ಈ ರಾಶಿಯವರಿಗಿಂದು ವಿಶೇಷ ಧನ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿವಾಹ ಕಾರ್ಯ ವಿಳಂಬ. ತಾಯಿಗೆ ರೋಗಬಾಧೆ ಕಾಡಲಿದೆ. ಅಕಾಲ ಭೋಜನ. ವ್ಯಾಪಾರದಲ್ಲಿ ಅತಿಯಾದ ಒತ್ತಡ, ಧನ ನಷ್ಟ. ಶುಭಸಂಖ್ಯೆ: 6

ವೃಷಭ: ಅನವಶ್ಯಕ ವಸ್ತುಗಳ ಖರೀದಿ ನಿಯಂತ್ರಿಸಿದರೆ ಕ್ಷೇಮ. ಮಿತ್ರರಿಂದ ಸಹಾಯ. ಶತ್ರು ಬಾಧೆ. ಅಪರಿಚಿತರ ಮಾತಿಗೆ ಮರುಳಾಗದಿರಿ. ಶುಭಸಂಖ್ಯೆ: 9

ಮಿಥುನ: ತೀರ್ಥಯಾತ್ರೆ ಮಾಡುವಿರಿ. ಸಾಲ ತೀರಿಸಲು ಆರ್ಥಿಕ ಮೂಲ ಪ್ರಾಪ್ತಿ. ಮಕ್ಕಳಿಂದ ನೋವು. ಅಲ್ಪ ಕಾರ್ಯಸಿದ್ಧಿ. ನೆಮ್ಮದಿ ಇಲ್ಲ. ಶುಭಸಂಖ್ಯೆ: 8

ಕಟಕ: ಹಿರಿಯರ ಭೇಟಿ ಮಾಡುವಿರಿ. ವ್ಯವಹಾರದಲ್ಲಿ ನಂಬಿಕೆ ದ್ರೋಹ. ವಿದ್ಯಾಭಿವೃದ್ಧಿ. ನ್ಯಾಯಾಲಯದ ಕೆಲಸಗಳಲ್ಲಿ ಜಯ. ಶುಭಸಂಖ್ಯೆ: 4

ಸಿಂಹ: ಪ್ರಿಯ ಜನರ ಭೇಟಿ. ಹೊಸ ವ್ಯವಹಾರದಿಂದ ಲಾಭ. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಅಮೂಲ್ಯ ವಸ್ತುವಿನ ನಷ್ಟ. ಶುಭಸಂಖ್ಯೆ: 4

ಕನ್ಯಾ: ಮನೆಯಲ್ಲಿ ಸಂತಸ. ಕಲಾವಿದರಿಗೆ ವಿಶೇಷ ಧನ ಲಾಭ. ಅಧಿಕ ಖರ್ಚು. ಶತ್ರು ಬಾಧೆ. ಆಸ್ತಿ ವಿಚಾರಗಳು ಬಗೆಹರಿಯುತ್ತವೆ. ಶುಭಸಂಖ್ಯೆ: 7

ತುಲಾ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಮಾನಸಿಕ ಒತ್ತಡ. ಅನ್ಯರಲ್ಲಿ ದ್ವೇಷ. ಉದ್ಯೋಗದಲ್ಲಿ ಬಡ್ತಿ. ಕಾರ್ಯಕ್ಷೇತ್ರದಲ್ಲಿ ಒತ್ತಡ ಹೆಚ್ಚಲಿದೆ. ಶುಭಸಂಖ್ಯೆ: 1

ವೃಶ್ಚಿಕ: ಷೇರು ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ವಾಣಿಜ್ಯ ಒಪ್ಪಂದಕ್ಕೆ ಸಹಿ ಮಾಡುವಿರಿ. ಮಕ್ಕಳಿಂದ ಸಾಧನೆ. ಉತ್ತಮ ಪ್ರಗತಿ. ಶುಭಸಂಖ್ಯೆ: 6

ಧನುಸ್ಸು: ನಿರೀಕ್ಷಿತ ಆದಾಯ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಪ್ರೀತಿ ಪಾತ್ರರೊಡನೆ ಬಾಂಧವ್ಯ ವೃದ್ಧಿಸುವುದು. ಶುಭಸಂಖ್ಯೆ: 7

ಮಕರ: ದೇವತಾ ಕಾರ್ಯಗಳಲ್ಲಿ ಒಲವು. ಮಾತಾಪಿತರರಿಂದ ಅಡೆತಡೆ. ಶ್ರಮಕ್ಕೆ ತಕ್ಕ ಫಲ ಸಿಗುವುದು. ನೂತನ ಗೃಹಾರಂಭದ ಸುದಿನ. ಶುಭಸಂಖ್ಯೆ: 7

ಕುಂಭ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಅವಿವಾಹಿತರಿಗೆ ವಿವಾಹ ಯೋಗ. ಶತ್ರು ಬಾಧೆ. ಸ್ತ್ರೀಯರು ತಾಳ್ಮೆಯಿಂದ ಇರಿ. ಶುಭಸಂಖ್ಯೆ: 2

ಮೀನ: ಸ್ವಸ್ಥ ಮನಸ್ಸು ಮುಖ್ಯ. ಮನಃಶಾಂತಿ. ಪತ್ರಕರ್ತರು, ಸಾಹಿತಿಗಳಿಗೆ ಸಮಾಜದಲ್ಲಿ ಮನ್ನಣೆ. ಕಚೇರಿಯಲ್ಲಿ ಅಸಹನೆಯಿಂದ ಕಲಹ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net