

ಕಡೂರು: ಪಂಡಿತ್ ದೀನದಯಾಳು ಉಪಾಧ್ಯಾಯ ದೇಶ ಕಂಡ ಶ್ರೇಷ್ಠ ದಾರ್ಶನಿಕ ರಾಜಕೀಯ ಚಿಂತಕರಲ್ಲಿ ಒಬ್ಬರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಂಡಿತ್ ದೀನದಯಾಳು ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಪ್ರೇರಣಾದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲಿಯೇ ಅನೇಕ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸ ಪೂರೈಸಿ ಉನ್ನತ ಸ್ಥಾನಗಳಿಸಿದರು. ಸಮಾಜದ ಪ್ರಗತಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್ ಮಾತನಾಡಿ, ಪಂಡಿತ್ ದೀನದಯಾಳು ಉಪಾಧ್ಯಾಯ ಅವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದು ಹೇಳಿದರು. ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಹಿನ್ನಲೆಯಲ್ಲಿ ಮಹಿಳಾ ಮೋರ್ಚಾದಿಂದ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರೇಂದ್ರ, ಜಿಪಂ ಮಾಜಿ ಸದಸ್ಯೆ ಕಾವೇರಿ ಲಕ್ಕಪ್ಪ, ಸುನೀತಾ ಜಗದೀಶ್, ಸುಧಾ ಉಮೇಶ್, ವಾಣಿ ತಿಮ್ಮಯ್ಯ, ಅನಿತಾ, ಲತಾ, ವಿಜಯಾ ಚಿನ್ನರಾಜು, ಕುರುಬಗೆರೆ ಮಹೇಶ್, ಕೆ.ಆರ್.ಚಂದ್ರು, ಪುರಸಭಾ ಸದಸ್ಯೆ ಗೋವಿಂದರಾಜು, ಲಲಿತಾ ನಾಗರಾಜ್, ಭಾಗ್ಯಾ, ಶೇಷಪ್ಪ ಮತ್ತಿತರಿದ್ದರು.