ಗೋವಾ ಬೀಚ್​ನಲ್ಲಿ ಅಪಾಯಕಾರಿ ಜೆಲ್ಲಿ ಮೀನು!

Jelly Fish
Published on

ಪಣಜಿ: ಗೋವಾದ ಕೆಲವು ಬೀಚ್​ಗಳಲ್ಲಿ ಜೆಲ್ಲಿ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಜೆಲ್ಲಿ ಮೀನುಗಳಿರುವ ಪ್ರದೇಶಗಳಲ್ಲಿ ಜನರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ.

ಪ್ರಪಂಚದಾದ್ಯಂತದ ಕರಾವಳಿ ಪ್ರದೇಶಗಳನ್ನು ಬೆದರಿಸುವ ಕೆಲವು ಜಾತಿಯ ಜೆಲ್ಲಿ ಮೀನುಗಳು ವಿಷಪೂರಿತವಾಗಿವೆ ಮತ್ತು ಅವುಗಳು ಕಚ್ಚಿದರೆ ತೊಂದರೆಯುಂಟಾಗುವ ಸಾದ್ಯತೆ ಇದೆ. ಫಿಲಿಫೈನ್ಸ್​ನಂತಹ ದೇಶಗಳಲ್ಲಿ ಪ್ರತಿವರ್ಷ ಅನೇಕ ನಾಗರಿಕರು ಜೆಲ್ಲಿ ಮೀನುಗಳ ಕುಟುಕಿಗೆ ಬಲಿಯಾಗುತ್ತಾರೆ. ಗೋವಾ ರಾಜ್ಯದ ಕರಂಜಾಲೆ, ಮಿರಾಮಾರ್ ಸಿಕೇರಿ, ಸಮುದ್ರ ತೀರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆಲ್ಲಿ ಮೀನುಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net