More

    ಅರೆ ಇದೆಂಥ ಆಘಾತ! ಕರ್ನಾಟಕಕ್ಕೂ ಕಾಲಿಟ್ಟುಬಿಟ್ಟಿದೆ ಹೊಸ ಚೀನಿ ವೈರಸ್​- ಇಬ್ಬರಲ್ಲಿ ಪತ್ತೆ!

    ನವದೆಹಲಿ: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾ ವೈರಸ್​ ಮಹಾಮಾರಿಯಿಂದ ಪ್ರತಿಯೊಬ್ಬರೂ ನಲುಗಿ ಹೋಗಿ, ಇನ್ನೂ ಆಘಾತದಿಂದ ಹೊರಕ್ಕೆ ಬರಲು ಆಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿಯೇ ಚೀನಾದ ಹೊಸದೊಂದು ವೈರಸ್​ ಭಾರತಕ್ಕೂ ಕಾಲಿಟ್ಟಿದೆ. ಭಾರತ ಅಷ್ಟೇ ಅಲ್ಲ… ಕರ್ನಾಟಕದಲ್ಲಿಯೂ ಇಬ್ಬರಲ್ಲಿ ಈ ಸೋಂಕು ಪತ್ತೆಯಾಗಿದ್ದು ಆಘಾತ ಮೂಡಿಸಿದೆ!

    ಹೌದು. ದೇಶದಲ್ಲಿ ಸದ್ಯ ಕರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 60 ಲಕ್ಷ ದಾಟಿದೆ. ಆದರೆ ಈ ಮಧ್ಯಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ನೀಡಿದ ಮಾಹಿತಿ ಪ್ರಕಾರ, ಚೀನ ದಿಂದ ‘ಕ್ಯಾಟ್‌ ಕ್ಯೂ ವೈರಸ್‌ (Cat Que Virus-CQV)’ ಭಾರತ ಪ್ರವೇಶಿಸಿದೆ. ಕರ್ನಾಟಕದಲ್ಲಿ ನಡೆಸಲಾಗಿರುವ ಎರಡು ಮಾದರಿ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ.

    ಉಣ್ಣೆ, ಸೊಳ್ಳೆ ಮೊದಲಾದ ಕೀಟಗಳಿಂದ ಹರಡುವ ರೋಗ ಇದಾಗಿದೆ. ‘ಆಥ್ರೋಪಾಡ್‌-ಬೋರ್ನೆ’ ವೈರಸ್‌ಗಳಲ್ಲಿ ಒಂದಾದ ಈ ವೈರಸ್​ ಹಂದಿಗಳು ಹಾಗೂ ಕ್ಯೂಲೆಕ್ಸ್‌ ಸೊಳ್ಳೆಗಳಲ್ಲಿ ಅಡಗಿದ್ದು, ಚೀನಾ ಮತ್ತು ವಿಯೆಟ್ನಾಂಗಳಲ್ಲಿ ಹೆಚ್ಚಾಗಿ ಕಂಡು ಬಂದಿವೆ.

    ಇದನ್ನೂ ಓದಿ: ಮಂಗಳ ಗ್ರಹದಲ್ಲಿಯೂ ಕಟ್ಟಬಹುದು ಮನೆ! ಪತ್ತೆಯಾಗಿವೆ ಮೂರು ಸರೋವರ

    ಭಾರತದಲ್ಲಿ ಇದೇ ರೀತಿಯ ಕ್ಯುಲೆಕ್ಸ್‌ ಸೊಳ್ಳೆಗಳು ಪತ್ತೆಯಾಗಿದ್ದು, ಪುಣದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ, ಐಸಿಎಂಆರ್‌ನ ವಿಜ್ಞಾನಿಗಳು ಭಾರತದಲ್ಲಿ ಇದರ ಪ್ರತಿರೋಧಗಳ ಪತ್ತೆಗೆ ಸೆರಮ್‌ ಪರೀಕ್ಷೆ ನಡೆಸಿದ್ದಾರೆ.

    ಇದಕ್ಕಾಗಿ ವಿವಿಧ ರಾಜ್ಯಗಳಲ್ಲಿ ನಡೆಸಲಾದ 883 ಮಾನವ ಸೆರಮ್‌ ಮಾದರಿಗಳ ಪರೀಕ್ಷೆಗಳ ಪೈಕಿ ಎರಡು ಮಾದರಿಗಳಲ್ಲಿ ವೈರಾಣುವಿಗೆ ಪ್ರತಿಕಾಯಗಳು ಕಂಡು ಬಂದಿವೆ. ಪ್ರತಿಕಾಯಗಳು ಕಂಡು ಬಂದ ಇಬ್ಬರು ವ್ಯಕ್ತಿಗಳು ಹಿಂದೊಂದು ದಿನ ಈ ಸೋಂಕಿಗೆ ಒಳಗಾಗಿರುವುದನ್ನು ಈ ಪರೀಕ್ಷೆ ಸೂಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ಕರ್ನಾಟಕದಲ್ಲಿ 2014 ಮತ್ತು 2017ರಲ್ಲಿ ನಡೆಸಲಾಗಿರುವ ಪರೀಕ್ಷೆಯ ಪ್ರಕಾರ, ಕರ್ನಾಟಕದ ಇಬ್ಬರಿಗೆ ಒಂದು ಹಂತದಲ್ಲಿ ಕ್ಯಾಟ್‌ ಕ್ಯೂ ವೈರಸ್‌ ತಗಲಿರುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಕ್ಯಾಟ್‌ ಕ್ಯೂ ವೈರಸ್‌ಗೆ ಪ್ರತಿಕಾಯ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಅಂದರೆ ಕರೊನಾಕ್ಕಿಂತಲೂ ಮುಂಚೆಯೇ ಈ ವೈರಸ್​ ಕರ್ನಾಟಕಕ್ಕೆ ದಾಳಿ ಇಟ್ಟಿರುವುದು ವರದಿಯಾಗಿದೆ. ಆದರೆ ಈಗ ಇದು ಎಷ್ಟರಪ್ರಮಾಣದಲ್ಲಿ ಪ್ರಭಾವ ಬೀರುತ್ತಿದೆ ಎನ್ನುವುದನ್ನು ವೈದ್ಯರು ಪತ್ತೆಹಚ್ಚುತ್ತಿದ್ದಾರೆ.

    ಸಸ್ತನಿ ವರ್ಗಕ್ಕೆ ಸೇರಿದ ಪರಾವಲಂಬಿಯೇ ಅದನ್ನು ಪ್ರಧಾನವಾಗಿ ರವಾನೆ ಮಾಡುತ್ತದೆ. ಹೀಗಾಗಿ ಇದು ದೇಶದ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಕಾಡುವ ಸಾಧ್ಯತೆ ಹೆಚ್ಚಾಗಿದೆ ಎಂಬ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

    ಕರೊನಾದ ನಡುವೆಯೇ ಮೆದುಳು ತಿನ್ನುವ ಭೀಕರ ಅಮೀಬಾ ಪತ್ತೆ- ಇಬ್ಬರು ಮಕ್ಕಳ ಸಾವು

    ಆಗ ಓಕೆ ಎಂದು, ಈಗ ಕೃಷಿಕರ ದಾರಿ ತಪ್ಪಿಸುತ್ತಿರುವವರಿಗೆ ಸಚಿವೆ ನಿರ್ಮಲಾ ಹಾಕಿದರೊಂದು ಸವಾಲು…

    ನಭಕ್ಕೆ ನೆಗೆಯಲಿದೆ ಶೌಚಗೃಹ: ನಾಸಾದಿಂದ ನಾಳೆಯೇ ಮುಹೂರ್ತ ಫಿಕ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts