ಈ ರಾಶಿಯವರಿಗಿಂದು ಪಾಲುದಾರಿಕೆಯಲ್ಲಿ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಸ್ತಿ ವಿಚಾರದಲ್ಲಿ ಎಚ್ಚರವಿರಲಿ. ಮನೆ ನಿರ್ವಣದ ತೊಂದರೆಗಳು ದೂರವಾಗಲಿವೆ. ಬೆನ್ನು ಮತ್ತು ಹಲ್ಲುಗಳ ಸಮಸ್ಯೆ. ಶುಭಸಂಖ್ಯೆ: 5

ವೃಷಭ: ಹಿರಿಯರಿಂದ ಜ್ಞಾನ ವೃದ್ಧಿಯಾಗಲಿದೆ. ಪತ್ನಿಯಿಂದ ಸಾಲ ತೀರಿಸಲು ಸಹಕಾರ ಸಿಗುವುದು. ಗೃಹ ನಿರ್ವಣಕ್ಕೆ ಹಿನ್ನಡೆ. ಶುಭಸಂಖ್ಯೆ: 9

ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು. ಹಿರಿಯರೊಂದಿಗೆ ವಾದ-ವಿವಾದ ಉಂಟಾಗಬಹುದು. ಪುಸ್ತಕ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಶುಭಸಂಖ್ಯೆ: 1

ಕಟಕ: ವ್ಯಾಪಾರದಲ್ಲಿ ಮಂದಗತಿಯ ಪ್ರಗತಿ. ಭೂ ವ್ಯವಹಾರದ ಕೆಲಸ ಕಾರ್ಯಗಳಲ್ಲಿ ಎಚ್ಚರ ವಹಿಸಿ. ಮೋಸ ಹೋಗುವ ಸಂಭವ. ಶುಭಸಂಖ್ಯೆ: 7

ಸಿಂಹ: ಸುಖಮಯ ಜೀವನದ ಚಿಂತನೆ ಮಾಡುವಿರಿ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ. ರಾಜಕೀಯ ಪ್ರವೇಶದ ಆಲೋಚನೆ. ಶುಭಸಂಖ್ಯೆ: 3

ಕನ್ಯಾ: ಇಂದು ನಿಮ್ಮ ಜೀವನದಲ್ಲಿ ಅನಿರೀಕ್ಷಿತ ತಿರುವು. ಚಿಕ್ಕ ವ್ಯಾಪಾರಿಗಳಿಗೆ ಧನ ಹಾನಿ. ಕೃಷಿಕರಿಗೆ ಆರ್ಥಿಕ ಸ್ಥಿತಿಯಲ್ಲಿ ಏರುಪೇರು. ಶುಭಸಂಖ್ಯೆ: 3

ತುಲಾ: ವೈದ್ಯರಿಗೆ ರೋಗಿಗಳೊಂದಿಗೆ ಉತ್ತಮ ಬಾಂಧವ್ಯ. ಮಾಧ್ಯಮ ಕ್ಷೇತ್ರದವರಿಗೆ ಮಾನಸಿಕ ಒತ್ತಡ. ಪಾಲುದಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 4

ವೃಶ್ಚಿಕ: ಖರೀದಿಯಲ್ಲಿ ಮೋಸ ಹೋಗುವ ಸಂಭವ. ಹಾರ್ಡ್​ವೇರ್ ವ್ಯಾಪಾರದಲ್ಲಿ ನಷ್ಟ. ಕಾರ್ಖಾನೆ ಉದ್ಯೋಗಿಗಳಿಗೆ ಬಡ್ತಿ ಯೋಗ. ಶುಭಸಂಖ್ಯೆ: 2

ಧನಸ್ಸು: ಕೊಟ್ಟ ಹಣ ಕೈ ಸೇರುತ್ತದೆ. ವಿವಾದ ಎದುರಾಗಲಿದೆ. ರಕ್ತದ ಸಮಸ್ಯೆ. ಗಾಯಕರು ಮತ್ತು ವಾದಕರಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ: 8

ಮಕರ: ವಿಚ್ಛೇದಿತ ಸಂಗಾತಿಯಿಂದ ಕಿರಿಕಿರಿ ಉಂಟಾಗ ಬಹುದು. ವ್ಯಾಪಾರದಲ್ಲಿ ಅನಿರೀಕ್ಷಿತ ಕುಸಿತ. ಪತ್ನಿಗೆ ಮನೋವ್ಯಾಧಿ ಕಾಡುವುದು. ಶುಭಸಂಖ್ಯೆ: 1

ಕುಂಭ: ವ್ಯಾಪಾರದಲ್ಲಿ ವಿದೇಶಿ ಹೂಡಿಕೆದಾರರ ಆಗಮನ. ಆಲಸ್ಯ ಮನೋಭಾವ ಕಾಡುವುದು. ಸಹೋದರರೊಂದಿಗೆ ವೈಮನಸ್ಸು. ಶುಭಸಂಖ್ಯೆ: 1

ಮೀನ: ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟವಾದೀತು. ಅಪರಿಚಿತ ವ್ಯಕ್ತಿಯಿಂದ ಮೋಸ. ಹಿರಿಯರಿಗೆ ಬೇಸರ ಉಂಟು ಮಾಡಬೇಡಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net