More

    ಪಟನಾ ಎದುರು ಹರಿಯಾಣ ಪಲ್ಟಿ: ಪೈರೇಟ್ಸ್‌ಗೆ 4ನೇ ಗೆಲುವು

    ನೋಯ್ಡ: ಮಂಜೀತ್ (13) ನಡೆಸಿದ 11 ಯಶಸ್ವಿ ರೈಡಿಂಗ್‌ಗಳ ನೆರವಿನಿಂದ ಮೂರು ಬಾರಿ ಚಾಂಪಿಯನ್ ಪಟನಾ ಪೈರೇಟ್ಸ್ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಹರಿಯಾಣ ಸ್ಟೀಲರ್ಸ್‌ ಎದುರು 46-33ರಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಪಟನಾ ಟೂರ್ನಿಯಲ್ಲಿ 4ನೇ ಗೆಲುವು ಒಲಿಸಿಕೊಂಡಿದೆ.
    ನೋಯ್ಡ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಚರಣದ ಮೊದಲ ಪಂದ್ಯದಲ್ಲಿ ಪಟನಾ ಪೈರೇಟ್ಸ್ ಏಕಪಕ್ಷೀಯ ಪ್ರಾಬಲ್ಯ ಸಾಧಿಸಿತು.

    ಮೊದಲಾರ್ಧದಲ್ಲಿ 18-15 ಮುನ್ನಡೆ ಸಾಧಿಸಿದ ಪಟನಾ, ಹರಿಯಾಣ ಸ್ಟೀಲರ್ಸ್‌ ತಂಡವನ್ನು ಒಮ್ಮೆ ಆಲೌಟ್ ಮಾಡಿತು. ದ್ವಿತಿಯಾರ್ಧದಲ್ಲಿ ಪ್ರಾಬಲ್ಯ ಮುಂದುವರಿಸಿದ ಪಟನಾ ಪೈರೇಟ್ಸ್‌ನ ರೈಡರ್ ಮಂಜಿತ್‌ಗೆ, ಸಚಿನ್ (8), ಡಿೆಂಡರ್ ಕೃಷ್ಣ (5) ಉತ್ತಮ ಸಾಥ್ ನೀಡಿದರು. ಅಂತಿಮ 10 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಆಲೌಟ್ ಆಗುವ ಮೂಲಕ ಹರಿಯಾಣ ಸ್ಟೀಲರ್ಸ್‌ ದ್ವಿತೀಯಾರ್ಧದಲ್ಲೂ ನೀರಸ ನಿರ್ವಹಣೆ ತೋರಿತು ಪ್ರದರ್ಶಿಸಿತು. ಹರಿಯಾಣ ಪರ ವಿನಯ್ (12) ಏಕಾಂಗಿ ಹೋರಾಟ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts