ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು ಪ್ರವಾಸಿ ತಂಡಕ್ಕೆ 107ರನ್ಗಳ ಸುಲಭ ಗುರಿ ನೀಡಿದ್ದು, ಟೀಮ್ ಇಂಡಿಯಾಗೆ (Team India) ಸೋಲಿನ ಭೀತಿ ಎದುರಾಗಿದೆ. ಮಳೆಯ ಕಾರಣದಿಂದಾಗಿ ನಾಲ್ಕನೇ ದಿನದಾಟವನ್ನು ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಲಾಗಿದೆ. ಈ ವಿಚಾರ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮ (Rohit Sharma) ಹಾಗೂ ಇತರೆ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
03 ವಿಕೆಟ್ ನಷ್ಟದೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ (Team India) ತಂಡವು ಸರ್ಫರಾಜ್ ಖಾನ್ (Sarfaraz Khan) (150 ರನ್, 195 ಎಸೆತ, 18 ಬೌಂಡರಿ, 3 ಸಿಕ್ಸರ್), ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ (Rishabh Pant) (99 ರನ್, 105 ಎಸತ, 9 ಬೌಂಡರಿ, 5 ಸಿಕ್ಸರ್) ಶತಕವಂಚಿತ ಆಟದ ಫಲವಾಗಿ 462 ರನ್ಗಳಿ ಆಲೌಟ್ ಆಯಿತು. ಪ್ರವಾಸಿ ಇತಂಡಕ್ಕೆ 107ರನ್ಗಳ ಸುಲಭ ಗುರಿ ನೀಡಿತು. ಹೀಗಾಗಿ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ (NewZealand) ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದಾಗ ದಿನದ ಆಟ ಅಂತ್ಯವಾಗುವುದಕ್ಕೆ ಇನ್ನೂ ಸುಮಾರು ಒಂದು ಗಂಟೆ ಸಮಯ ಬಾಕಿ ಉಳಿದಿತ್ತು. ಈ ವೇಳೆ ಮಳೆ ಬರುವ ಮುನ್ಸೂಚನೆ ಇದ್ದ ಕಾರಣ ಅಂಪೈರ್‌ಗಳು (Umpires) ದಿನದ ಆಟವನ್ನು ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಿದರು. ಆದರೆ, ಈ ವಿಚಾರ ಟೀಮ್ ಇಂಡಿಯಾ (Team India) ಆಟಗಾರರನ್ನು ಕೆರಳಿಸಿತು.
ನ್ಯೂಜಿಲೆಂಡ್‌ನ ಎರಡನೇ ಇನ್ನಿಂಗ್ಸ್ ವೇಳೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದರಿಂದ ಟೀಮ್ ಇಂಡಿಯಾ (Team India) ವೇಗಿಗಳು ಇದರ ಲಾಭ ಪಡೆಯಲು ಮುಂದಾದರು. ಹೀಗಾಗಿ ಇದರ ಲಾಭ ಪಡೆಯುವ ಸಲುವಾಗಿ ನಾಯಕ ರೋಹಿತ್ ಶರ್ಮಾ (Rohit Sharma), ಬುಮ್ರಾಗೆ (Jasprit Bumrah) ಬೌಲಿಂಗ್ ದಾಳಿ ಆರಂಭಿಸುವ ಜವಬ್ದಾರಿ ನೀಡಿದರು. ಆದರೆ ಬುಮ್ರಾ ಕೇವಲ 4 ಎಸೆತಗಳನ್ನು ಎಸೆದ ಬಳಿಕ ಲೈಟ್ ಮೀಟರ್‌ನಿಂದ ಲೈಟ್ ಅನ್ನು ಪರೀಕ್ಷಿಸಿ ಅಂಪೈರ್‌ಗಳು ಆಟವನ್ನು ನಿಲ್ಲಿಸಲು ನಿರ್ಧರಿಸಿದರು. ಹೀಗಾಗಿ ನ್ಯೂಜಿಲೆಂಡ್‌ನ ಆರಂಭಿಕರಿಬ್ಬರೂ ತಕ್ಷಣವೇ ಪೆವಿಲಿಯನ್ ಕಡೆಗೆ ತೆರಳಿದರು. ಆದರೆ ಫ್ಲಡ್ ಲೈಟ್ಗಳು ಆನ್ ಆಗಿದ್ದರೂ ಅಂಪೈರ್‌ಗಳು ದಿನದಾಟವನ್ನು ರದ್ದುಗೊಳಿಸಿದ್ದು, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಪಾಲ್ ರೈಫಲ್ ಮತ್ತು ಮೈಕೆಲ್ ಗಾಫ್ ಅವರೊಂದಿಗೆ ವಾಗ್ವಾದಕ್ಕಿಳಿದರು.
ಇದನ್ನೂ ಓದಿ: Vijayapuraದಲ್ಲಿ ಮೂರು ಕಣ್ಣಿರುವ ಕರು ಜನನ; ಏನಿದು ಅಚ್ಚರಿ ಎಂದ ಜನರು
ಒಂದು ಗಂಟೆ ಮುಂಚಿತವಾಗಿ ದಿನದಾಟ ಅಂತ್ಯ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರೋಹಿತ್ (Rohit Sharma) ಈ ಬಗ್ಗೆ ಸರಣಿ ಪ್ರಶ್ನೆಗಳನ್ನು ಎತ್ತಿದ್ದರು. ರೋಹಿತ್ನ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದ ಅಂಪೈರ್ಗಳಿಬ್ಬರು ದಿನದಾಟ ಬೇಗ ಅಂತ್ಯಗೊಳಿಸಿದ್ದಕ್ಕೆ ಕಾರಣವನ್ನು ವಿವರಿಸುತ್ತ ಹೋದರು. ಇದಾದ ಕೆಲಕ್ಷಣದ ಬಳಿಕ ಮಳೆ ಬರಲು ಆರಂಭಿಸಿದ ಪರಿಣಾಮ ಆಟಗಾರರು ಪೆವಿಲಿಯನ್ನತ್ತ ಮುಖ ಮಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತ ಅಂಪೈರ್ಗಳ ತೀರ್ಮಾನಕ್ಕೆ ರೋಹಿತ್ ಶರ್ಮ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ವಿರುದ್ಧವಾಗಿ ನಡೆದುಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಬಿಸಿಸಿಐ (BCCI) ಕ್ರಮ ಜರುಗಿಸಲಿದೆ ಎಂದು ವರದಿಯಾಗಿದೆ. ಒಂದು ವೇಳೆ ಬಿಸಿಸಿಐ ಕ್ರಮ ಜರುಗಿಸಿದ್ದೆ ಆದಲ್ಲಿ ಇವರಿಬ್ಬರಿಗೆ ಒಂದು ಪಂದ್ಯದಿಂದ ನಿಷೇಧ ಃಏರುವ ಸಾಧ್ಯತೆಯಿದೆ.