

ಲಂಡನ್: ಬ್ರಿಟನ್ ಪ್ರವಾಸ ಕೈಗೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಲಂಡನ್ ನಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭಾರತದ ರಕ್ಷಣಾ ಸಚಿವರೊಬ್ಬರು 22 ವರ್ಷಗಳ ನಂತರ ಬ್ರಿಟನ್ ಭೇಟಿ ನೀಡಿದಂತಾಗಿದೆ.
ಎರಡೂ ದೇಶಗಳ ನಡುವೆ ಮುನ್ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ ಸದ್ಯದಲ್ಲಿಯೇ ಯಶಸ್ವಿಯಾಗಿ ಮುಕ್ತಾಯವಾಗಲಿದೆ ಎಂದು ರಿಷಿ ಸುನಕ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ರಿಷಿ ಸುನಕ್, ರಕ್ಷಣಾ ಸಚಿವ ಗ್ರಾಂಟ್ ಶಾಪ್ಸ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಕ್ಯಾಮರೂನ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದಭರ್ದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ಪಾಲುದಾರಿಕೆ, ಯುದ್ಧ ವಿಮಾನಗಳು ಮತ್ತು ಇತರೆ ಸೇನಾ ಸಲಕರಣೆಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಭಾರತ ಮತ್ತು ಬ್ರಿಟನ್ ದ್ವಿಪಕ್ಷಿಯ ಸಂಬಂಧ ವೃದ್ಧಿ ಉದ್ದೇಶದಿಂದ ಕೈಗೊಳ್ಳಲಾಗಿರುವ ಈ ಭೇಟಿ ಸಂದರ್ಭದಲ್ಲಿ ಕೈಗಾರಿಕಾ ಸಹಕಾರ, ಇಂಡೋ-ಫೆಸಿಫಿಕ್, ಪಶ್ಚಿಮ ಏಪ್ಯಾ ಮತ್ತು ಉಕ್ರೇನ್ ಸ್ಥಿತಿಗತಿ ಕುರಿತು ಚರ್ಚೆ ನಡೆಸಿದ್ದಾರೆ.
ರಾಜನಾಥ್ ಸಿಂಗ್ ಅವರು ಇಂಗ್ಲೆಂಡ್-ಇಂಡಿಯಾ ಡಿಫೆನ್ಸ್ ಇಂಡಸ್ಟ್ರಿ ಸಿಇಒಗಳ ರೌಂಡ್ಟೇಬಲ್ನ ಸಹ ಅಧ್ಯಕ್ಷತೆಯನ್ನು ತಮ್ಮ ಪ್ರತಿರೂಪವಾದ ಗ್ರಾಂಟ್ ಶಾಪ್ಸ್ ಅವರೊಂದಿಗೆ ಮಾತುಕತೆ ನಡೆಸಿದರು. ಸಹ ಉತ್ಪಾದನೆಯ ಮೇಲೆ ಕೇಂದ್ರೀಕರಿಸಿದ ಬ್ರಿಟನ್ನೊಂದಿಗೆ ಭಾರತವು ಸಮೃದ್ಧ ರಕ್ಷಣಾ ಪಾಲುದಾರಿಕೆಯನ್ನು ಕಲ್ಪಿಸುತ್ತದೆ ಎಂದು ಹೇಳಿದರು.
ಈ ದುಂಡುಮೇಜಿನ ಸಭೆಯಲ್ಲಿ ಯುಕೆ ರಕ್ಷಣಾ ಉದ್ಯಮದ ಹಲವಾರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಯುಕೆ ರಕ್ಷಣಾ ಸಚಿವಾಲಯ, ಯುಕೆ-ಇಂಡಿಯಾ ಬಿಸಿನಸ್ ಕೌನ್ಸಿಲ್ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಚಿವರ ಜೊತೆ ರಕ್ಷಣಾ ಇಲಾಖೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಇದ್ದಾರೆ.