ಈ ರಾಶಿಯ ವಿವಾಹಾಕಾಂಕ್ಷಿಗಳಿಗೆ ಶುಭದಾಯಕ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಸ್ತಿ ವಿಚಾರದ ಮಾತುಕತೆ. ದುಡುಕಿ ಮಾತನಾಡಬೇಡಿ. ಕೋಪಕ್ಕೆ ಒಳಗಾಗಬೇಡಿ. ಶಿಕ್ಷಕರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಶುಭಸಂಖ್ಯೆ: 5

ವೃಷಭ: ವ್ಯರ್ಥ ಕಾಲಹರಣ ಮಾಡುವುದು ಸಲ್ಲದು. ವೈದ್ಯರಿಗೆ ಹೆಚ್ಚು ಒತ್ತಡ ಉಂಟಾಗುವುದು. ಮಗಳಿಗೆ ಜ್ವರದ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 1

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ ಲಭ್ಯ. ಮಕ್ಕಳಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುವುದು. ಮಿತ್ರರಿಂದ ಪ್ರವಾಸಕ್ಕೆ ಮಾರ್ಗದರ್ಶನ. ಶುಭಸಂಖ್ಯೆ: 7

ಕಟಕ: ವಿವಾಹಾಕಾಂಕ್ಷಿಗಳಿಗೆ ಶುಭದಾಯಕ ದಿನ. ಹೂಡಿಕೆಗೆ ಇಂದು ಸುಸಮಯ. ತೀರ್ಥಯಾತ್ರೆಯ ಬಗ್ಗೆ ಯೋಜನೆ ರೂಪಿಸುವಿರಿ. ಶುಭಸಂಖ್ಯೆ: 3

ಸಿಂಹ: ಸಹೋದರರಿಂದ ನಿವೇಶನ ಖರೀದಿಗೆ ಸಹಕಾರ. ಆರ್ಥಿಕ ಒಪ್ಪಂದಗಳಲ್ಲಿ ಎಚ್ಚರವಹಿಸಿ. ಸ್ನೇಹಿತರ ಮಧ್ಯೆ ಕಲಹವಾದೀತು. ಶುಭಸಂಖ್ಯೆ: 6

ಕನ್ಯಾ: ಒಳಾಂಗಣ ವ್ಯಾಪಾರದಲ್ಲಿ ಮೋಸವಾಗುವ ಸಾಧ್ಯತೆ. ಸಂಬಂಧಿಸದ ವಿಷಯಗಳ ಬಗ್ಗೆ ಆಸಕ್ತಿ ಬೇಡ. ಬಂಧುಮಿತ್ರರ ಆಗಮನ. ಶುಭಸಂಖ್ಯೆ: 3

ತುಲಾ: ರಾಜಕೀಯದವರಿಗೆ ಮಾನಸಿಕ ಒತ್ತಡ. ಆಹಾರದಲ್ಲಿ ವ್ಯತ್ಯಾಸವಾಗಿ ಅನಾರೋಗ್ಯ. ಕಾನೂನು ಕ್ಷೇತ್ರದಲ್ಲಿರುವವರಿಗೆ ಗೌರವ. ಶುಭಸಂಖ್ಯೆ: 5

ವೃಶ್ಚಿಕ: ಹೂಡಿಕೆಯಲ್ಲಿ ಲಾಭವಾಗುವುದು. ನೆರೆಹೊರೆ ಯವರಿಂದ ಸಹಾಯ. ಕೌಟುಂಬಿಕ ಸಮಸ್ಯೆಗಳು ಸೌಹಾರ್ದವಾಗಿ ಸರಿಹೋಗಲಿವೆ. ಶುಭಸಂಖ್ಯೆ: 9

ಧನಸ್ಸು: ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ. ಪ್ರಯಾಣದಲ್ಲಿ ಅಪರಿಚಿತರಿಂದ ಸಹಾಯ. ಕೆಟ್ಟ ಆಲೋಚನೆಗಳು ಒತ್ತಿ ಬರುವವು. ಶುಭಸಂಖ್ಯೆ: 2

ಮಕರ: ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ತೊಂದರೆ. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು ಖಿನ್ನತೆಗೆ ಜಾರುವ ಸಾಧ್ಯತೆ ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 6

ಕುಂಭ: ಹೊಸ ಜನರ ಭೇಟಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಕೃಷಿಕರ ಆದಾಯ ಹೆಚ್ಚಳ. ಗಡಿಯಾರದ ಅಂಗಡಿ ಮಾಲೀಕರಿಗೆ ಲಾಭ. ಶುಭಸಂಖ್ಯೆ: 4

ಮೀನ: ವೈಯಕ್ತಿಕ ವಿಚಾರದಲ್ಲಿ ದುಡುಕದೆ ನಿರ್ಣಯ ತೆಗೆದುಕೊಳ್ಳಿ. ಬಂಧುಗಳಿಂದ ತೊಂದರೆಯಾದೀತು. ಧರ್ಮ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net