19 ವರ್ಷದ ಪುತ್ರನ ಸಾವಿನ ಮರುದಿನವೇ ಶವವಾಗಿ ಪತ್ತೆಯಾದ ತಂದೆ!

Son Father (1)
Published on

ಚೆನ್ನೈ: ನೀಟ್​ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಾದ ಮರುದಿನವೇ ಆತನ ತಂದೆ ಶವವಾಗಿ ಪತ್ತೆಯಾಗಿದ್ದಾನೆ. ತಮಿಳುನಾಡಿನ ಚೆನ್ನೈನಲ್ಲಿ ಈ ಪ್ರಕರಣ ನಡೆದಿದೆ.

ಜಗದೀಶ್ವರನ್​ (19) ಆತ್ಮಹತ್ಯೆ ಮಾಡಿಕೊಂಡ ಯುವಕ. 2022ರಲ್ಲಿ ಪಿಯುಸಿಯಲ್ಲಿ 427 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ ಈತ ಎರಡು ಸಲ ಪ್ರಯತ್ನಿಸಿದ್ದರೂ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗಲು ಆಗಿರಲಿಲ್ಲ. ಇದರಿಂದ ನೊಂದ ಈತ ಶನಿವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಪುತ್ರಶೋಕದಲ್ಲಿದ್ದ ತಂದೆ ಸೆಲ್ವಶೇಖರ್, ಆ ನೋವಿನಿಂದ ಹೊರಬರಲಾಗದೆ ನೊಂದು ಮರುದಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ಸೂಚಿಸಿದ್ದು, ಯುವಪೀಳಿಗೆ ಆತ್ಮಹತ್ಯೆಯ ಯೋಚನೆ ಮಾಡಬಾರದು, ಆತ್ಮವಿಶ್ವಾಸದೊಂದಿಗೆ ಬದುಕಬೇಕು ಎಂದು ಕಿವಿಮಾತು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net