ಈ ರಾಶಿಯವರಿಗಿಂದು ಆಕಸ್ಮಿಕ ಧನಾಗಮನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪತ್ನಿಯ ಆರೋಗ್ಯಕ್ಕಾಗಿ ಧನವ್ಯಯ. ಗೃಹ ನಿರ್ವಣದ ಕೆಲಸಕ್ಕೆ ಪ್ರಯತ್ನದ ಅಗತ್ಯವಿದೆ. ಸಾಹಸ ಕಾರ್ಯದತ್ತ ಆಸಕ್ತಿ. ಶುಭಸಂಖ್ಯೆ: 5

ವೃಷಭ: ವಿವಾದಗಳಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ದುಬಾರಿ ವಸ್ತುಗಳ ಕಳವು ಆಗಬಹುದು. ವಿವಾಹ ಕಾರ್ಯಕ್ಕೆ ಅಡೆತಡೆ. ಶುಭಸಂಖ್ಯೆ: 1

ಮಿಥುನ: ಸಹೋದ್ಯೋಗಿಗಳೊಂದಿಗೆ ಅನವಶ್ಯಕ ಜಗಳ. ಕುಟುಂಬದಲ್ಲಿ ಶುಭಕಾರ್ಯದ ಸಂಭ್ರಮ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 5

ಕಟಕ: ವಿವಾಹಾಕಾಂಕ್ಷಿಗಳಿಗೆ ಶುಭ ಸಮಾಚಾರ. ಪತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ವ್ಯಾಪಾರದಲ್ಲಿ ಶತ್ರುಗಳಿಗೆ ಸೋಲು. ಶುಭಸಂಖ್ಯೆ: 3

ಸಿಂಹ: ಶತ್ರುಗಳಿಂದ ತೊಂದರೆಯಾಗಬಹುದು. ಆಕಸ್ಮಿಕ ಧನಾಗಮನ. ಸಣ್ಣಪುಟ್ಟ ಗಾಯವಾಗುವ ಸಾಧ್ಯತೆ. ವಾಹನ ಖರೀದಿಗೆ ಸಕಾಲ. ಶುಭಸಂಖ್ಯೆ: 8

ಕನ್ಯಾ: ನವ ದಂಪತಿಗೆ ಸಂತಾನ ಯೋಗ. ಆಸ್ತಿ ನೋಂದಣಿ ಪ್ರಯತ್ನಗಳಲ್ಲಿ ಅನುಕೂಲವಿದೆ. ವಿದ್ಯಾರ್ಥಿನಿಯರಿಗೆ ಮನಸ್ಸಿನಲ್ಲಿ ಭಯ. ಶುಭಸಂಖ್ಯೆ: 6

ತುಲಾ: ಮುಖ್ಯ ವಿಷಯದ ನಿರ್ಧಾರ ತೆಗೆದುಕೊಳ್ಳುವಲ್ಲಿ ಚಂಚಲ ಮನಸ್ಸು. ಶತ್ರು ನಿಗ್ರಹ. ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 7

ವೃಶ್ಚಿಕ: ಮಾನಸಿಕ ಭಯ ಕಾಡುವುದು. ಹಿರಿಯರಿಗಾಗಿ ಹಣವ್ಯಯ ಮಾಡಬೇಕಾಗುವುದು. ನಟರಿಗೆ ಅಧಿಕ ಅವಕಾಶಗಳು ಪ್ರಾಪ್ತಿ. ಶುಭಸಂಖ್ಯೆ: 7

ಧನುಸ್ಸು: ದಾಂಪತ್ಯದಲ್ಲಿ ವಿರಸ ಉಂಟಾಗುವ ಸಾಧ್ಯತೆ. ಗೋದಾಮು ಸ್ಥಳ ಖರೀದಿ. ಆಹಾರ ಉತ್ಪನ್ನ ವ್ಯಾಪಾರಿಗಳಿಗೆ ಶುಭದಾಯಕ ದಿನ. ಶುಭಸಂಖ್ಯೆ: 8

ಮಕರ: ಮಕ್ಕಳ ವಿವಾಹ ವಿಳಂಬವಾಗುತ್ತಿರುವ ಚಿಂತೆ. ವಾದ ವಿವಾದಗಳಲ್ಲಿ ಅಪಜಯ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 4

ಕುಂಭ: ಸಹೋದರನಿಂದ ಸಹಾಯ ಸಿಗಲಿದೆ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಸಾರ್ವಜನಿಕವಾಗಿ ಮಾತಿನಲ್ಲಿ ಹಿಡಿತವಿದ್ದರೆ ಕ್ಷೇಮ. ಶುಭಸಂಖ್ಯೆ: 2

ಮೀನ: ಅಡಕೆ ಮತ್ತು ಏಲಕ್ಕಿ ಬೇಸಾಯಗಾರರಿಗೆ ನಷ್ಟ. ವಾಹನ ಅಪಘಾತ ಆಗಬಹುದು, ಎಚ್ಚರ. ಸಾಲ ಕೊಟ್ಟ ಹಣ ತಿರುಗಿ ಬರಲಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net