ಕೊಲೆ ಆರೋಪಿ ದರ್ಶನ್​ ಜಾಮೀನು ಭವಿಷ್ಯಕ್ಕೆ ಕ್ಷಣಗಣನೆ! 'ಸುಪ್ರೀಂ' ಮಹತ್ವದ ತೀರ್ಪಿಗೂ ಮುನ್ನ ಪವಿತ್ರಾ ಪೋಸ್ಟ್​ | Darshan

Actor Darshan
Published on

Actor Darshan: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಎ2 ಆರೋಪಿ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನು ಭವಿಷ್ಯ ಇಂದು ಸುಪ್ರೀಂ ಅಂಗಳದಲ್ಲಿ ನಿರ್ಧಾರವಾಗಲಿದೆ.

ಆರೋಪಿಗಳಿಗೆ ಹೈಕೋರ್ಟ್​ ನೀಡಿರುವ ಷರತ್ತುಬದ್ಧ ಜಾಮೀನು ರದ್ದುಕೋರಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ರಾಜ್ಯ ಸರ್ಕಾರ ಪರ ವಕೀಲರು, ದರ್ಶನ್​ ಮತ್ತು 7 ಆರೋಪಿಗಳ ಜಾಮೀನನ್ನು ರದ್ದು ಮಾಡುವಂತೆ ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದ್ದಾರೆ. ಈಗಾಗಲೇ ಎರಡು ಕಡೆಯಿಂದ ವಾದ-ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್​, ಪ್ರಕರಣದ ತೀರ್ಪುನ್ನು ಕಾಯ್ದಿರಿಸಿತ್ತು. ಇಂದು ಈ ಕೇಸ್​ನ ಮಹತ್ವದ ತೀರ್ಪು ಹೊರಬೀಳಲಿದ್ದು, ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ.

ಪವಿತ್ರಾ ಗೌಡ ಪೋಸ್ಟ್​

ಇನ್ನು ನ್ಯಾಯದ ಭರವಸೆಯಲ್ಲಿರುವ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಸುಪ್ರೀಂಕೋರ್ಟ್​ ತೀರ್ಪಿಗೂ ಮುನ್ನವೇ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ, 'ಸತ್ಯ ಎಲ್ಲಕ್ಕಿಂತ ದೊಡ್ಡದು. ನ್ಯಾಯ ಸಿಕ್ಕೇ ಸಿಗುತ್ತದೆ' ಎಂದು ಭರವಸೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆ, ದರ್ಶನ್​ ಮತ್ತು ಗ್ಯಾಂಗ್​ನ ಜಾಮೀನು ಭವಿಷ್ಯ ಏನಾಗಲಿದೆ? ಎಂಬುದು ಇಂದಿನ 'ಸುಪ್ರೀಂ' ತೀರ್ಪಿನಲ್ಲಿ ಅಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net