ಕಾಲಿನಿಂದ ಒದ್ದ, ಹೊಟ್ಟೆಗೆ, ಮುಖಕ್ಕೆ ಗುದ್ದಿದ- ಕ್ಯಾಮೆರಾಮನ್​ನಿಂದ ಪತ್ರಕರ್ತನ ಮೇಲೆ ಹಲ್ಲೆ?

journalist
Published on

ಬಿಹಾರ: ಪತ್ರಕರ್ತರು ಕೆಲವೊಂದು ಘಟನೆಗಳ ವರದಿ ಮಾಡಲು ಹೋದ ಸಂದರ್ಭದಲ್ಲಿ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡುವುದು ಹೊಸ ವಿಷಯವಲ್ಲ.

ಇದಾಗಲೇ ಹಲವಾರು ಇಂಥ ಘಟನೆಗಳು ನಡೆದಿವೆ. ಅದರಲ್ಲಿಯೂ ಪ್ರತಿಭಟನೆ, ದಾಂಧಲೆ ಇಂಥ ಸಂದರ್ಭಗಳಲ್ಲಿ ಸುದ್ದಿಯನ್ನು ಕವರ್​ ಮಾಡಲು ಹೋಗುವ ಮಾಧ್ಯಮದವರ ಮೇಲೆ ಇದಾಗಲೇ ಹಲವಾರು ಬಾರಿ ದಾಳಿ ನಡೆದಿವೆ, ಹಲ್ಲೆಯಾಗಿವೆ, ಕ್ಯಾಮೆರಾಗಳನ್ನು ಪುಡಿಪುಡಿ ಮಾಡಿರುವ ಘಟನೆಗಳೂ ನಡೆದಿವೆ.

ಆದರೆ ಬಿಹಾರದಲ್ಲಿ ನಡೆದಿರುವ ಈ ಘಟನೆ ಆಘಾತವನ್ನುಂಟುಮಾಡಿದೆ. ಅದೇನೆಂದರೆ ಇಂಗ್ಲಿಷ್​ ಚಾನೆಲ್​ ಒಂದರ ಕ್ಯಾಮೆರಾಮನ್​ ಬಿಹಾರದ ಸ್ಥಳೀಯ ಚಾನೆಲ್​ 'ಫಸ್ಟ್​ ಬಿಹಾರ್​ ಚಾನೆಲ್​' ಪತ್ರಕರ್ತನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಭಾರಿ ನೋವು, ಆಘಾತ, ದುಃಖದಿಂದ ಟ್ವಿಟರ್​ನಲ್ಲಿ ಈ ಮಾಹಿತಿಯನ್ನು ವಿನೋದ್​ ಕಪ್ರಿ ಎನ್ನುವ ಪತ್ರಕರ್ತ ತೋಡಿಕೊಂಡಿದ್ದಾರೆ. ಜೋರಾಗಿ ಕಣ್ಣೀರು ಹಾಕಿರುವ ಈ ಪತ್ರಕರ್ತ ತನಗಾಗಿರುವ ಅನ್ಯಾಯವನ್ನು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ ತಾವು ಪಾಲ್ಗೊಂಡಿದ್ದ ಸಂದರ್ಭದಲ್ಲಿ ಈ ಕ್ಯಾಮೆರಾಮನ್​ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಕಾಲಿನಿಂದ ನನಗೆ ಒದ್ದಿದ್ದಾನೆ, ತಲೆಯ ಮೇಲೆ, ಹೊಟ್ಟೆಯ ಮೇಲೆ, ಮುಖದ ಮೇಲೆ ಒದ್ದಿದ್ದಾನೆ ಎಂದು ದುಃಖ ತೋಡಿಕೊಂಡಿದ್ದಾರೆ.

ಕೆಲವು ನ್ಯೂಸ್​ ಚಾನೆಲ್​ಗಳು ಪತ್ರಕರ್ತರನ್ನು ಬಿಟ್ಟು ಗೂಂಡಾಗಳನ್ನು ನೇಮಕ ಮಾಡಿಕೊಳ್ಳುತ್ತಿವೆಯೇ ಎಂದು ಪ್ರಶ್ನಿಸಿರುವ ಇವರು, ಇಂಥ ಪರಿಸ್ಥಿತಿಯಲ್ಲಿ ನಾನು ಬದುಕಲು ಸಾಧ್ಯವಿಲ್ಲ. ಇಂಥ ಗೂಂಡಾಗಳ ನಡುವೆ ನನಗೆ ಕೆಲಸ ನನ್ನ ಹುದ್ದೆಗೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net