More

    5 ವರ್ಷ ಅವಧಿಗೆ ಮೆಟ್ರೋ ನಿಲ್ದಾಣಗಳ ಹೆಸರಿನ ಹಕ್ಕು; ಆದಾಯ ಹೆಚ್ಚಿಸಲು ಬಿಎಂಆರ್​ಸಿಎಲ್​ ಚಿಂತನೆ

    ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಿಗೆ ಹೆಸರಿಡುವ ಹಕ್ಕನ್ನು 5 ವರ್ಷಗಳ ಅವಧಿಗೆ ನೀಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದ್ದು, ಈ ಮೂಲಕ ಹೆಚ್ಚಿನ ಆದಾಯ ಗಳಿಸಿಲು ಚಿಂತನೆ ನಡೆಸಿದೆ.

    ಹೆಸರಿಡುವುದು, ಮಾರಾಟ ಪ್ರದೇಶ ಒದಗಿಸುವುದು, ಜಾಹೀರಾತು ಪ್ರದರ್ಶನಕ್ಕೆ ಸ್ಥಳಾವಕಾಶ, ನಿಲ್ದಾಣದ ಪೇಂಟಿಂಗ್​ ಹಕ್ಕು ವರ್ಗಾವಣೆ ಇತ್ಯಾದಿಗೆ ಅವಕಾಶ ನೀಡಲಾಗುವುದು ಎಂದು ಬಿಎಂಆರ್​ಸಿಎಲ್​ ವೆಬ್​ಸೈಟ್​ನಲ್ಲಿ ತಿಳಿಸಿದೆ.

    ಸದ್ಯದ ನೀತಿ ಪ್ರಕಾರ, 30 ವರ್ಷಗಳ ಅವಧಿಗೆ ಹೆಸರಿನ ಹಕ್ಕು, ಸ್ಟೇಷನ್​ಗೆ ನೇರ ಪ್ರವೇಶ, ವಾಣಿಜ್ಯ ಸ್ಥಳ ಬಳಕೆಗೆ ಬಿಎಂಆರ್​ಸಿಎಲ್​ ಕಾಪೋರ್ರೇಟ್​ ಕಂಪನಿಗಳಿಂದ 100 ಕೋಟಿ ರೂ. ಪಡೆಯುತ್ತಿದೆ. ಈಗಾಗಲೇ ಹಳದಿ ಮಾರ್ಗದಲ್ಲಿ ಮೂರು ಸಂಸ್ಥೆ ಹಾಗೂ ಗುಲಾಬಿ ಮಾರ್ಗದಲ್ಲಿ 1 ಸಂಸ್ಥೆ ಜತೆಗೆ ಹೆಸರಿಡುವ ಹಕ್ಕು ವರ್ಗಾಯಿಸುವ ಸಂಬಂಧ ಒಪ್ಪಂದ ಮಾಡಿಕೊಂಡಿದೆ.

    ಸುದೀರ್ಘ ಅವಧಿಗೆ ದೊಡ್ಡ ಮೊತ್ತ ಕೊಟ್ಟು ಒಪ್ಪಂದ ಮಾಡಿಕೊಳ್ಳಲು ಕಂಪನಿಗಳು ಹಿಂದೇಟು ಹಾಕುತ್ತಿರುವ ಹಿನ್ನೆಲೆ 5 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈಗಾಗಲೇ ಕಾರ್ಯಾರಂಭಿಸಿರುವ ಹಾಗೂ ಮುಂಬರುವ ನಿಲ್ದಾಣಗಳಿಗೆ ಇದು ಅನ್ವಯಿಸಲಿದೆ. ಉನ್ನತ ಅಧಿಕಾರ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಬಿಎಂಆರ್​ಸಿಎಲ್​ ಮೂಲಗಳು ತಿಳಿಸಿವೆ.

    ಬ್ರ್ಯಾಂಡ್​ ಮೌಲ್ಯ ಹೆಚ್ಚಳ:

    ಹೆಸರಿನ ಹಕ್ಕು ಪಡೆಯುವುದರಿಂದ ಕಾಪೋರ್ರೇಟ್​ ಸಂಸ್ಥೆಗಳ ಬ್ರ್ಯಾಂಡ್​ ಮೌಲ್ಯ ಹೆಚ್ಚುತ್ತದೆ. ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನು ಇನ್ಫೋಸಿಸ್​ ಫೌಂಡೇಶನ್​ (100 ಕೋಟಿ ರೂ.), ಹೆಬ್ಬಗೋಡಿ ಮೆಟ್ರೋ ನಿಲ್ದಾಣವನ್ನು ಬಯೋಕಾನ್​ ಫೌಂಡೇಶನ್​ (65 ಕೋಟಿ ಕೋಟಿ ರೂ.), ಬೊಮ್ಮಸಂದ್ರ ಮೆಟ್ರೋ ನಿಲ್ದಾಣವನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್​ ಫೌಂಡೇಶನ್​ (75 ಕೋಟಿ ರೂ.) ನಾಮಕರಣ ಒಪ್ಪಂದ ಮಾಡಿಕೊಂಡಿದೆ. ಲಕ್ಕಸಂದ್ರ ನಿಲ್ದಾಣದಿಂದ ಬಾಷ್​ ಲಿಮಿಟೆಡ್​ಗೆ ನೇರ ಸಂಪರ್ಕ ಕಲ್ಪಿಸಲು 10 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts