ಈ ರಾಶಿಯವರಿಗಿಂದು ಹಿತಶತ್ರುಗಳ ಬಾಧೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅತಿಯಾದ ಆತ್ಮವಿಶ್ವಾಸದಿಂದ ಗೆಲುವು. ವೈರಿಗಳಿಂದ ದೂರವಿದ್ದರೆ ಉತ್ತಮ. ಕೃಷಿ ಉಪಕರಣಗಳ ಕ್ರಯ ವಿಕ್ರಯಗಳಲ್ಲಿ ಲಾಭ. ಶುಭಸಂಖ್ಯೆ: 5

ವೃಷಭ: ಹಿರಿಯರ ಮಾತಿಗೆ ಗೌರವ ಕೊಡಿ. ಆರೋಗ್ಯದಲ್ಲಿ ಏರುಪೇರು. ಶಸ್ತ್ರ ಚಿಕಿತ್ಸೆ ಸಾಧ್ಯತೆ. ರ್ದಜಿಗಳಿಗೆ ವಿಶೇಷ ಲಾಭವಾಗುವುದು. ಶುಭಸಂಖ್ಯೆ: 9

ಮಿಥುನ: ದಾಯಾದಿ ಕಲಹ. ವಿದ್ಯುತ್ ಇಲಾಖೆಯ ಕೆಲಸಗಳಲ್ಲಿ ಅಲ್ಪ ಪ್ರಗತಿ. ಪರಿಶ್ರಮಕ್ಕೆ ತಕ್ಕ ಫಲ. ಕಾರ್ಖಾನೆ ಮಾಲೀಕರಿಗೆ ಸಮಸ್ಯೆ. ಶುಭಸಂಖ್ಯೆ: 3

ಕಟಕ: ವಿದ್ಯಾರ್ಥಿಗಳಿಗೆ ಆಲಸ್ಯ ಮನೋಭಾವ ಕಾಡಬಹುದು. ಮಾನಸಿಕ ವ್ಯಥೆ ಉಂಟಾದೀತು. ಕಾರ್ಯಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 4

ಸಿಂಹ: ನಿಮ್ಮ ಪ್ರತಿಭೆಗೆ ಅಧಿಕಾರಿಗಳಿಂದ ಪ್ರಶಂಸೆ. ಪುಣ್ಯಕ್ಷೇತ್ರ ದರ್ಶನ. ಹಿತಶತ್ರುಗಳ ಬಾಧೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 8

ಕನ್ಯಾ: ತಂಪು ಪಾನೀಯ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಅವಿವಾಹಿತರಿಗೆ ವಿವಾಹಯೋಗ. ಕುಟುಂಬದಲ್ಲಿ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 2

ತುಲಾ: ನಂಬಿದ ಜನರಿಂದ ಮೋಸ. ಕೃಷಿಕರಿಗೆ ಖರೀದಿಯಲ್ಲಿ ಸಮಾಧಾನ. ವ್ಯಾಪಾರ ಸ್ಥಳ ಬದಲಾವಣೆ. ದಿನಾಂತ್ಯದಲ್ಲಿ ಆಶುಭ ಸುದ್ಧಿ. ಶುಭಸಂಖ್ಯೆ: 9

ವೃಶ್ಚಿಕ: ದಾಂಪತ್ಯದಲ್ಲಿ ಸಾರ್ಥಕ ಮನೋಭಾವನೆ. ವೈದ್ಯ ವೃತ್ತಿಯಲ್ಲಿ ಕೀರ್ತಿ, ಯಶಸ್ಸು ನಿಮ್ಮದಾಗುವುದು. ಉದ್ಯಮಿಗಳಿಗೆ ಯಶಸ್ಸು. ಶುಭಸಂಖ್ಯೆ: 1

ಧನುಸ್ಸು: ಅಪರಿಚಿತರ ಬಗ್ಗೆ ಎಚ್ಚರವಿರಲಿ. ವಿದೇಶದಲ್ಲಿರುವ ಮಗನಿಂದ ಶುಭವಾರ್ತೆ. ವೈರಿಗಳಿಂದ ಅಂತರ ಕಾಯ್ದುಕೊಳ್ಳುವುದು ಕ್ಷೇಮ. ಶುಭಸಂಖ್ಯೆ: 5

ಮಕರ: ಚಂಚಲ ಮನಸ್ಸು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ. ಆರ್ಥಿಕ ಪರಿಸ್ಥಿತಿ ಉತ್ತಮ. ದುಂದು ವೆಚ್ಚದಿಂದ ಹಣ ಪೋಲು. ಶುಭಸಂಖ್ಯೆ: 1

ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ ವಹಿಸಿ. ನಟರಿಗೆ ಕಲಾವಿದರಿಗೆ ಯಶಸ್ಸು. ಗೃಹ ನಿರ್ಮಾಣ ಕೆಲಸಗಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 6

ಮೀನ: ಬಹು ಕಾಲದ ಬಳಿಕ ಅವಿವಾಹಿತರಿಗೆ ವಿವಾಹ ಯೋಗ. ನಿಮ್ಮ ನಿರ್ಧಾರಕ್ಕೆ ಮಿತ್ರರ ಬೆಂಬಲ. ವಿದೇಶ ವ್ಯವಹಾರಗಳಿಂದ ಲಾಭ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net