ಅಪ್ಪನನ್ನು ಕೊಲ್ಲಲಾಗಿದೆ: ತಾಯಿಯ ಮುಖವಾಡ ಕಳಚಿದ 8 ವರ್ಷದ ಬಾಲಕ! Unmasks mother

death jaipura
Published on

ಉತ್ತರ ಪ್ರದೇಶ: ಉತ್ತರ ಪ್ರದೇಶದ ಬರಾಂಬಕಿಯಲ್ಲಿ ನಡೆದ ಕೊಲೆ ಪ್ರಕರಣ ಟ್ವಿಸ್ಟ್​ ಪಡೆದಿದ್ದು, ಹೆಂಡತಿಯೇ ಗಂಡನನ್ನು ಕೊಲ್ಲಲು 1 ಲಕ್ಷ ರೂ. ಹಣ ನೀಡಿದ್ದಾಳೆ ಎಂಬ ಮಾಹಿತಿ ಆಧಾರದ ಮೇಲೆ ಮಹಿಳೆ (Unmasks mother) ಮತ್ತು ಇ-ರಿಕ್ಷಾ ಚಾಲಕನನ್ನು ಬಾರಾಬಂಕಿಯ ಪೊಲೀಸರು ಮಂಗಳವಾರ (ಅ.15) ಬಂಧಿಸಿದ್ದಾರೆ.

ಪೊಲೀಸರು ಈ ವಿಚಾರದ ಬಗ್ಗೆ ದಂಪತಿಯ 8 ವರ್ಷದ ಮಗನನ್ನು ಪ್ರಶ್ನಿಸಿದಾಗ ಅವನು ಅಪ್ಪನನ್ನು ಕೊಲ್ಲಲಾಗಿದೆ ಎಂದು ಮಾಹಿತಿ ನೀಡಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ.

ಪೊಲೀಸರ ಪ್ರಕಾರ, ಸೋಮವಾರ (ಅ.14) ಉತ್ತರ ಪ್ರದೇಶದ ಬಾರಾಬಂಕಿಯ ಘುಂಗೇಟರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ಆರೋಪಿ ಪೂಜಾ ಗೌತಮ್​ ತನ್ನ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ದೂರು ನೀಡಿದ್ದಳು. ಆದರೆ ಆಕೆಯ ಕಥೆಯನ್ನು ಪೊಲೀಸರು ಅನುಮಾನಿಸಲು ಪ್ರಾರಂಭಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ವಿಚಾರಣೆ ಸಮಯದಲ್ಲಿ ಪೂಜಾ ಮತ್ತೊಂದು ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಈ ವಿಚಾರದ ಕುರಿತು ದಿನನಿತ್ಯ ಮನೆಯಲ್ಲಿ ಜಗಳ ಪ್ರಾರಂಭವಾಗುತ್ತಿದ್ದವು. ಹಾಗಾಗಿ ಈಕೆ ಗಂಡನನ್ನು ಕೊಲ್ಲಲು ನಿರ್ಧರಿಸಿದಳು ಎಂದು ಮಾಹಿತಿ ಬಂದಿದೆ.

ಇದಾದ ಬಳಿಕ ಪೂಜಾ ಲಕ್ನೋದ ಇ-ರಿಕ್ಷಾ ಚಾಲಕ ಕಮಲೇಶ್​ನ್ನು ಭೇಟಿ ಮಾಡಿದ್ದು, ತನ್ನ ಗಂಡನನ್ನು ಕೊಲ್ಲಲು 1 ಲಕ್ಷ ರೂಪಾಯಿ ಸುಪಾರಿಯನ್ನು ನೀಡಿದ್ದಾಳೆ.

ಸೋಮವಾರ ಸಂಜೆ ಈ ದಂಪತಿ ಜಾತ್ರೆಗೆ ತೆರಳಿದ್ದು, ವಾಪಾಸ್ಸು ಬರುವಂತಹ ಸಮಯದಲ್ಲಿ ಕಮಲೇಶ್ ಅವರ ಇ-ರಿಕ್ಷಾವನ್ನು ಬುಕ್​ ಮಾಡಿದ್ದಾರೆ. ಪ್ರಯಾಣ ನಡೆಸುತ್ತಿದ್ದ ಸಮಯದಲ್ಲಿ ಕಮಲೇಶ್​ ಹನುಮಂತಲಾಲ್ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ.

ಮಗುವಿನ ಪ್ರಾಮಾಣಿಕ ಹೇಳಿಕೆ ಪೊಲೀಸ್​ ತಂಡದ ಸೂಕ್ಷ್ಮತೆಯು ಕೊಲೆಯನ್ನು ಭೇದಿಸಲು ಸಾಧ್ಯವಾಯಿತು ಎಂದು ಬರಾಮಂಕಿ ಎಸ್ಪಿ ವಿಕಾಸ್​ ಚಂದ್ರ ತ್ರಿಪಾಠಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಪೂಜಾ ಮತ್ತು ಕಮಲೇಶ್​ ಅವರನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಆಯುಧ, ಮೊಬೈಲ್​ ಹಾಗೂ ಇ-ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net