ಚುನಾವಣೆ: ತೆಲಂಗಾಣದಲ್ಲಿ ಈ ಬಾರಿ 10 ಹೆಚ್ಚು ಸ್ಥಾನ ಗೆಲ್ಲಲಿದೆ ಬಿಜೆಪಿ! ಅಮಿತ್ ಷಾ ವಿಶ್ವಾಸ

madhu
Published on

ತೆಲಂಗಾಣ: ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ತೆಲಂಗಾಣದಲ್ಲಿ ನಾವು 10 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ದಕ್ಷಿಣ ಭಾರತದಲ್ಲೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್​ ಷಾ ಅವರು. ಎನ್‌ಡಿಎ ಮತ್ತು ಬಿಜೆಪಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡರಲ್ಲೂ ಭರ್ಜರಿ ಗೆಲುವು ಸಾಧಿಸಲಿದೆ. ಜೂನ್ 4 ರಂದು ಫಲಿತಾಂಶ ಬಂದಾಗ, ದಕ್ಷಿಣ ಭಾರತದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಯಾಗಲಿದೆ. ತೆಲಂಗಾಣದಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಅಮಿತ್ ಷಾ ಹೇಳಿದರು.

ಆಂಧ್ರಪ್ರದೇಶ & ತೆಲಂಗಾಣದಲ್ಲಿ ಬಿಜೆಪಿ ಮುನ್ನಡೆ: "ಲೋಕಸಭಾ ಚುನಾವಣೆಯ 3 ಹಂತಗಳಲ್ಲಿ, ಎನ್‌ಡಿಎ ಸುಮಾರು 200 ಸ್ಥಾನಗಳನ್ನು ತಲುಪಿದೆ. 4 ನೇ ಹಂತವು ಎನ್‌ಡಿಎಗೆ ತುಂಬಾ ಒಳ್ಳೆಯದು. ಈ ಹಂತದಲ್ಲಿ ನಾವು ಗರಿಷ್ಠ ಯಶಸ್ಸನ್ನು ಪಡೆಯುತ್ತೇವೆ ಮತ್ತು ನಾವು ನಮ್ಮ ಗುರಿಯಾದ '400 ಪಾರ್' ಕಡೆಗೆ ಸಾಗುತ್ತೇವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡರಲ್ಲೂ ಎನ್‌ಡಿಎ ಮತ್ತು ಬಿಜೆಪಿ ಮುನ್ನಡೆ ಸಾಧಿಸಲಿವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ನಾವು ತೆಲಂಗಾಣದಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದೇವೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಬ್ಯಾಂಕಾಕ್, ಥಾಯ್ಲೆಂಡ್ ಗೆ ತೆರಳುವ ರಾಹುಲ್ ಗಾಂಧಿ: ಈ ಚುನಾವಣೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ, ಒಂದು ಕಡೆ ನರೇಂದ್ರ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಎನ್‌ಡಿಎ ಮತ್ತೊಂದು ಕಡೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಇಂಡಿಯಾ ಮೈತ್ರಿಕೂಟವಿದೆ. ಒಂದೆಡೆ ವಿಹಾರಕ್ಕೆಂದು ಬ್ಯಾಂಕಾಕ್, ಥಾಯ್ಲೆಂಡ್ ಗೆ ತೆರಳುವ ರಾಹುಲ್ ಗಾಂಧಿ ಇನ್ನೊಂದೆಡೆ ಮೋದಿ, ದೀಪಾವಳಿಯಂದು ಒಂದು ದಿನ ಬಿಡುವು ಮಾಡಿಕೊಂಡು ಯೋಧರೊಂದಿಗೆ ಹಬ್ಬ ಆಚರಿಸುತ್ತಾರೆ. ಒಂದು ಕಡೆ, ಇಂಡಿಯಾ ಮೈತ್ರಿಕೂಟ ತುಷ್ಟೀಕರಣ ರಾಜಕೀಯ ಮಾಡುತ್ತದೆ. ಮತ್ತೊಂದೆಡೆ, ಎನ್‌ಡಿಎ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಬಗ್ಗೆ ಮಾತನಾಡುತ್ತದೆ. ನೀವು ಈ ಎರಡು ಗುಂಪುಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು ಎಂದು ಅಮಿತ್ ಷಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net