

ಮೇಷ: ರಾಜಕಾರಣಿಗಳಿಗೆ ಹಿನ್ನಡೆ. ಆಭರಣ ವ್ಯಾಪಾರಸ್ಥರಿಗೆ ಶುಭಧಾಯಕ ದಿನ. ವಿಶ್ರಾಂತಿಯ ಅಭಾವದಿಂದ ಅನಾರೋಗ್ಯ. ಶುಭಸಂಖ್ಯೆ: 9
ವೃಷಭ: ವಿದೇಶಿ ವ್ಯಾಪಾರಸ್ಥರಿಗೆ ಲಾಭ ಕೈ ಸೇರಲಿದೆ. ಬಡಗಿಗಳಿಗೆ ಅಧಿಕ ವರಮಾನ ಬರಲಿದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 1
ಮಿಥುನ: ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶ ಲಭ್ಯ. ಕವಿಗಳಿಗೆ ಉತ್ತಮ ದಿನ. ಬಟ್ಟ ಉದ್ಯಮದಲ್ಲಿ ನಷ್ಟ. ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 3
ಕಟಕ: ತೈಲ ಮಾರಾಟಗಾರರಿಗೆ ಒಳ್ಳೆಯ ಸಮಯ. ಹಿರಿಯರ ಮಾರ್ಗದರ್ಶನದಿಂದ ಸಮಾಧಾನ. ಆಸ್ತಿ ವಿಚಾರದಲ್ಲಿ ವಾದ-ವಿವಾದ. ಶುಭಸಂಖ್ಯೆ: 4
ಸಿಂಹ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನಿರೀಕ್ಷಿತ ಆದಾಯ. ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡೀತು. ಕೆಲಸಗಳಲ್ಲಿ ವಿರೋಧ. ಶುಭಸಂಖ್ಯೆ: 5
ಕನ್ಯಾ: ಸ್ಥಿರಾಸ್ತಿ ಖರೀದಿಯ ಚಿಂತನೆ ಮಾಡುವಿರಿ. ವ್ಯವಹಾರದಲ್ಲಿ ಉನ್ನತಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆತು ಸಂತಸ. ಶುಭಸಂಖ್ಯೆ: 3
ತುಲಾ: ಯಂತ್ರ ತಯಾರಿಕೆಗೆ ಪ್ರೋತ್ಸಾಹ. ಕಾರ್ಖಾನೆ ಹೊಸ ವಾಹನ ಖರೀದಿ. ಶುಭಸಂಖ್ಯೆ: 8 ನೌಕರರಿಗೆ ಶುಭ ದಿನ. ಸಾಲಗಾರರಿಂದ ತೊಂದರೆ. ಶುಭಸಂಖ್ಯೆ: 8
ವೃಶ್ಚಿಕ: ರಾಜಕಾರಣಿಗಳಿಗೆ ಪರ್ವಕಾಲ. ತೋಟಗಾರಿಕೆಯಲ್ಲಿ ಆದಾಯ ಬರಲಿದೆ. ಮಕ್ಕಳ ಆರೋಗ್ಯದಲ್ಲಿ ವಿಶೇಷ ಕಾಳಜಿ ವಹಿಸಿ. ಶುಭಸಂಖ್ಯೆ: 4
ಧನುಸ್ಸು: ಪಿತ್ರಾರ್ಜಿತ ಆಸ್ತಿಯಿಂದ ಆದಾಯ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಯೋಚಿಸಿ. ಶುಭಸಂಖ್ಯೆ: 8
ಮಕರ: ಸರ್ಕಾರಿ ನೌಕರರಿಗೆ ಅಧಿಕಾರಿಗಳ ಬೆಂಬಲ ಸಿಗುವುದು. ತಾಯಿಯಿಂದ ಸಹಕಾರ. ಕೌಟುಂಬಿಕ ಅಗತ್ಯಗಳಿಗಾಗಿ ಖರ್ಚು. ಶುಭಸಂಖ್ಯೆ: 9
ಕುಂಭ: ಹಣಕಾಸಿನ ತೊಂದರೆ ಕಾಡುವುದು. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಬುದ್ದಿ ಚಾಂಚಲ್ಯ. ಈ ದಿನ ನೂತನ ವಸ್ತು ಖರೀದಿ ಬೇಡ. ಶುಭಸಂಖ್ಯೆ: 3
ಮೀನ: ನೌಕರಿಯಲ್ಲಿ ಬಡ್ತಿ ಸಾಧ್ಯತೆ. ಗೃಹ ನಿರ್ಮಾಣ ಕೆಲಸ ಕಾರ್ಯಗಳಲ್ಲಿ ವಿಘ್ನ. ದೂರದೂರಿನಿಂದ ನೆಂಟರ ಆಗಮನದಿಂದ ಸಂತಸ. ಶುಭಸಂಖ್ಯೆ: 1