ಈ ರಾಶಿಯವರಿಗಿಂದು ಉತ್ತಮ ದಿನವಲ್ಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೃಷಿ ಬೆಳೆ ನಷ್ಟದ ಬಗ್ಗೆ ಚಿಂತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ. ವೈದ್ಯ ವೃತ್ತಿಯವರಿಗೆ ಅನನುಕೂಲವಾಗಲಿದೆ. ಶುಭಸಂಖ್ಯೆ: 5

ವೃಷಭ: ಸರ್ಕಾರಿ ನೌಕರರಿಗೆ ಉತ್ತಮ ದಿನವಲ್ಲ. ತಂದೆಯ ಆರೋಗ್ಯದಲ್ಲಿ ತೊಂದರೆ ಕಾಣಿಸಬಹುದು. ಧರ್ಮ ಕಾರ್ಯದಲ್ಲಿ ಶುಭ. ಶುಭಸಂಖ್ಯೆ: 9

ಮಿಥುನ: ಆಸ್ತಿ ಗಳಿಸುವ ಪ್ರಯತ್ನ ಸಫಲವಾಗಿ ಸಂತಸ. ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯವಿದೆ. ವಾಹನ ಲಾಭ. ಶುಭಸಂಖ್ಯೆ: 9

ಕಟಕ: ಉದ್ಯೋಗದ ನಿಮಿತ್ತ ಸ್ಥಳಾಂತರ. ಕಚೇರಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳಿ. ದೂರದಿಂದ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 2

ಸಿಂಹ: ಐಟಿ ಅಧಿಕಾರಿಗಳಿಗೆ ಉದ್ಯೋಗ ನಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಯಶಸ್ಸು. ಮನೆ ಖರೀದಿಗೆ ತಾಯಿಯಿಂದ ಸಹಕಾರ. ಶುಭಸಂಖ್ಯೆ: 9

ಕನ್ಯಾ: ನ್ಯಾಯಾಲಯದಲ್ಲಿ ಜಯ. ವಂಶಾಧಾರಿತ ಉದ್ಯೋಗದಲ್ಲಿ ಯಶಸ್ಸು. ವಾದ ವಿವಾದಗಳಿಂದ ದೂರವಿರಿ. ಸೈನಿಕ ವೃತ್ತಿಗೆ ಆಯ್ಕೆ. ಶುಭಸಂಖ್ಯೆ: 2

ತುಲಾ: ಅವಿವಾಹಿತರಿಗೆ ವಿವಾಹ ಯೋಗ. ಆರೋಗ್ಯಕ್ಕಾಗಿ ಹಣ ವ್ಯಯ. ಆಸ್ತಿಯ ವಿಚಾರವಾಗಿ ಸಹೋದರರೊಂದಿಗೆ ಘರ್ಷಣೆ. ಶುಭಸಂಖ್ಯೆ: 3

ವೃಶ್ಚಿಕ: ಗಾರ್ವೆಂಟ್ಸ್ ಕೆಲಸದಲ್ಲಿ ಒತ್ತಡ. ಮಾಡೆಲಿಂಗ್ ವೃತ್ತಿಯವರಿಗೆ ಶುಭದಿನ. ಕೆಲಸಗಾರರ ಸಮಸ್ಯೆ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 2

ಧನಸ್ಸು: ಪಿತ್ರಾರ್ಜಿತ ಆಸ್ತಿಯಿಂದ ಆದಾಯ, ಯಂತ್ರೋಪಕರಣಗಳಿಂದ ಎಚ್ಚರವಿರಲಿ. ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಘಟನೆ. ಶುಭಸಂಖ್ಯೆ: 4

ಮಕರ: ಭಾಷಣ ವೃತ್ತಿಯಲ್ಲಿ ಹಣ ಗಳಿಕೆ. ಕೃಷಿ ಸಂಶೋಧಕರಿಗೆ ಶುಭ. ಪ್ರಯಾಣ ಯೋಗ. ಅರಣ್ಯ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 7

ಕುಂಭ: ಆದಾಯದಷ್ಟೇ ಖರ್ಚು. ಕುಲದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನೂತನ ಮನೆ ಖರೀದಿಯ ವಿಷಯದಲ್ಲಿ ಅಡಚಣೆ. ಶುಭಸಂಖ್ಯೆ: 3

ಮೀನ: ಆದಾಯ ತೆರಿಗೆ ಉದ್ಯೋಗದಲ್ಲಿ ಬದಲಾವಣೆ. ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುತ್ತದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net