ಕೆಮ್ಮಿನ ಸಿರಪ್​ನಿಂದ ಭಾರತದಲ್ಲಿ ಮಕ್ಕಳ ಸಾವು: ಜಾಗತಿಕ ಎಚ್ಚರಿಕೆ ನೀಡಿದ WHO!

blockquote class=twitter-tweetp lang=hi dir=ltrछेड (2)
Published on

ನವದೆಹಲಿ: ಭಾರತದಲ್ಲಿ ಗುರುತಿಸಲಾಗಿರುವ(ಇದೀಗ ನಿಷೇಧಿಸಲಾಗಿರುವ) ಮೂರು ಕಲುಷಿತ ಕೆಮ್ಮಿನ ಸಿರಪ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಮಂಗಳವಾರ ಆರೋಗ್ಯ ಸಲಹಾ ಎಚ್ಚರಿಕೆ ನೀಡಿದ್ದು, ಈ ಔಷಧಿಗಳು ಎಲ್ಲೇ ಪತ್ತೆಯಾದರೂ ವರದಿ ಮಾಡುವಂತೆ ವಿಶ್ವಾದ್ಯಂತ ಅಧಿಕಾರಿಗಳಿಗೆ ಒತ್ತಾಯಿಸಿದೆ ವರದಿ ಉಲ್ಲೇಖಿಸಿದೆ.

ಸ್ರೆಸನ್ ಫಾರ್ಮಾಸ್ಯುಟಿಕಲ್‌ನ ಕೋಲ್ಡ್ರಿಫ್, ರೆಡ್ನೆಕ್ಸ್ ಫಾರ್ಮಾಸ್ಯುಟಿಕಲ್ಸ್‌ನ ರೆಸ್ಪಿಫ್ರೆಶ್ ಟಿಆರ್ ಮತ್ತು ಶೇಪ್ ಫಾರ್ಮಾದ ರೆಲೈಫ್‌  ಬ್ಯಾಚ್‌ಗಳಲ್ಲಿ ಈ ಮೂರು ಸಿರಪ್​ಗಳು ಸೇರಿವೆ.ಈ ಸಿರಪ್‌ಗಳು ಅಪಾಯಗಳನ್ನುಂಟುಮಾಡುತ್ತವೆ, ಇದು ತೀವ್ರವಾದ ಮತ್ತು ಅಪಾಯಕಾರಿಯಾದ ಕಾಯಿಲೆಗೆ ಕಾರಣವಾಗಬಹುದು ಎಂದು WHO ಹೇಳಿದೆ.

ಶ್ರೀಸನ್ ಫಾರ್ಮಾ ತಯಾರಿಸಿದ ಕೋಲ್ಡ್ರಿಫ್ ಸಿರಪ್ ಅನ್ನು ಭಾರತದ ಅನೇಕ ರಾಜ್ಯಗಳಲ್ಲಿ ವಿತರಿಸಲಾಯಿತು. ಈ ಸಿರಪ್‌ನಲ್ಲಿ ಆಂಟಿಫ್ರೀಜ್‌ನಲ್ಲಿ ಬಳಸುವ ವಿಷಕಾರಿ ಕೈಗಾರಿಕಾ ದ್ರಾವಕವಾದ ಡೈಥಿಲೀನ್ ಗ್ಲೈಕೋಲ್‌ನ ಮಾರಕ ಮಟ್ಟಗಳು ಕಂಡುಬಂದಿವೆ. ಈ ಮಾಲಿನ್ಯವು ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಮಕ್ಕಳಲ್ಲಿ ತೀವ್ರ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಯಿತು, ಇದರ ಪರಿಣಾಮವಾಗಿ 21 ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಬೇರೆ ದೇಶಕ್ಕೆ ರಫ್ತು ಇಲ್ಲ

ಭಾರತದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ವರದಿ ಪ್ರಕಾರ, ಕೆಮ್ಮಿನ ಸಿರಪ್‌ನಲ್ಲಿ ಅನುಮತಿಸಲಾದ ಮಿತಿಗಿಂತ ಸುಮಾರು 500 ಪಟ್ಟು ಡೈಥಿಲೀನ್ ಗ್ಲೈಕಾಲ್ (DEG) ಇರುವುದು ಪರೀಕ್ಷೆಯಲ್ಲಿ ಕಂಡುಬಂದಿದೆ. ಭಾರತದಿಂದ ಯಾವುದೇ ಕಲುಷಿತ ಔಷಧಿಗಳನ್ನು ರಫ್ತು ಮಾಡಲಾಗಿಲ್ಲ. ಅಲ್ಲದೆ, ಅಕ್ರಮ ಸಾಗಣೆಗೆ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು CDSCO ದೃಢಪಡಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net