ಸಂತ್ರಸ್ತರ ಜೊತೆ ನಾನು ನಿಲ್ಲುತ್ತೇನೆ; ಹಾಥರಸ್​ ದುರಂತದ ಕುರಿತು ಮೊದಲ ಬಾರಿಗೆ ಮೌನ ಮುರಿದ ಭೋಲೆ ಬಾಬಾ

Bhole Baba
Published on

ಲಖನೌ: ಜುಲೈ 02ರಂದು ಉತ್ತರಪ್ರದೇಶದ ಹಾಥರಸ್​ನಲ್ಲಿ 120ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕಾಲ್ತುಳಿತ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸ್ವಯಂಘೋಷಿತ ದೇವಮಾನವ ನಾರಾಯಣ ಸಕರ್ ಹರಿ ಅಲಿಯಾಸ್​ ಭೋಲೆ ಬಾಬಾ ಘಟನೆಗೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ತೀವವರ ದುಃಖಿತನಾಗಿರುವುದಾಗಿ ತಿಳಿಸಿದ್ದಾರೆ.

ಘಟನೆಯ ಬಳಿಕ ಭೋಲೆ ಬಾಬಾ ತಲೆಮಾರಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಉತ್ತರಪ್ರದೇಶದ ಪೊಲೀಸರು ತನಿಖೆಯನ್ನು ತೀವ್ರಗೊಳಿಸುತ್ತಿದ್ದಂತೆ ಭೋಲೆ ಬಾಬಾ ಪ್ರತ್ಯಕ್ಷವಾಗಿದ್ದು, ANIಗೆ ನೀಡಿರುವ ಸಂದರ್ಶನದಲ್ಲಿ ದುರಂತದ ಕುರಿತು ಮಾತನಾಡಿದ್ದಾರೆ.

ದೇವರು ನಮಗೆ ಆ ನೋವನ್ನು ಭರಿಸುವ ಶಕ್ರಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ದಯವಿಟ್ಟು ಸರ್ಕಾರ ಹಾಗೂ ಆಡಳಿತದಲ್ಲಿ ನಂಬಿಕೆ ಇಡಿ. ದುರಂತಕ್ಕೆ ಕಾರಣರಾದ ಯಾರನ್ನು ಸರ್ಕಾರ ಹಾಗೂ ಕಾನೂನು ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಸಂತ್ರಸ್ತ ಹಾಗೂ ಗಾಯಾಳುಗಳ ಕುಟುಂಬದ ಜೊತೆ ನಾನು ಸದಾ ಇರುತ್ತೇನೆ. ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡುತ್ತೇನೆ.

ನಾನು ನನ್ನ ವಕೀಲರ ಮೂಲಕ ಕಮಿಟಿ ಸದಸ್ಯರಿಗೆ ಮನವಿ ಮಾಡಿದ್ದೇನೆ. ಸಂತ್ರಸ್ತರ ಕುಟುಂಬಗಳ ಜೊತೆ ನಾವು ಸದಾ ಇರುತ್ತೇವೆ. ತನಿಖೆಯ ಭಾಗವಾಗಿ ಪೊಲೀಸರು ವಿಚಾರಣೆಗೆ ಕರೆದರೆ ಹಾಜರಾಗಿ ಸಹಕರಿಸುತ್ತೇನೆ. ನನಗೆ ಕಾನೂನು ಹಾಗೂ ಆಡಳಿತ ಮೇಲೆ ವಿಶ್ವಾಸವಿದೆ ಎಂದು ಭೋಲೆ ಬಾಬಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net