ವಿದ್ಯಾರ್ಥಿನಿ ಸಾವು, ಕೊಲೆ ಪ್ರಕರಣ ದಾಖಲು

fir
Published on

ಬೆಂಗಳೂರು: ವಿದ್ಯಾರ್ಥಿನಿ ಪ್ರಭುದ್ಯಾ ಸಾವಿನ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಸುಬ್ರಮಣ್ಯಪುರದ ಬೃಂದಾವನ ಲೇಔಟ್ ನಿವಾಸಿ ಪ್ರಭುದ್ಯಾ (20) ಎಂಬಾಕೆ ಮೇ 15ರ ಸಂಜೆ ಮನೆಯ ಸ್ನಾನಗೃಹದಲ್ಲಿ ಕತ್ತು ಮತ್ತು ಕೈ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆರಂಭದಲ್ಲಿ ಪೊಲೀಸರು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಮೇ 18ರಂದು ಮೃತ ಯುವತಿ ತಾಯಿ ಕೆ.ಆರ್. ಸೌಮ್ಯ, ತನ್ನ ಮಗಳ ತಲೆಗೆ ಹೊಡೆದು ಕತ್ತು ಕೊಯ್ದು, ಮುಖಕ್ಕೂ ಹೊಡೆದು ಕೊಂದಿದ್ದಾರೆ.

ಮಗಳನ್ನು ಕ್ರೂರವಾಗಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರು ಸಲ್ಲಿಸಿದ್ದರು. ಇದರ ಮೇರೆಗೆ ಸುಬ್ರಮಣ್ಯಪುರ ಪೊಲೀಸರು ಐಪಿಸಿ ಸೆಕ್ಷನ್ 302 ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೇ 15ರಂದು ಪ್ರಭುದ್ಯಾ, ಮನೆಯ ಶೌಚಗೃಹದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಸಹೋದರ ಮನೆಗೆ ಬಂದಾಗ ಡೋರ್ ಲಾಕ್ ಆಗಿತ್ತು. ಹಿಂಬದಿ ಡೋರ್‌ನಿಂದ ಒಳಗೆ ಪ್ರವೇಶ ಮಾಡಿ ನೋಡಿದಾಗ ಕೈ, ಕತ್ತು ಕೊಯ್ದ ಸ್ಥಿತಿಯಲ್ಲಿ ಇದ್ದ ಪ್ರಭುದ್ಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ರಕ್ತಸ್ರಾವವಾಗಿ ಅಸುನೀಗಿರುವುದಾಗಿ ವೈದ್ಯರು ದೃಢಪಡಿಸಿದ್ದರು. ತನ್ನ ಮಗಳನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಮೃತಳ ತಾಯಿ ಹೇಳಿಕೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net