ಈ ರಾಶಿಯವರಿಗಿಂದು ನಂಬಿದವರಿಂದಲೇ ಮೋಸ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಟೋಮೊಬೈಲ್ಸ್ ವ್ಯವಹಾರದಲ್ಲಿ ಲಾಭ. ಕಾಂಡಿಮೆಂಟ್ಸ್, ಬೇಕರಿಯವರಿಗೆ ನೌಕರರ ಸಮಸ್ಯೆ. ಕಲಾವಿದರಿಗೆ ಪುರಸ್ಕಾರ. ಶುಭಸಂಖ್ಯೆ: 6

ವೃಷಭ: ಕೆಲಸಗಾರರ ಸಮಸ್ಯೆಯಿಂದ ಬೆಳೆ ನಷ್ಟ. ಕಾರ್ಖಾನೆ ಮಾಲೀಕರಿಗೆ ಲಾಭ. ನಿರ್ವಾಹಕರು ಮತ್ತು ಚಾಲಕರಿಗೆ ವಿಶೇಷ ದಿನ. ಶುಭಸಂಖ್ಯೆ: 2

ಮಿಥುನ: ಮಾಧ್ಯಮ ಕ್ಷೇತ್ರದವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಅನಿರೀಕ್ಷಿತ ಘಟನೆ. ಗೃಹ ನಿರ್ವಣಕ್ಕೆ ಚಾಲನೆ ಕೊಡುವಿರಿ. ಶುಭಸಂಖ್ಯೆ: 7

ಕಟಕ: ನೂತನ ಹುದ್ದೆ ಪ್ರಾಪ್ತಿಯಾಗಿ ಸಂತೋಷ. ಹಳೆಯ ಸ್ನೇಹಿತನ ಭೇಟಿ. ಸಂಗಾತಿಗೆ ಅನಾರೋಗ್ಯ. ಶುಭ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 7

ಸಿಂಹ: ನನೆಗುದಿಗೆ ಬಿದ್ದ ಕೆಲಸಕ್ಕೆ ಪುನರ್ ಚಾಲನೆ. ಆಸ್ತಿ ನೋಂದಣಿ ಸಾಧ್ಯತೆ. ನಟರು ಮತ್ತು ಕಲಾವಿದರಿಗೆ ಅವಕಾಶಗಳ ಮಹಾಪೂರ. ಶುಭಸಂಖ್ಯೆ: 8

ಕನ್ಯಾ: ದೂರ ಪ್ರಯಾಣ ವಿಳಂಬ. ವಿದ್ಯುತ್ ಕ್ಷೇತ್ರದ ಕಾರ್ವಿುಕರಿಗೆ ವಿಶೇಷ ದಿನ. ವಿವಾಹ ಪ್ರಯತ್ನ ವಿಫಲ. ದಿನಸಿ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 7

ತುಲಾ: ಅಧಿಕಾರಿಗಳಿಂದ ಛೀಮಾರಿ. ಖಾಸಗಿ ಉದ್ಯೋಗದಲ್ಲಿ ಆದ್ಯತೆ. ನಂಬಿದವರಿಂದಲೇ ಮೋಸ. ಪೊಲೀಸ್ ಅಧಿಕಾರಿಗಳಿಗೆ ಒತ್ತಡ. ಶುಭಸಂಖ್ಯೆ: 2

ವೃಶ್ಚಿಕ: ಅಡಕೆ ಮತ್ತು ಏಲಕ್ಕಿ ಬೆಳೆಗಾರರಿಗೆ ಲಾಭ ಬರುವ ದಿನ. ಧಾರ್ವಿುಕ ವಿಚಾರಗಳಲ್ಲಿ ಆಸಕ್ತಿ. ಮಗನ ಮದುವೆ ವಿಳಂಬವಾಗಿ ನಿರಾಸೆ. ಶುಭಸಂಖ್ಯೆ: 9

ಧನುಸ್ಸು: ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಕೃಷಿ ಉಪಕರಣ ಖರೀದಿಯಲ್ಲಿ ಮೋಸವಾದೀತು, ಎಚ್ಚರ. ಅಮೂಲ್ಯ ವಸ್ತುಖರೀದಿ. ಶುಭಸಂಖ್ಯೆ: 4

ಮಕರ: ಶಸ್ತ್ರಚಿಕಿತ್ಸೆಯ ಸಾಧ್ಯತೆ. ಆಹಾರ ಸೇವನೆಯಲ್ಲಿ ಎಚ್ಚವಿರಲಿ. ಮಹಿಳೆಯರಿಗೆ ದುಂದು ವೆಚ್ಚದ ಭೀತಿ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 4

ಕುಂಭ: ನಿವೇಶನ ಖರೀದಿಗೆ ಸ್ನೇಹಿತನ ಸಹಾಯ. ಸಹೋದರಿಯಿಂದ ಆಸ್ತಿ ವಾಗ್ವಾದ. ಸಂಗಾತಿಗೆ ಅನಾರೋಗ್ಯ. ಸ್ವಗ್ರಾಮಕ್ಕೆ ಪಯಣ. ಶುಭಸಂಖ್ಯೆ: 8

ಮೀನ: ಚಿಕ್ಕಪುಟ್ಟ ವ್ಯಾಪಾರದಲ್ಲಿ ಹಣ ಗಳಿಸುವಿರಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪೈಪೋಟಿ. ನೂತನ ಮನೆ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net