ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇತಿಹಾಸ ರಚಿಸಿದ ರವೀಂದ್ರ ಜಡೇಜಾ

Ravindra jadeja

ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಂಡಾಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಎದುರಾಳಿಗಳ ವಿರುದ್ಧ ಅತಿಥೇಯರು ಮೇಲುಗೈ ಸಾಧಿಸಿದ್ದು, ಟೀಂ ಇಂಡಿಯಾದ ಸ್ಪಿನ್ನರ್​ಗಳು ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್​ 246 ರನ್​ಗಳಿಗೆ ಆಲೌಟ್​ ಆಗಿದೆ. ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಸ್ಪಿನ್ನರ್​ಗಳಾದ ರವೀಂದ್ರ ಜಡೇಜಾ, ಆರ್​. ಅಶ್ವಿನ್​, ಅಕ್ಷರ್​ ಪಟೇಲ್​ ಕ್ರಮವಾಗಿ 3, 3, 2 ವಿಕೆಟ್​ ಪಡೆದಿದ್ದಾರೆ. ಈ ಮೂಲಕ ಎದುರಾಳಿ ತಂಡವನ್ನು ಮೊದಲ ದಿನದ ಅಂತ್ಯಕ್ಕೂ ಮುನ್ನ ಆಲೌಟ್​ ಮಾಡಿದ್ದಾರೆ.

ದಿನದಾಟದ ಆರಂಭದಲ್ಲೇ ವಿಕೆಟ್ ಕಬಳಿಸುವ ಮೂಲಕ ಆಂಗ್ಲರಿಗೆ ಆರಂಭಿಕ ಆಘಾತ ನೀಡಿದ ಜಡೇಜಾ ಪ್ರಮುಖ 3 ವಿಕೆಟ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಾಧನೆ ಮಾಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 550 ವಿಕೆಟ್​ ಕಬಳಿಸಿದ ಸ್ಪಿನ್ನರ್​​ ಎಂಬ ದಾಖಲೆಯನ್ನು ಜಡೇಜಾ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 550ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ 7ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Team India

ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ನಂಬಿಕೆಯೊಂದಿಗೆ ಬಿಜೆಪಿ ಸೇರಿದ್ದೇನೆ: ಜಗದೀಶ್​ ಶೆಟ್ಟರ್

ರವೀಂದ್ರ ಜಡೇಜಾಗಿಂತ ಮೊದಲು ಕಪಿಲ್​ ದೇವ್​, ಜಾವಗಲ್ ಶ್ರೀನಾಥ್, ಅನಿಲ್​ ಕುಂಬ್ಳೆ, ಜಹೀರ್ ಖಾನ್, ಹರ್ಭಜನ್ ಸಿಂಗ್ ಮತ್ತು ಆರ್ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. ಭಾರತದ ಪರ ಅನಿಲ್​ ಕುಂಬ್ಳೆ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆದಿದ್ದು, ಅವರ ಖಾತೆಯಲ್ಲಿ ಬರೋಬ್ಬರಿ 956 ವಿಕೆಟ್‌ಗಳಿವೆ.

ಟೀಂ ಇಂಡಿಯಾ ಪರ ಮೂರು ಮಾದರಿಗಳಲ್ಲಿ ಕಣಕ್ಕಿಳಿದಿರುವ ರವೀಂದ್ರ ಜಡೇಜಾ 68 ಟೆಸ್ಟ್ ಪಂದ್ಯಗಳಲ್ಲಿ 275 ವಿಕೆಟ್, 197 ಏಕದಿನ ಪಂದ್ಯಗಳಲ್ಲಿ 220 ವಿಕೆಟ್ ಹಾಗೂ 66 ಟಿ20 ಪಂದ್ಯಗಳಲ್ಲಿ 53 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಬ್ಯಾಟಿಂಗ್​ನಲ್ಲಿ ಕೊಡುಗೆ ನೀಡಿರುವ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 2804 ರನ್ ಮತ್ತು ಏಕದಿನದಲ್ಲಿ 2756 ರನ್ ಗಳಿಸಿದ್ದಾರೆ.

Share This Article

ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್​ ಮಾಡಿಕೊಳ್ಳಿ

ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು…

ಇವುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ರೆ ಸಾಕು! ಚೆನ್ನಾಗಿ ನಿದ್ದೆ ಜತೆ, ಶ್ರೀಮಂತರಾಗೋದು ಪಕ್ಕಾ!

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣ ಅಥವಾ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈಗ ಹೇಳಿರುವ ಸರಳ ಪರಿಹಾರಗಳನ್ನು…

ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!

ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…