B.Tech ಪದವೀಧರನಿಗೆ ಟ್ರೇಡಿಂಗ್​​ ಕಂಪನಿಯಲ್ಲಿ ಬರೋಬ್ಬರಿ 4 ಕೋಟಿ ರೂ ಸಂಬಳ! ಇದು ನಿಜವೇ?

Bbau (18)
Published on

ನವದೆಹಲಿ: ಎನ್‌ಐಟಿ(NIT) ಕೈಗಾರಿಕಾ ಮತ್ತು ಉತ್ಪಾದನಾ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ 4 ಕೋಟಿ ಮೌಲ್ಯದ ಆಫ್-ಕ್ಯಾಂಪಸ್ ಉದ್ಯೋಗ ಪ್ಯಾಕೇಜ್ ಪಡೆದಿದ್ದಾನೆ ಎಂದು ರೆಡ್ಡಿಟ್ ಪೋಸ್ಟ್ ಹೇಳಿಕೊಂಡಿದೆ. ಇದೀಗ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ​ ಬಾರೀ ವೈರಲ್ ಆಗಿದೆ.

ಹೌದು, ಎನ್‌ಐಟಿಯ ಬಿ.ಟೆಕ್​ ವಿದ್ಯಾರ್ಥಿ ಕೈಗಾರಿಕಾ ಮತ್ತು ಉತ್ಪಾದನಾ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯೊಬ್ಬನಿಗೆ 4 ಕೋಟಿಯ ಬೃಹತ್ ಉದ್ಯೋಗ ಪ್ಯಾಕೇಜ್ ಸಿಕ್ಕಿದೆ ಎಂದು ಕಾಲೇಜಿ ಕ್ಯಾಂಪಸ್​ ಹೆಡ್​ಲೆಟರ್​​ವೊಂದನ್ನು ಪೋಸ್ಟ್​ ಹೇಳುತ್ತಿದೆ. ಇದು ನಿಜವೋ ಅಥವಾ ಇನ್ನೊಂದು ವೈರಲ್ ಕಥೆಯೋ ಎಂದು ಚರ್ಚಿಸುತ್ತಿದ್ದು, ನೆಟ್ಟಿಗರು ಮಾತ್ರ ದಿಗ್ಭ್ರಮೆಗೊಂಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಫ್ರೆಶರ್‌ಗಳು ಇದರ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ ಕೆಲವರು ಆಶ್ಚರ್ಯಚಕಿತರಾಗಿದ್ದಾರೆ.

NIT ವಿದ್ಯಾರ್ಥಿಗೆ ಇಷ್ಟು ದೊಡ್ಡ ಆಫರ್​ ಸಿಕ್ಕಿದ್ದೇಗೆ?

ಸಾಮಾನ್ಯವಾಗಿ, ಅಂತಹ ಹೆಚ್ಚಿನ ಸಂಬಳದ ಉದ್ಯೋಗಗಳು ಬಾಂಬೆ ಅಥವಾ ದೆಹಲಿಯಂತಹ ಐಐಟಿಗಳ ವಿದ್ಯಾರ್ಥಿಗಳಿಗೆ ಹೋಗುತ್ತವೆ, ಹೆಚ್ಚಾಗಿ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಿಕಲ್ ವಿದ್ಯಾರ್ಥಿಗಳಿಗೆ ಸೇರುತ್ತದೆ. ಅದಕ್ಕಾಗಿಯೇ ಅನೇಕ ಜನರಿಗೆ ಇದನ್ನು ನಂಬುವುದು ಕಷ್ಟವಾಗಿದೆ.

We got 4cr package in NIT before GTA VI byu/namasteji_ inBtechtards

4 ಕೋಟಿ ಆಫರ್​ ನಿಜವೇ?

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ (ವಿಶೇಷವಾಗಿ Reddit ಮತ್ತು LinkedInನಲ್ಲಿ) NIT ಜಲಂಧರದ ಒಬ್ಬ ವಿದ್ಯಾರ್ಥಿಗೆ 4.07 ಕೋಟಿ ವಾರ್ಷಿಕ ಪ್ಯಾಕೇಜ್ ಸಿಕ್ಕಿದೆ ಎಂಬ ಸುದ್ದಿ ವೈರಲ್ ಆಯ್ತು. ಆದರೆ, ಇದು ನಿಜವಲ್ಲ, ನಕಲಿ (fake) ಎಂದು ದೃಢಪಡಿಸಲಾಗಿದೆ.

ನಿಜವಾಗಿ NIT ಹಮೀರ್‌ಪುರದ Aryan Mittal (2025 ಬ್ಯಾಚ್)ಗೆ 3.40 ಕೋಟಿ ಪ್ಯಾಕೇಜ್ ಸಿಕ್ಕಿದೆ. ಇದು NIT ಇತಿಹಾಸದಲ್ಲಿ ರೆಕಾರ್ಡ್. ಇದು ಆನ್-ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಸಿಕ್ಕಿದ್ದು, ಟೆಕ್ ರೊಲೆಗೆ ಸಂಬಂಧಿಸಿದ್ದು ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net