ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಿತವಚನದಿಂದ ಸ್ಪೂರ್ತಿ ಸಿಗಲಿದೆ

Nithya Bhavishya
Published on

ಮೇಷ: ಆಟೋಮೊಬೈಲ್ ವ್ಯಾಪಾರದಲ್ಲಿ ಲಾಭ. ವೀಸಾ ಸಮಸ್ಯೆಯಿಂದ ಪ್ರಯಾಣ ರದ್ದು. ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗ. ಶುಭಸಂಖ್ಯೆ:2

ವೃಷಭ: ನನೆಗುದಿಗೆ ಬಿದ್ದ ಕೆಲಸಕ್ಕೆ ಪುನರ್​ಚಾಲನೆ. ಟಿವಿ ಮತ್ತು ಮೊಬೈಲ್ ಮಾರಾಟದಲ್ಲಿ ಅಧಿಕ ಲಾಭ. ಕೆಲಸಗಾರರಿಂದ ಮೋಸ. ಶುಭಸಂಖ್ಯೆ: 6

ಮಿಥುನ: ಅಧ್ಯಾತ್ಮದೆಡೆ ಮನಸ್ಸು. ವೈದಿಕ ವೃತ್ತಿಯವರಿಗೆ ಅನಿರೀಕ್ಷಿತ ಧನ ಲಾಭವಾಗಲಿದೆ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ದಿಯಾಗುವುದು. ಶುಭಸಂಖ್ಯೆ: 9

ಕಟಕ: ಕಿರುಚಿತ್ರ ನಟರಿಗೆ ಹೇರಳ ಅವಕಾಶ. ಲೆಕ್ಕಪರಿಶೋಧಕರ ವೃತ್ತಿಯಲ್ಲಿ ಒತ್ತಡ. ಸಹೋದ್ಯೋಗಿಗಳಿಂದ ಸ್ತ್ರೀಯರಿಗೆ ಕಿರುಕುಳ. ಶುಭಸಂಖ್ಯೆ:3

ಸಿಂಹ: ಶಸ್ತ್ರ ಚಿಕಿತ್ಸೆ ಸಾಧ್ಯತೆ. ಮಕ್ಕಳ ಭವಿಷ್ಯದ ಚಿಂತೆ ಆವರಿಸಲಿದೆ. ಟ್ರಾವೆಲ್ಸ್ ಮಾಲೀಕರಿಗೆ ಚಾಲಕರಿಂದ ಮೋಸವಾಗಬಹುದು. ಶುಭಸಂಖ್ಯೆ:8

ಕನ್ಯಾ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಶುಭಸಂಖ್ಯೆ: 6

ತುಲಾ: ವೃತ್ತಿಯಲ್ಲಿ ಸವಾಲು ಎದುರಾಗಲಿದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಗೊಂದಲ. ಆದಾಯ ಅಧಿಕಾರಿಗಳಿಂದ ದಾಳಿ ಸಾಧ್ಯತೆ. ಶುಭಸಂಖ್ಯೆ: 1

ವೃಶ್ಚಿಕ: ಹೋಟೆಲ್ ವ್ಯವಹಾರದಲ್ಲಿ ಲಾಭ. ಹಿತಶತ್ರುಗಳಿಂದ ಪದವಿಪ್ರಾಪ್ತಿಯಲ್ಲಿ ಅಡೆತಡೆ. ರಾಜಕೀಯದಲ್ಲಿ ಇರುವವರಿಗೆ ವಿಶೇಷ ದಿನ. ಶುಭಸಂಖ್ಯೆ: 3

ಧನುಸ್ಸು: ಜಲೋತ್ಪನ್ನ ವ್ಯಾಪಾರದಿಂದ ಲಾಭ. ಕೃಷಿಕರಿಗೆ ಖರೀದಿಯಲ್ಲಿ ನಷ್ಟವಾಗಬಹುದು. ಗ್ರಂಥಿಗೆ ಅಂಗಡಿಯವರಿಗೆ ಹಣ ಲಾಭ. ಶುಭಸಂಖ್ಯೆ: 5

ಮಕರ: ವೈದ್ಯರಿಗೆ ಸಮಾಜದಲ್ಲಿ ಮನ್ನಣೆ. ಯಕ್ಷಗಾನ ಮತ್ತು ನಾಟಕ ಕಲಾವಿದರಿಗೆ ಸನ್ಮಾನ. ನವ ವಿವಾಹಿತರಿಗೆ ಶುಭಸುದ್ದಿ ಬರಲಿದೆ. ಶುಭಸಂಖ್ಯೆ: 6

ಕುಂಭ:  ಹಿತವಚನದಿಂದ ಸ್ಪೂರ್ತಿ ಸಿಗಲಿದೆ. ವಿದ್ಯುತ್ ವಿಭಾಗದ ಕೆಲಸಗಾರರಿಗೆ ಹೆಚ್ಚಿದ ಒತ್ತಡ. ಉದರ ಸಂಬಂಧಿ ರೋಗ ಉಲ್ಬಣ. ಶುಭಸಂಖ್ಯೆ: 7

ಮೀನ: ಗೃಹ ನಿರ್ವಣಕ್ಕೆ ಚಾಲನೆ. ಸಾಧುಸಂತರ ಭೇಟಿ. ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಯಶಸ್ಸು. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net