301 ರನ್​ಗಳ ಭರ್ಜರಿ ಲೀಡ್​ ಪಡೆದ NewZealand; ಸರಣಿ ಕೈತಪ್ಪುವ ಭೀತಿಯಲ್ಲಿ Team India

Team India
Published on

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯಷನ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್​ (NewZealand)  ನಡುವಿನ ಟೆಸ್ಟ್​ ಸರಣಿಯ (Test Series) ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡವು 301 ರನ್​ಗಳ ಮುನ್ನಡೆ ಸಾಧಿಸಿದ್ದು, ಆತಿಥೇಯರಿಗೆ ಸೋಲಿನ ಭೀತಿ ಎದುರಾಗಿದೆ. ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 53 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 198 ರನ್​ ಗಳಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ನ್ಯೂಜಿಲೆಂಡ್​ (NewZealand) ತಂಡವು ವಾಷಿಂಗ್ಟನ್​ ಸುಂದರ್​. ಆರ್​. ಅಶ್ವಿನ್​ ಆಫ್​ಸ್ಪಿನ್​​ ದಾಳಿಗೆ ನಲುಗಿ 259 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ (Team India) 156 ರನ್‌ಗಳಿಗೆ ಆಲೌಟ್ ಆಗಿತ್ತು.  103 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್​ ತಂಡವು ನಾಯಕ ಟಾಮ್​ ಲಾಥಮ್​ (86 ರನ್​, 133 ಎಸೆತ, 10 ಬೌಂಡರಿ) ದಿಟ್ಟ ಬ್ಯಾಟಿಂಗ್​ ಫಲವಾಗಿ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 198 ರನ್​ ಗಳಿಸಿತು. ವಾಷಿಂಗ್ಟನ್​ ಸುಂದರ್​ (19-0-56-4), ಆರ್​. ಅಶ್ವಿನ್​ (17-1-64-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಟೆಸ್ಟ್‌ ಸರಣಿಯ (Test Series) ಆರಂಭಿಕ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುಗ್ಗರಿಸಿದ್ದ ಭಾರತದ (Team India) ಬ್ಯಾಟರ್‌ಗಳು ಎರಡನೇ ಪಂದ್ಯದಲ್ಲೂ ನೀರಸ ಪ್ರದರ್ಶನ ತೋರಿದ್ದಾರೆ. ಪ್ರವಾಸಿ ತಂಡ ಗಳಿಸಿದ್ದ 259 ರನ್‌ ಎದುರು ಕೇವಲ 156 ರನ್‌ಗೆ ಸರ್ವಪತನಗೊಳ್ಳುವ ಮೂಲಕ 103 ರನ್‌ಗಳ ಹಿನ್ನಡೆ ಅನುಭವಿಸಿದ್ದಾರೆ. ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್ ಗಳಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಟಾಮ್‌ ಲೇಥಮ್‌ ಬಳಗದ ಸ್ಪಿನ್‌ ಖೆಡ್ಡಾಗೆ ಉರುಳಿತು. ಕೇವಲ 156 ರನ್‌ಗಳಿಗೆ ಆಲೌಟ್​ ಆಯಿತು.

ನ್ಯೂಜಿಲೆಂಡ್​ ಪರ ಮಿಚೆಲ್​ ಸ್ಯಾಂಟ್ನರ್​ (19.3-1-53-7) ಗ್ಲೆನ್​ ಫಿಲಿಪ್ಸ್​ (6-0-26-2), ಟಿಮ್​ ಸೌಥಿ (6-1-18-1) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಮೂರನೇ ದಿನದಾಟಕ್ಕೆ ಪಂದ್ಯ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.

https://www.vijayavani.net/yashasvi-jaiswal-makes-history-becomes-youngest-cricketer-in-india-to

https://www.vijayavani.net/shiggaon-bypoll-stone-pelted-on-minister-zameer-car-and-ex-mla-flies-nomination-as-independent-candidates

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net