ಅಮ್ಮ ಎಲ್ಲಿ ಎಂದು ಮಗಳನ್ನು ಪ್ರಶ್ನಿಸಿದ ವ್ಯಕ್ತಿಗೆ ಗೊತ್ತಾಯ್ತು ಪತ್ನಿಯ ಅಕ್ರಮ ಸಂಬಂಧ!

Illicit Relationship
ಸಾಂದರ್ಭಿಕ ಚಿತ್ರ
Published on

ಲಂಡನ್​: ಪ್ರತಿದಿನ ತನ್ನ ಮಗಳೊಂದಿಗಿನ ಸಂಭಾಷಣೆಯಿಂದಾಗಿ ಪತ್ನಿಯ ಅಕ್ರಮ ಸಂಬಂಧ ಬಯಲಾಯಿತು ಎಂದು ವ್ಯಕ್ತಿಯೊಬ್ಬ ರೆಡಿಟ್​ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಕೆಲ ಸಲಹೆಗಳನ್ನು ಕೇಳಿದ್ದಾರೆ. 14 ವರ್ಷಗಳ ವೈವಾಹಿಕ ಜೀವನಕ್ಕೆ ಪತ್ನಿ ಹೇಗೆ ಮೊಸವೆಸಗಿದಳು ಎಂಬುದನ್ನೂ ವಿವರಿಸಿದ್ದಾರೆ.

ಸ್ಟೀವನ್​ (ಹೆಸರು ಬದಲಿಸಲಾಗಿದೆ) ಒಮ್ಮೆ ಮನೆಗೆ ಮರಳಿದಾಗ ಪತ್ನಿಯ ಬಗ್ಗೆ ಮಗಳನ್ನು ವಿಚಾರಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಗಳು ಅಮ್ಮ ನೆರೆಯ ಮನೆಯಲ್ಲಿದ್ದಾರೆ ಎನ್ನುತ್ತಾಳೆ. ಅನುಮಾನಗೊಂಡ ಸ್ಟೀವನ್​ ಮಗಳ ಬಳಿ ಮತ್ತಷ್ಟು ವಿಚಾರ ಕೆದಕಿದಾಗ ಪತ್ನಿಯ ಅಕ್ರಮ ಸಂಬಂಧ ಬಯಲಾಗಿದೆ.

ಒಮ್ಮೆ ಶಾಲೆಯಿಂದ ಮನೆಗೆ ಮರಳಿದಾಗ ಅಮ್ಮ ಇರಲಿಲ್ಲ. ಆದರೆ, ನೆರೆ ಮನೆಯಾತ ಬಾಗಿಲಿನಿಂದ ತನ್ನ ತಲೆಯನ್ನು ಒಳ ಹಾಕಿ ನಿನ್ನ ಅಮ್ಮ ಹೊರಗಡೆ ಹೋಗಿದ್ದಾಗಿ ಹೇಳಿದರು ಎಂದು ತಂದೆಯ ಬಳಿ ಮಗಳು ಹೇಳುತ್ತಾಳೆ. ಅಷ್ಟರಲ್ಲಾಗಲೇ ಸ್ಟೀವನ್​ ತಲೆಯಲ್ಲಿ ಸಂಶಯದ ಹೊಗೆಯಾಡತೊಡಗುತ್ತದೆ.

ಮಾರನೆಯ ದಿನ ಸ್ವತಃ ಸ್ಟೀವನ್​, ನೆರೆಮನೆಯವನ ಜತೆ ನಿನಗೇನು ಕೆಲಸ ಎಂದು ಪತ್ನಿಯನ್ನು ಕೇಳಿದ್ದಾನೆ. ಪ್ರಾರಂಭದಲ್ಲಿ ಆಗೇನು ಇಲ್ಲವಲ್ಲ ಎಂದು ಪತ್ನಿ ನಟಿಸಿದ್ದಾಳೆ. ಸ್ವಲ್ಪ ದಿನಗಳ ಬಳಿಕ ಸುಮ್ಮನಿದ್ದ ಸ್ಟೀವನ್​ಗೆ ಪತ್ನಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾನೆ. ಆಕೆ ಹೇಳುತ್ತಿರುವುದು ಸುಳ್ಳು ಎಂಬುದು ಸಹ ಗೊತ್ತಾಗುತ್ತದೆ. ಬಳಿಕ ಪತ್ನಿಯ ಬಳಿ ಜೋರು ಧ್ವನಿಯಲ್ಲೇ ಪ್ರಶ್ನಿಸುತ್ತಾನೆ.

ಕೊನೆಯಲ್ಲಿ ತಪ್ಪೊಪ್ಪಿಕೊಂಡ ಪತ್ನಿ ನಾವಿಬ್ಬರು ಚುಂಬಿಸಿದ್ದೇವೆ ಮತ್ತು ಸ್ಪರ್ಶಿಸಿದ್ದೇವಷ್ಟೇ, ಅದನ್ನ ಬಿಟ್ಟು ಬೇರೇನು ನಡೆದಿಲ್ಲ ಎಂದಿದ್ದಾಳೆ. ಆದರೆ, ಆಕೆಯ ಮಾತನ್ನು ನಂಬಲು ಒಪ್ಪದ ಸ್ಟೀವನ್​, ಪತ್ನಿಯನ್ನು ಒದ್ದು ಮನೆಯಿಂದ ಆಚೆಗೆ ತಳ್ಳುತ್ತಾನೆ. ಆದರೆ, ಮಗಳಿಗಾಗಿ ಒಂದು ನಿರ್ಧಾರಕ್ಕೆ ಬಂದ ಸ್ಟೀವನ್​, ವೈವಾಹಿಕ ಸಮಾಲೋಚನೆ ಮಾಡಿಸಿಕೊಂಡು ಮರಳಿ ಬರಲು ಸಮ್ಮತಿ ನೀಡುತ್ತಾನೆ.

ಆದರೆ, ತುಂಬಾ ದಿನಗಳ ಹಿಂದೆಯೇ ನೆರೆ ಮನೆಯವನನ್ನು ಪತ್ನಿ ಭೇಟಿಯಾಗಿ ಅನೇಕ ದಿನಗಳಿಂದ ಇಬ್ಬರು ಮಾತನಾಡಿರುವುದಲ್ಲದೆ, ಸಂದೇಶಗಳ ರವಾನೆಯೊಂದಿಗೆ ಫೋಟೋಗಳು ಸಹ ಬದಲಾಗಿರುವುದು ಸ್ಟೀವನ್​ಗೆ ಮತ್ತಷ್ಟು ಅನುಮಾನ ಉಂಟಾಗಿದೆ. ಆದರೆ, ಮುತ್ತು ಬಿಟ್ಟರೆ ಬೇರೇನು ನಡೆದಿಲ್ಲ ಎಂದು ಪತ್ನಿ ತನ್ನ ಹೇಳಿಕೆ ಅಂಟಿಕೊಂಡಿರುತ್ತಾಳೆ. ಅಲ್ಲದೆ, ತಪ್ಪು ಎಂದು ಗೊತ್ತಾದ ಬೆನ್ನಲ್ಲೇ ಅದನ್ನು ನಿಲ್ಲಿಸಿದೆ ಎಂದಿದ್ದಾಳೆ. ಆದರೆ, ಸ್ಟೀವನ್ ಇದ್ಯಾವುದನ್ನು ಒಪ್ಪಲು​ ಆಗುತ್ತಿಲ್ಲ. ಇದು ಮುತ್ತಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಸ್ಟೀವನ್​ಗೆ ಇರುವ ಅನುಮಾನವಾಗಿದೆ.

ಹೀಗಾಗಿ ತನ್ನ ನೋವಿನ ಕತೆಯನ್ನು ರೆಡಿಟ್​ ಜಾಲತಾಣದಲ್ಲಿ ಬರೆದುಕೊಂಡಿದ್ದು, ಪರಿಹಾರ ಕೇಳಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಸಮಾಲೋಚನೆ ಒಳ್ಳೆಯದು. ಮೊದಲು ಅದನ್ನು ಆರಂಭಿಸಿ, ಸಂಬಂಧವನ್ನು ಸರಿಪಡಿಸಿಕೊಳ್ಳಲು ಇರುವ ಪ್ರಮುಖ ಪರಿಹಾರಗಳನ್ನು ಆಕೆ ಮಾಡಬೇಕಾಗಿದೆ. ಒಳ್ಳೆಯದಾಗಲಿ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net