ಕನ್ನಡ ಹಾಡು ಬಳಸಿ ನಕಲಿ ಲಡ್ಡು ಮುತ್ಯಾನನ್ನು Troll ಮಾಡಿದ Shikhar Dhawan Reels; Video Viral

Shikhar Reels
Published on

ಮುಂಬೈ: ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ,  ಕ್ರಿಕೆಟ್​ ವಲಯದಲ್ಲಿ ಗಬ್ಬರ್​ ಎಂದೇ ಖ್ಯಾತಿ ಪಡೆದಿದ್ದ ಶಿಖರ್​ ಧವನ್​ (Shikhar Dhawan) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಬಹಳ ದಿನಗಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯವಾಗಿದ್ದಾರೆ. ಟ್ರೆಂಡಿಂಗ್​ ರೀಲ್ಸ್​ಗೆ ಹೆಜ್ಜೆ ಹಾಕುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ (Social Media) ಹೊಸ ಟ್ರೆಂಡ್​ ಸೃಷ್ಟಿಸುವ ಶಿಖರ್​ ಧವನ್​ ಇದೀಗ ಲಡ್ಡು ಮುತ್ಯಾನ (Laddu Mutya) ಹೆಸರಿನಲ್ಲಿ ವೈರಲ್​ ಆಗಿದ್ದ ನಕಲಿ ಪವಾಡಪುರುಷನ ಹಾಡು ಬಳಸಿ ಆತನನ್ನು ಟ್ರೋಲ್​ (Troll) ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಬಾಗಲಕೋಟೆಯ ಪವಾಡಪುರುಷ ಲಿಂಗೈಕ್ಯ ಲಡ್ಡು ಮುತ್ಯಾ ( Laddu Mutya ) ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ‌ ಖಾತೆ (Fake Account) ತೆರೆಯಲಾಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. ತಿರುಗುವ ಫ್ಯಾನ್​ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿ ಭಕ್ತರ ಹಣೆಗೆ ಹಚ್ಚುವ ನಕಲಿ ಲಡ್ಡು ಮುತ್ಯಾರನ್ನು (Laddu Mutya) ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಈ ಆಧುನಿಕ ನಕಲಿ ಲಡ್ಡು ಮುತ್ಯಾ ಅವರನ್ನು ಶಿಖರ್ ಧವನ್ (Shikhar Dhawan), ವಿಡಿಯೋ ಮೂಲಕ ಟ್ರೋಲ್ (Troll) ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ (Viral Video) ನೋಡುವುದಾದರೆ ಕುರ್ಚಿ ಮೇಲೆ ಕುಳಿತಿರುವ ಶಿಖರ್ ಧವನ್ (Shikhar Dhawan) ಅವರನ್ನು ಮೂರು ಮಂದಿ ಎತ್ತಿ ಹಿಡಿದಿದ್ದಾರೆ. ಆಗ ನಿಧಾನವಾಗಿ ತಿರುಗುತ್ತಿರುವ ಫ್ಯಾನ್ ಅನ್ನು ಧವನ್ ಕೈಯಲ್ಲಿ ತಡೆದು ನಿಲ್ಲಿಸಿದ್ದಾರೆ. ಇದಾದ ಬಳಿಕ ಮೈಮೇಲೆ ದೆವ್ವ ಬಂದಂತ ಇಬ್ಬರು ವ್ಯಕ್ತಿಗಳಿಗೆ ಆಶೀರ್ವಾದ ಮಾಡುವಂತೆ ನಕಲಿ ಲಡ್ಡು ಮುತ್ಯಾನನ್ನು ಅಣಕಿಸಿದ್ದಾರೆ.

ಜಾಲತಾಣದಲ್ಲಿ ಟ್ರೆಂಡಿಂಗ್​

ರೀಲ್ಸ್​ ಅಥವಾ ಶಾರ್ಟ್ಸ್​ಗಳನ್ನು ಹೆಚ್ಚಾಗಿ ನೋಡುವವರಿಗೆ ಈ ನಕಲಿ ಲಡ್ಡು ಮುತ್ಯಾನ ಪರಿಚಯ ಇರುತ್ತದೆ. ಈ ನಕಲಿ‌ ಲಡ್ಡುಮುತ್ಯಾ ಓರ್ವ ವಿಕಲಚೇತನ. “ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ” ಎಂಬ ಹಾಡಿನೊಂದಿಗೆ ರೀಲ್ಸ್​ ವೈರಲ್​ ಆಗಿದೆ. ಅದರಲ್ಲಿ ಇಬ್ಬರು ವ್ಯಕ್ತಿಗಳು ನಕಲಿ ಲಡ್ಡು‌ ಮುತ್ಯಾನ ಎತ್ತಿ ಹಿಡಿಯುತ್ತಾರೆ. ಬಳಿಕ ಆತ‌ ವೇಗವಾಗಿ ತಿರುಗುವ ಫ್ಯಾನ್​ ನಿಲ್ಲಿಸಿ ಅದರ ಧೂಳನ್ನೇ ಭಸ್ಮದ ರೀತಿ ತನ್ನ ಸುತ್ತಲು ಇರುವವರ ಹಣೆಗೆ ಲೇಪಿಸುತ್ತಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡಿಂಗ್​ನಲ್ಲಿದೆ. ಅಲ್ಲದೆ, ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿ ಸಾಕಷ್ಟು ಮಂದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಯುವಕರು, ಹಿರಿಯರು ಹಾಗೂ ಮಕ್ಕಳು ಕೂಡ ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ದೇಶದಾದ್ಯಂತ ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿದ ರೀಲ್​ಗಳು ವೈರಲ್ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net