ಮೆಟಾ AI ಗೆ ಧ್ವನಿಯಾದ ಬಾಲಿವುಡ್ ಕ್ವೀನ್ ದೀಪಿಕಾ... ಡಿಪ್ಪಿಯೇ ಮೊದಲು!Deepika Padukone

deepika padukone
Published on

Deepika Padukone: ಬಾಲಿವುಡ್​ನ ತಾರೆ ಎಂದು ಗುರುತಿಸಿಕೊಂಡಿರುವ ದೀಪಿಕಾ ಪಡುಕೋಣೆ ಮೆಟಾ ಜೊತೆ ಪಾಲುದಾರಿಕೆ ಹೊಂದಿದ್ದು, ಹಲವಾರು ದೇಶಗಳಲ್ಲಿ AI ಆವೃತ್ತಿಯ ಹೊಸ ಧ್ವನಿಯಾಗಿದ್ದಾರೆ. ಹಾಗಾಗಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮಾಡುವ ಮೂಲಕ ಅಧೀಕೃತವಾಗಿ ಸಹಯೋಗವನ್ನು ಘೋಷಿಸಿದ್ದಾರೆ.

ಹೊಸ ಉದ್ಯಮದ ಬಗ್ಗೆ ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹರ್ಷ ವ್ಯಕ್ತಪಡಿಸಿದ್ದು, ಹಾಯ್​ ನಾನು ದೀಪಿಕಾ ಪಡುಕೋಣೆ, ನಾನು ಮೆಟಾ AI ಹೊಸ ಧ್ವನಿ. ಇದು ತುಂಬಾ ಅದ್ಭುತವಾಗಿದೆ ಎಂದು ನಾನು ಬಯಸುತ್ತೇನೆ. ನಾನು ಈಗ ಮೆಟಾ AI ನ ಭಾಗವಾಗಿದ್ದೇನೆ. ನೀವು ಭಾರತ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಾದ್ಯಂತ ನನ್ನ ಧ್ವನಿಯೊಂದಿಗೆ ಚಾಟ್ ಮಾಡಬಹುದು. ಇದನ್ನು ಪ್ರಯತ್ನಿಸಿ ಮತ್ತು ನಿಮ್ಮ ಅಭಿಪ್ರಾಯವನ್ನು ನನಗೆ ತಿಳಿಸಿ!" ಎಂದು ದೀಪಿಕಾ ಬರೆದು ಪೋಸ್ಟ್​ ಮಾಡಿದ್ದಾರೆ.

AI ಸಹಾಯಕರಿಗೆ ಧ್ವನಿ ನೀಡಿದ ಮೊದಲ ಭಾರತೀಯ ಸೆಲೆಬ್ರಿಟಿಗಳಲ್ಲಿ ದೀಪಿಕಾ ಕೂಡ ಒಬ್ಬರಾಗಿದ್ದು, ಘೋಷಣೆಯು ಮೆಟಾದ ವಿಕಸನಗೊಳ್ಳುತ್ತಿರುವ ಡಿಜಿಟಲ್​ ಅನುಭವಕ್ಕೆ ಪರಿಚಿತ ಮತ್ತು ಸ್ನೇಹಪರ ಧ್ವನಿಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಇತ್ತೀಚಿನ ದಿನಗಳಲ್ಲಿ ದಿ ಲಿವ್ ಲವ್ ಲಾಫ್ (LLL) ಫೌಂಡೇಶನ್‌ನ ಸಂಸ್ಥಾಪಕಿ ಆಗಿ ಕಾರ್ಯನಿರ್ವಹಿಸುತ್ತಿರುವ ದೀಪಿಕಾ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ನೇಮಿಸಿದೆ.

ಇದರ ಮುಖ್ಯ ಉದ್ದೇಶ ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶವಾಗಿ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಭಾರತದ ನಿರಂತರ ಪ್ರಯತ್ನಗಳಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದೆ.

ಮಾನಸಿಕ ಆರೋಗ್ಯ ಜಾಗೃತಿಗಾಗಿ ಈ ಮಹತ್ವದ ಪಾತ್ರವನ್ನು ವಹಿಸಿದ್ದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ದೀಪಿಕಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ನೇಮಕಗೊಂಡಿರುವುದು ನನಗೆ ತುಂಬಾ ಗೌರವ ತಂದು ಕೊಟ್ಟಿದೆ ಎಂದು ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

ಪೋಸ್ಟ್​ನಲ್ಲಿ, ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ ನಮ್ಮ ರಾಷ್ಟ್ರವು ಮಾನಸಿಕ ಆರೋಗ್ಯವನ್ನು ಸಾರ್ವಜನಿಕ ಆರೋಗ್ಯದ ಹೃದಯಭಾಗದಲ್ಲಿ ಇರಿಸಲು ಅರ್ಥಪೂರ್ಣವಾದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು "ಸಾರ್ವಜನಿಕ ಆರೋಗ್ಯದ ಹೃದಯಭಾಗದಲ್ಲಿ ಮಾನಸಿಕ ಆರೋಗ್ಯವನ್ನು ಇರಿಸಲು ಅರ್ಥಪೂರ್ಣ ಕ್ರಮಗಳನ್ನು" ಹೇಗೆ ತೆಗೆದುಕೊಂಡಿದೆ ಎಂಬುದನ್ನು ಅವರು ಒತ್ತಿ ಹೇಳಿದರು. ಭಾರತದ ಮಾನಸಿಕ ಆರೋಗ್ಯ ಚೌಕಟ್ಟನ್ನು ಮತ್ತಷ್ಟು ಬಲಪಡಿಸಲು ಕೆಲಸ ಮಾಡಲು ನಾನು ಇಚ್ಛಿಸುತ್ತೇನೆ ಎಂದು ದೀಪಿಕಾ ಅಭಿಪ್ರಾಯ ಸೂಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net