ಈ ರಾಶಿಯವರಿಗಿಂದು ಕಸರತ್ತಿನ ವ್ಯವಹಾರದಲ್ಲಿ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪದವಿ ಮುಗಿಸಿದವರಿಗೆ ಉದ್ಯೋಗ ಪ್ರಾಪ್ತಿ. ಹೈನೋದ್ಯಮದಲ್ಲಿ ಲಾಭ. ಚಿಕ್ಕ ಅಂಗಡಿಯವರಿಗೆ ನಷ್ಟ. ದಿನಾಂತ್ಯದಲ್ಲಿ ಅಶುಭ. ಶುಭಸಂಖ್ಯೆ: 8

ವೃಷಭ: ಬಂಧುಗಳೊಂದಿಗೆ ವಿರಸ. ವಿದ್ಯಾರ್ಥಿನಿಯರಿಗೆ ಶತ್ರುಗಳ ಕಾಟ. ವಿದ್ಯುತ್ ಮತ್ತು ಜಲ ಮಂಡಳಿಯ ಉದ್ಯೋಗಸ್ಥರಿಗೆ ಬಡ್ತಿ. ಶುಭಸಂಖ್ಯೆ: 8

ಮಿಥುನ: ಸ್ವಂತ ಉದ್ಯೋಗದಲ್ಲಿ ಧನ ಹಾನಿ. ಸಕಾಲಿಕ ಸಲಹೆಯಿಂದ ಆಪತ್ತು ನಿವಾರಣೆ. ದೈಹಿಕ ಕಸರತ್ತಿನ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 2

ಕಟಕ: ಪಿತ್ರಾರ್ಜಿತ ಆಸ್ತಿ ವಿಭಾಗವಾಗುವುದು. ಶುಭ ಕಾರ್ಯಗಳ ಭಾಗವಹಿಸುವಿಕೆಯಿಂದ ಸಮಾಧಾನ. ವಿನಾಕಾರಣ ತಿರುಗಾಟ. ಶುಭಸಂಖ್ಯೆ: 2

ಸಿಂಹ: ಸ್ನೇಹಿತೆಯರಿಂದ ಸಹಾಯ. ವೈದ್ಯಕೀಯ ಕ್ಷೇತ್ರದ ಕೆಲಸಗಾರರಿಗೆ ಹಣದ ಸಮಸ್ಯೆ. ಕುರಿ, ಹಸು ಸಾಕಾಣಿಕೆಯಲ್ಲಿ ಲಾಭ. ಶುಭಸಂಖ್ಯೆ: 1

ಕನ್ಯಾ: ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ನಿವೇಶನ ಖರೀದಿಗೆ ಯೋಚನೆ. ಕಾರು ಬದಲಾವಣೆಗೆ ಚಿಂತೆ. ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ತುಲಾ: ವಸ್ತ್ರಾಭರಣ ಲಾಭ. ಅಧಿಕ ಪ್ರಯಾಣದಿಂದ ಅನಾ ರೋಗ್ಯ ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮ ಕಡೆಗಿದೆ. ಶುಭಸಂಖ್ಯೆ: 6

ವೃಶ್ಚಿಕ: ಸಾಲಗಾರರಿಂದ ಕಿರುಕುಳ ಅನುಭವಿಸುವಿರಿ. ಸ್ವಯಂಕೃತ ಅಪರಾಧಕ್ಕೆ ಪಶ್ಚಾತ್ತಾಪ. ಪ್ಲಾಸ್ಟಿಕ್ ಉದ್ಯಮದಲ್ಲಿ ಲಾಭ ಸಿಗಲಿದೆ. ಶುಭಸಂಖ್ಯೆ: 4

ಧನುಸ್ಸು: ಹಳೆಯ ಸ್ನೇಹಿತರ ಭೇಟಿ. ರಾಜಕಾರಣಿಗಳಿಗೆ ವಿಶೇಷ ಒತ್ತಡ. ಸಹೋದ್ಯೋಗಿಗಳಿಂದ ಬೆಂಬಲ. ಔಷಧ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 5

ಮಕರ: ಕಟ್ಟಡ ನಿರ್ವಣಕ್ಕೆ ಅಡ್ಡಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸ್ಪರ್ಧೆ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 3

ಕುಂಭ: ಹತ್ತಿ ಬಟ್ಟೆ ಗಿರಣಿಯವರಿಗೆ ಅಧಿಕ ಲಾಭ. ದವಸ ಧಾನ್ಯಗಳ ವ್ಯಾಪಾರದಲ್ಲಿ ನಷ್ಟ. ಸರ್ಕಾರಿ ಅಧಿಕಾರಿಗಳಿಗೆ ಒತ್ತಡದ ಕೆಲಸ. ಶುಭಸಂಖ್ಯೆ: 6

ಮೀನ: ಸಾಕುಪ್ರಾಣಿ ಖರೀದಿ. ಖಿನ್ನತೆಗೆ ಜಾರುವ ಸಾಧ್ಯತೆ. ತಾಂತ್ರಿಕ, ವೈದ್ಯಕೀಯ ವಿದ್ಯಾರ್ಥಿಗಳು ದೃಢರಾಗಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net