ಈ ರಾಶಿಯವರಿಗಿಂದು ಹೊಸ ಉದ್ಯೋಗ ಲಭ್ಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಗ್ರಾಮ ಪಂಚಾಯ್ತಿ ಉದ್ಯೋಗದಲ್ಲಿ ಬಡ್ತಿ. ನಿಮ್ಮ ಮನೋಕಾಂಕ್ಷೆ ಈಡೇರುವುದು. ಶುಭಸಂಖ್ಯೆ: 5

ವೃಷಭ: ಜೇನು ಕೃಷಿಯಲ್ಲಿ ಅಲ್ಪ ಲಾಭ. ವಿದ್ಯಾರ್ಥಿಗಳ ಅಯ್ಕೆಯಲ್ಲಿ ಗೊಂದಲ. ದಾಂಪತ್ಯದಲ್ಲಿ ವಿರಸ. ಗೋದಾಮು ಸ್ಥಳ ಬದಲಾವಣೆ. ಶುಭಸಂಖ್ಯೆ: 9

ಮಿಥುನ: ಸಾಲ ತೀರಿಸಲು ಸಹಾಯ. ಸ್ನೇಹಿತರ ದುಃಖಕ್ಕೆ ಸಾಂತ್ವನ ಹೇಳುವಿರಿ. ಹೊಸ ಉದ್ಯೋಗ ಲಭ್ಯವಾಗುವುದು. ಕುಟುಂಬ ಸೌಖ್ಯ. ಶುಭಸಂಖ್ಯೆ: 8

ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ. ಮನೆಯಲ್ಲಿ ಧಾರ್ವಿುಕ ಕಾರ್ಯ. ರಕ್ಷಣಾ ವೃತ್ತಿಯಲ್ಲಿ ಇರುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 2

ಸಿಂಹ: ನ್ಯಾಯಾಲಯದ ಕಾರ್ಯಗಳಲ್ಲಿ ವಿಳಂಬ. ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ. ಹಿರಿಯರಿಗೆ ಮನಃಶಾಂತಿ. ದ್ವಿಚಕ್ರ ವಾಹನ ಖರೀದಿ. ಶುಭಸಂಖ್ಯೆ: 7

ಕನ್ಯಾ: ಪ್ರಯಾಣಕ್ಕೆ ವಿಪರೀತ ಖರ್ಚು. ಆರ್ಥಿಕ ಪರಿಸ್ಥಿತಿ ಉತ್ತಮ. ಅನ್ಯ ಜನರಲ್ಲಿ ಪ್ರೀತಿ. ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಶುಭಸಂಖ್ಯೆ: 1

ತುಲಾ: ಪ್ರಚಾರ ಸಭೆಗಳಲ್ಲಿ ಭಾಗಿ. ಬದುಕಿಗೆ ಉತ್ತಮ ತಿರುವು. ನಿವೇಶನ ನೋಂದಣಿ ಕಾರ್ಯ ವಿಕಲ್ಪ. ಮಹಿಳೆಯರಿಗೆ ಉತ್ತಮ ಲಾಭ. ಶುಭಸಂಖ್ಯೆ: 3

ವೃಶ್ಚಿಕ: ಹೊಸ ವ್ಯಾಪಾರವನ್ನು ಪ್ರಾರಂಭಿಸುವಿರಿ. ಅಮೂಲ್ಯ ವಸ್ತು ಪ್ರಾಪ್ತಿಯಾಗಿ ಮಾನಸಿಕ ನೆಮ್ಮದಿ. ಮಿತ್ರರ ಆಗಮನದಿಂದ ಸಂತಸ. ಶುಭಸಂಖ್ಯೆ: 9

ಧನುಸ್ಸು: ಸ್ತ್ರೀಯರಿಂದ ಲಾಭ. ಆತ್ಮೀಯರೊಂದಿಗೆ ಕಲಹ. ಲೋಹ ವ್ಯಾಪಾರದಲ್ಲಿ ಆದಾಯ. ಆಭರಣ ಖರೀದಿ. ಮಹಿಳೆಯರಿಗೆ ಶುಭ. ಶುಭಸಂಖ್ಯೆ: 8

ಮಕರ: ನೇತ್ರ , ದಂತ ವೈದ್ಯರಿಗೆ ವಿಶೇಷ ದಿನ. ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ. ದೂರ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 4

ಕುಂಭ: ರಾಜಕೀಯ ನೇತಾರರಿಗೆ ಅವಮಾನ ಸಾಧ್ಯತೆ. ಸೇವಕ ವರ್ಗದಿಂದ ಸಹಾಯ. ಸ್ಥಳ ಬದಲಾವಣೆ. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ: 2

ಮೀನ: ಆಲಸ್ಯದಿಂದ ಅವಕಾಶ ಕಳೆದುಕೊಳ್ಳುವಿರಿ. ಶತ್ರು ಭಯ, ಸಲ್ಲದ ಅಪವಾದ. ಚಂಚಲ ಮನಸ್ಸಿನಿಂದ ದೃಢ ನಿರ್ಧಾರದಲ್ಲಿ ವಿಫಲ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net