

ಸೊರಬ: ಹಳೇಸೊರಬದ ಗೌರಿಕೆರೆ ಮಠ ಸಮೀಪದ ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ಅಪರಿಚಿತ ವಾಹನ ಡಿಕ್ಕಿಹೊಡೆದು ಜಿಂಕೆ ಮೃತಪಟ್ಟಿದೆ. ಪಟ್ಟಣದ ಹೊರವಲಯದ ಸೊರಬ-ತವನಂದಿ ಮುಖ್ಯರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಜಿಂಕೆ ಗಾಯಗೊಂಡು ಸಾವಿಗೀಡಾಗಿದೆ. ಬೆಳಗ್ಗೆ ಜಮೀನಿಗೆ ತೆರಳುವ ರೈತರು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಿಬ್ಬಂದಿ ಭೇಟಿ ನೀಡಿದ್ದರು.