More

    ನೀಟ್​-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 13 ಮಂದಿ ಬಂಧನ!

    ಪಾಟ್ನಾ: ಮೇ 5 ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್-ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಇದುವರೆಗೆ 13 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ:  ಅಪಘಾತವಾದ ವಾಹನದಿಂದ ಗೋಣಿಚೀಲಕ್ಕೆ ತುಂಬಿಸುತ್ತಿದ್ದ ದಾಖಲೆ ಇಲ್ಲದ ಹಣ ವಶಕ್ಕೆ: ಎಷ್ಟು ಗೊತ್ತಾ?

    ಬಂಧಿತರಲ್ಲಿ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದ್ದಾರೆ ಎಂದು ವರದಿಯಾಗಿದೆ. “ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರಕರಣದ ತನಿಖೆಯನ್ನು ಬಿಹಾರ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ಘಟಕ (ಇಒಯು) ವಹಿಸಿಕೊಂಡಿದೆ.

    “ಈ ಪ್ರಕರಣದ ತನಿಖೆಯನ್ನು ಪಾಟ್ನಾ ಪೊಲೀಸರ ವಿಶೇಷ ತಂಡವು ಇಲ್ಲಿಯವರೆಗೆ ತನಿಖೆ ನಡೆಸುತ್ತಿತ್ತು. ಇದುವರೆಗೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿದೆ.

    ಬಂಧಿತರಲ್ಲಿ ಒಬ್ಬರು ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ನಡೆಸಿದ್ದ ಶಿಕ್ಷಕರ ನೇಮಕಾತಿ ಪರೀಕ್ಷೆ (ಟಿಆರ್‌ಇ)-3 ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಶಂಕಿಸಲಾಗಿದೆ ಎಂದು ಇಒಯು ಪ್ರಕಟಣೆ ತಿಳಿಸಿದೆ.

    “ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಹಾಗೂ ಬಂಧಿತ ಆರೋಪಿಗಳಿಂದ ಇಒಯು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು. ಎಲೆಕ್ಟ್ರಾನಿಕ್ ಉಪಕರಣಗಳು ವಶಪಡಿಸಿಕೊಂಡಿದ್ದು ವಿಚಾರಣೆ ಮುಂದುವರೆದಿದೆ.

    ಮೋದಿಗೆ ಪ್ರಜ್ವಲ್ ರೇವಣ್ಣ “ಕಾಂಪ್ಲಾನ್​ ಬಾಯ್”: ಕಾಂಗ್ರೆಸ್​ ಕೊಟ್ಟ ಕಾರಣ ಹೀಗಿದೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts