

ಅಹಮದ್ನಗರ: ಮೇಕೆ , ಪಾರಿವಾಳ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಮೂವರು ದಲಿತ ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಆಕ್ರೋಶಭರಿತ ಘಟನೆ ಮಹಾರಾಷ್ಟ್ರದ ಅಹಮದ್ನಗರದ ಹರೇಗಾಂವ್ನಲ್ಲಿ ನಡೆದಿದೆ.
ಹರೇಗಾಂವ್ನಲ್ಲಿ ಕೂಲಿ ಮಾಡುತ್ತಿದ್ದ ಮೂವರು ದಲಿತ ಯುವಕರು ಉಂಡಿರ್ಗಾಂವ್ನ ಗಲಾಂಡೆ ಬಡಾವಣೆಯಿಂದ ಯುವಕರು ಮೇಕೆ ಮತ್ತು ನಾಲ್ಕು ಪಾರಿವಾಳಗಳನ್ನು ಕದ್ದಿದ್ದಾರೆ ಎಂದು ಶಂಕಿಸಲಾಗಿದೆ. ಆ ಬಳಿಕ ಶುಭಂ ವಾಘಡೆ, ಕುನಾಲ್ ಮಗರ್, ಓಂ ಗಾಯಕವಾಡ ಎಂಬುವರನ್ನು ಥಳಿಸಲಾಗಿದ್ದು, ವಿವಸ್ತ್ರಗೊಳಿಸಿ ಮರಕ್ಕೆ ತಲೆಕೆಳಗಾಗಿ ನೇತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸೊಸೆಯ ಮಾನ ಉಳಿಸುವ ಸಲುವಾಗಿ ಗಂಡನ ಪ್ರಾಣ ತೆಗೆದ ಅತ್ತೆ..
ಘಟನೆಯಲ್ಲಿ ಗಾಯಗೊಂಡಿರುವ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಉಪ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತ ಯುವಕರ ವಿಚಾರಣೆ ನಡೆಸಿದ್ದು, ಅವರ ಹಾಗೂ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ತಾಳ್ಮೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.(ಏಜೆನ್ಸೀಸ್)