

ಮೇಷ: ಅಧಿಕ ಧನಾಗಮನವಾಗಲಿದೆ. ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ ಉಂಟಾಗಬಹುದು. ಮಕ್ಕಳ ನಡತೆಯಿಂದ ಆತಂಕ. ಶುಭಸಂಖ್ಯೆ: 5
ವೃಷಭ: ಕೃಷಿ ವ್ಯವಹಾರದಲ್ಲಿ ಅನುಕೂಲ. ಶತ್ರುಗಳಿಂದ ವೇದನೆ. ಸಾಲ ಮಾಡುವ ಸನ್ನಿವೇಶ. ಹೃದಯದ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5
ಮಿಥುನ: ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಆತಂಕ. ಔತಣಕೂಟಕ್ಕೆ ಅಧಿಕ ಖರ್ಚು. ಅತಿಯಾದ ಖಿನ್ನತೆಯ ಭಾವನೆ ಕಾಡುವುದು. ಶುಭಸಂಖ್ಯೆ: 9
ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟವಾದೀತು. ವಿಚ್ಛೇದನದ ವಿಷಯಗಳಿಂದ ಸಮಸ್ಯೆ. ಸ್ಥಿರಾಸ್ತಿ ಮತ್ತು ವಾಹನ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 3
ಸಿಂಹ: ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಗೌರವ ಪ್ರಾಪ್ತಿ. ಬಾಂಧವರಿಂದ ಕಷ್ಟದಲ್ಲಿ ಸಹಾಯ. ವಿಲಾಸಿ ಜೀವನಕ್ಕೆ ಬಲಿಯಾಗುವಿರಿ. ಶುಭಸಂಖ್ಯೆ: 7
ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ದೂರ ಪ್ರದೇಶದಲ್ಲಿ ಉದ್ಯೋಗ. ಸ್ವಂತ ಉದ್ಯೋಗದವರಿಗೆ ಸಕಾರಾತ್ಮಕ ಬೆಳವಣಿಗೆ. ಶುಭಸಂಖ್ಯೆ: 2
ತುಲಾ: ಹಳೆಯ ಮಿತ್ರರ ಭೇಟಿ. ಅವಿವಾಹಿತರು ಕಲ್ಪನೆಗಳಲ್ಲಿ ವಿಹರಿಸುವಿರಿ. ಸ್ವಉದ್ಯಮದಲ್ಲಿ, ಜಲೋತ್ಪನ್ನ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8
ವೃಶ್ಚಿಕ: ಸಂಗಾತಿಯಿಂದ ಕಿರಿಕಿರಿ. ಆಕಸ್ಮಿಕ ಘಟನೆ. ಪ್ರಯಾಣದಿಂದ ನಿರೀಕ್ಷಿತ ಬದಲಾವಣೆ. ಉದ್ಯೋಗ ಸ್ಥಳದಲ್ಲಿ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 3
ಧನುಸ್ಸು: ಸಂಗಾತಿಗೆ ಅನಾರೋಗ್ಯ ಸಮಸ್ಯೆ. ಆರ್ಥಿಕ ವ್ಯವಹಾರಗಳಲ್ಲಿ ಯಶಸ್ಸು ಸಿಗುವುದು. ಶತ್ರು ಕಾಟ. ಮಗಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 4
ಮಕರ: ಅನಿರೀಕ್ಷಿತವಾಗಿ ಪ್ರೀತಿಯಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ಅನುಕೂಲ. ಉತ್ತಮ ಹೆಸರು ಸ್ನೇಹಿತರಿಗಾಗಿ ಅಧಿಕ ಖರ್ಚು. ಶುಭಸಂಖ್ಯೆ: 6
ಕುಂಭ: ಮಕ್ಕಳ ವಿವಾಹ ವಿಳಂಬ. ಪ್ರಯಾಣದಲ್ಲಿ ಅನಾರೋಗ್ಯ ಕಾಡೀತು. ನೂತನ ಗೃಹ ನಿರ್ಮಾಣ ಪ್ರಾರಂಭ. ಉನ್ನತ ವಿದ್ಯಾಯೋಗ. ಶುಭಸಂಖ್ಯೆ: 3
ಮೀನ: ಆಕಸ್ಮಿಕ ಅನಾರೋಗ್ಯ ಸಮಸ್ಯೆ. ಬಂಧುಗಳೊಂದಿಗೆ ಉತ್ತಮ ಬಾಂಧವ್ಯ. ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 1