು ಎನ್ನಲಾಗಿದೆ.

ಇದಲ್ಲದೆ, ಎಎಪಿಗೆ 'ಖಾಲಿಸ್ತಾನಿ ನಿಧಿ'ಯ ವಿಷಯವನ್ನು ಹೈಲೈಟ್ ಮಾಡಲು ಬಿಜೆಪಿ ಉದ್ದೇಶಿಸಿದೆ. ದೆಹಲಿಯ ಜೊತೆಗೆ, ಎಎಪಿ ಮತ್ತು ಕೇಜ್ರಿವಾಲ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ರಾಷ್ಟ್ರೀಯ ಭದ್ರತೆಯ ಕಾಳಜಿಗಳ ಬಗ್ಗೆ ಪಂಜಾಬ್‌ಗೆ ರಾಜಕೀಯ ಸಂದೇಶವನ್ನು ಕಳುಹಿಸಲು ಬಿಜೆಪಿ ಪ್ರಯತ್ನಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net