

ಮೇಷ: ಹೊಸ ಕೆಲಸದಲ್ಲಿ ಗೊಂದಲವಾಗುವುದು. ಕಠಿಣ ಶ್ರಮದಿಂದ ಫಲ. ಆಸ್ತಿ ವಿಷಯಕ್ಕೆ ಕುಟುಂಬದ ಸದಸ್ಯರಿಂದ ತೊಂದರೆ. ಶುಭಸಂಖ್ಯೆ: 5
ವೃಷಭ: ದಾಂಪತ್ಯ ಜೀವನದಲ್ಲಿ ವ್ಯತ್ಯಾಸವಾಗಬಹುದು. ಆಸ್ತಿ ನೊಂದಣಿಯಲ್ಲಿ ಸಮಸ್ಯೆ. ಹೂಡಿಕೆದಾರರಿಗೆ ಇಂದು ಒಳ್ಳೆಯ ಸಮಯ. ಶುಭಸಂಖ್ಯೆ: 1
ಮಿಥುನ: ಮಾನಸಿಕ ಭಯ ಅಧಿಕ. ಬೋರವೆಲ್ ಕೊರೆವ ವ್ಯಾಪಾರದಲ್ಲಿ ಲಾಭ. ಸಾರಿಗೆ ಇಲಾಖೆಯ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ: 9
ಕಟಕ: ಗೃಹ ಕೈಗಾರಿಕೆಗೆ ಸಂಬಂಧಿಸಿದ ವ್ಯವಹಾರದಲ್ಲಿ ನಷ್ಟ. ಆರೋಗ್ಯದಲ್ಲಿ ಚೇತರಿಕೆ. ನೀರಿಗೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭ. ಶುಭಸಂಖ್ಯೆ: 3
ಸಿಂಹ: ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ. ರಕ್ಷಣಾ ಕ್ಷೇತ್ರದವರಿಗೆ ಆತ್ಮಸ್ಥೈರ್ಯದ ಕೊರತೆ. ಮೇಲಧಿಕಾರಿಗಳೊಂದಿಗೆ ವಾಗ್ವಾದ. ಶುಭಸಂಖ್ಯೆ: 8
ಕನ್ಯಾ: ಶಿಕ್ಷಣ ಸಂಬಂಧಿತ ಸಂಸ್ಥೆಯವರಿಗೆ ಜನಪ್ರಿಯತೆ ಪ್ರಾಪ್ತವಾಗಲಿದೆ. ವಾಹನ ಕೊಳ್ಳುವ ಚಿಂತನೆ. ದಿನಸಿ ವ್ಯಾಪಾರದಲ್ಲಿ ಪ್ರಗತಿ. ಶುಭಸಂಖ್ಯೆ: 4
ತುಲಾ: ಭೂಮಿಯ ವ್ಯವಹಾರದಲ್ಲಿ ಲಾಭ. ಚಿನ್ನದ ವ್ಯಾಪಾರದಲ್ಲಿ ಆದಾಯ. ಉದ್ಯಮಿ ಮಹಿಳೆಯರಿಗೆ ವೃತ್ತಿಯಲ್ಲಿ ಲಾಭ. ಶುಭಸಂಖ್ಯೆ: 6
ವೃಶ್ಚಿಕ: ಮನೋಧೈರ್ಯ ದ್ವಿಗುಣವಾಗುವುದು. ಪತ್ರಿಕೋದ್ಯಮ ವೃತ್ತಿಯಲ್ಲಿದ್ದವರಿಗೆ ಲಾಭ. ಅಧಿಕಾರಿಗಳಿಗೆ ಸಾರ್ವಜನಿಕರಿಂದ ಒತ್ತಡ. ಶುಭಸಂಖ್ಯೆ: 7
ಧನಸ್ಸು: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ವಿಪರೀತ ಗಾಬರಿ ಆಗಬೇಡಿ. ಅವಕಾಶಗಳ ಸದ್ಬಳಕೆ ಅನಿವಾರ್ಯ. ಶುಭಸಂಖ್ಯೆ: 2
ಮಕರ: ಆಸೆಗಳು ಈಡೇರಿ ಮಾನಸಿಕ ಸಮಾಧಾನ. ತಂದೆಯ ಬಂಧುಗಳಿಂದ ನಷ್ಟವಾಗಬಹುದು. ಪ್ರಯಾಣ ಮಾಡುವ ಸಂಭವ. ಶುಭಸಂಖ್ಯೆ: 5
ಕುಂಭ: ಭೂ ವ್ಯವಹಾರದಲ್ಲಿ ನಷ್ಟದ ಪ್ರಮಾಣ ಅಧಿಕ. ಬಡ್ತಿ ಮತ್ತು ಪ್ರಶಂಸೆಯಿಂದ ಸಂತಸ. ದಾಂಪತ್ಯ ಸಮಸ್ಯೆ ನಿವಾರಣೆಯಾಗಲಿದೆ. ಶುಭಸಂಖ್ಯೆ: 6
ಮೀನ: ಐಟಿ ಕ್ಷೇತ್ರದಲ್ಲಿ ಉದ್ಯೋಗ ದೊರೆತು ಕನಸು ನನಸು. ಕುಟುಂಬದಲ್ಲಿರುವ ಶತ್ರುದಮನ. ರೋಗ ಭಾದೆಗಳಿಂದ ಮುಕ್ತಿ. ಶುಭಸಂಖ್ಯೆ: 1