ರೋಹಿತ್, ಕೊಹ್ಲಿ, ಸರ್ಫರಾಜ್ Half Century; ಆತಿಥೇಯರ ಭರ್ಜರಿ ಕಮ್​ಬ್ಯಾಕ್​, ರೋಚಕ ಹಂತದಲ್ಲಿ ಮೊದಲ Test Match

Rohit Virat Khan
Published on

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್​ (NewZealand) ನಡುವಿನ ಟೆಸ್ಟ್​ ಸರಣಿಯ (Test Series) ಮೊದಲ ಪಂದ್ಯದಲ್ಲಿ (Test Match) ಆತಿಥೇಯರು ಪ್ರವಾಸಿ ತಂಡಕ್ಕೆ ದಿಟ್ಟ ತಿರುಗೇಟು ನೀಡಿದ್ದು, ಪಂದ್ಯ ರೋಚಕ ಘಟ್ಟ ತಲುಪಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುತ್ತಿರುವ 25ನೇ ಟೆಸ್ಟ್​ ಪಂದ್ಯ ಮೊದಲ ದಿನ ಮಳೆಯಿಂದಾಗಿ ಸಂಫೂರ್ಣವಾಗಿ ರದ್ದಾಗಿತ್ತು. ಎರಡನೇ ದಿನದಂದು ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ (Team India) ಅತ್ಯಲ್ಪ ಮೊತ್ತಕ್ಕೆ ಔಟಾಗುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಆದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಮೂವರು ಬ್ಯಾಟ್ಸ್‌ಮನ್​ಗಳು ಅರ್ಧಶತಕದ ಫಲದೊಂದಿಗೆ ಭಾರತ (Team India) ಕಮ್​ಬ್ಯಾಕ್​ ಮಾಡಿದ್ದು ಪಂದ್ಯ ರೋಚಕ ಹಂತ ತಲುಪಿದೆ.

ಪಂದ್ಯದ ಮೂರನೇ ದಿನದ ಎರಡನೇ ಸೆಷನ್‌ನಲ್ಲಿ ಕಿವೀಸ್ ತಂಡವನ್ನು 402 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್​ ಇಂಡಿಯಾ ಪರ ನಾಯಕ ರೋಹಿತ್​​ ಶರ್ಮ (52 ರನ್​, 63 ಎಸೆತ, 8 ಬೌಂಡರಿ, 1 ಸಿಕ್ಸರ್​), ವಿರಾಟ್​ ಕೊಹ್ಲಿ (70 ರನ್​, 102 ಎಸೆತ, 8 ಬೌಂಡರಿ, 1 ಸಿಕ್ಸರ್​​), ಸರ್ಫರಾಜ್​ ಖಾನ್​ (70 ರನ್​, 78 ಎಸೆತ, 7 ಬೌಂಡರಿ, 3 ಸಿಕ್ಸರ್​) ಅರ್ಧಶತಕಗಳ ಫಲದೊಂದಿಗೆ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್​ ನಷ್ಟಕ್ಕೆ 231 ರನ್​ ಗಳಿಸಿದ್ದು, ಇನ್ನಿಂಗ್ಸ್ ಹಿನ್ನಡೆಯನ್ನು 125 ರನ್​ಗಳಿಗೆ ತಗ್ಗಿಸಿದೆ. 

ಮೊದಲ ಇನ್ನಿಂಗ್ಸ್​ನಲ್ಲಿ 46 ರನ್​ಗಳಿಗೆ ಆಲೌಟ್ ಆಗಿದ್ದ ಟೀಮ್​​ ಇಂಡಿಯಾ (Team India) ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ರೋಹಿತ್ ಮತ್ತು ಯಶಸ್ವಿ ನಡುವೆ ಮೊದಲ ವಿಕೆಟ್‌ಗೆ 72 ರನ್‌ಗಳ ಜೊತೆಯಾಟವಿತ್ತು. ಯಶಸ್ವಿ 52 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ (Rohit Sharma) 63 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. ಇದಾದ ನಂತರ ವಿರಾಟ್ ಕೊಹ್ಲಿ (Virat Kohli) ಮತ್ತು ಸರ್ಫರಾಜ್ (Sarfaraz Khan) ನಡುವೆ ಶತಕದ ಜೊತೆಯಾಟವಿತ್ತು. ಕೊಹ್ಲಿ 102 ಎಸೆತಗಳಲ್ಲಿ 70 ರನ್ ಬಾರಿಸಿ ದಿನದಾಟದ ಕೊನೆಯಲ್ಲಿ ಕ್ಯಾಚಿತ್ತು ಪೆವಿಲಿಯನ್​ಗೆ ಸೇರಿಕೊಂಡರು. ಸರ್ಫರಾಜ್ 78 ಎಸೆತಗಳಲ್ಲಿ 70 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ರನ್​ ಬರ ನೀಗಿಸಿ ದಾಖಲೆ ಬರೆದ ಕೊಹ್ಲಿ

ನ್ಯೂಜಿಲೆಂಡ್​ ವಿರುದ್ಧ 70 ರನ್​ ಸಿಡಿಸುವ ಮೂಲಕ ವಿರಾಟ್​ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್‌ಗಳ ಸಾಧನೆಯೊಂದಿಗೆ, ಭಾರತದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸುನಿಲ್ ಗವಾಸ್ಕರ್ ಸಾಲಿಗೆ ವಿರಾಟ್ ಕೊಹ್ಲಿ (Virat Kohli) ಸೇರ್ಪಡೆಯಾಗಿದ್ದಾರೆ. ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್ ಗಳಿಸಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಸಚಿನ್ ತೆಂಡೂಲ್ಕರ್ 15,921, ರಾಹುಲ್ ದ್ರಾವಿಡ್ 13,265 ಹಾಗೂ ಸುನಿಲ್ ಗವಾಸ್ಕರ್ 10,122 ರನ್ ಗಳಿಸಿದ್ದಾರೆ. ವಿಶ್ವ ಕ್ರಿಕೆಟ್‌ನ ಒಟ್ಟಾರೆ ಪಟ್ಟಿಯಲ್ಲಿ ಸಚಿನ್ ಮುಂಚೂಣಿಯಲ್ಲಿದ್ದಾರೆ.

ಪ್ರಸಕ್ತ ಸಾಲಿನ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್​ ಕೊಹ್ಲಿ (Virat Kohli) ಗಳಿಸಿದ ಮೊದಲ ಅರ್ಧಶತಕ ಇದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ 46 ಹಾಗೂ ಬಾಂಗ್ಲಾದೇಶ ವಿರುದ್ಧ 47 ರನ್ ಗಳಿಸಿದ್ದರೂ ಅರ್ಧಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರಸಕ್ತ ಸಾಲಿನಲ್ಲಿ ವಿರಾಟ್​ ಕೊಹ್ಲಿ (Virat Kohli) ಅರ್ಧಶತಕ ಗಳಿಸುವ ಮೂಲಕ ರನ್​ ಬರವನ್ನು ನೀಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net