ಬರ್ತ್​​ಡೇ ಸಂಭ್ರಮದ ವೇಳೆ ತೂರಿ ಬಂದ ಬುಲೆಟ್ ವ್ಯಕ್ತಿಯ ಮುಖವನ್ನೇ ಸೀಳಿತು!

birthday party turns tragic 221
Published on

ನವದೆಹಲಿ: ಹುಟ್ಟು ಹಬ್ಬದ ನಿಮಿತ್ತ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ವ್ಯಕ್ತಿಯೊಬ್ಬ ಹಾರಿಸಿದ ಗುಂಡು ಹಾರಿಸಿದ್ದಾನೆ. ಪರಿಣಾಮ ಮತ್ತೋರ್ವನ ಮುಖಕ್ಕೆ ಗುಂಡು ತಗುಲಿ ಆಸ್ಪತ್ರೆ ಸೇರುವಂತಾಗಿದೆ. ಈ ಘಟನೆ ಫತೇಪುರ್ ಬೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಜೋನಾಪುರ ಗ್ರಾಮದಲ್ಲಿ ಜೋನಾಪುರ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತನನ್ನು ಪ್ರಮೋದ್ ಎಂದು ಗುರುತಿಸಲಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್​ ಟ್ರಾಮಾ ಸೆಂಟರ್​ಗೆ ದಾಖಲಿಸಲಾಗಿದೆ. ರಣಪಾಲ್ ಎಂಬಾತ ಹುಟ್ಟು ಹಬ್ಬದ ಸಂಭ್ರಮಾಚರಣೆಯ ವೇಳೆ ಹಲವು ಸುತ್ತು ಗುಂಡು ಹಾರಿಸಿದಿ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸದ್ಯ ಘಟನೆಯ ಬಗ್ಗೆ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಪ್ರಮೋದ್​ನ ಸಹೋದರ ವಿನೋದ್ ಹೇಳಿರುವ ಮಾಹಿತಿ ಪ್ರಕಾರ, ಪಾರ್ಟಿ ನಡೆಯುತ್ತಿದ್ದ ಸಂದರ್ಭ ಆರೋಪಿ 7-8 ಜನರೊಂದಿಗೆ ಆಗಮಿಸಿದ್ದಾನೆ. ನಂತರ ನೇರವಾಗಿ ಟೇರಸ್​ಗೆ ಹೋಗಿ ಗುಂಡು ಹಾರಿಸಿದ್ದಾನೆ. ಈ ವೇಳೆ ಒಂದು ಗುಂಡು ಪ್ರಮೋದ್​ನ ಮುಖಕ್ಕೆ ತಾಗಿದೆ.

ಒಂದೆರಡು ಬಾರಿ ಗುಂಡು ಹಾರಿಸಿದಾಗಲೇ ಅವರನ್ನು ಹೊರ ಹೋಗುವಂತೆ ಸೂಚಿಸಿದ್ದೆವು. ಈ ವೇಳೆ ಮತ್ತೂ 2 ಸುತ್ತು ಗುಂಡು ಹಾರಿಸಿದ್ದು, ಆ ಗುಂಡು ನನ್ನ ಸಹೋದರ ಮುಖಕ್ಕೆ ತಗುಲಿದೆ ಎಂದು ವಿನೋದ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net