ಈ ರಾಶಿಯವರಿಗಿಂದು ಸಾಲದಿಂದ ಮುಕ್ತಿ ಸಿಗುವ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗದಲ್ಲಿ ಪ್ರಯತ್ನದಿಂದ ಯಶಸ್ಸು ದೊರೆಯಲಿದೆ. ಹಣ ಬಂದರೂ ಕೈಯಲ್ಲಿ ಉಳಿಯುವುದಿಲ್ಲ. ಸುಖ ಭೋಜನ. ಶುಭಸಂಖ್ಯೆ: 7

ವೃಷಭ: ನ್ಯಾಯಾಲಯದ ವ್ಯವಹಾರದಲ್ಲಿ ಸೋಲು. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಆಸ್ತಿಪ್ರಾಪ್ತಿಯಲ್ಲಿ ಅಡೆತಡೆಗಳು ಎದುರಾದಾವು. ಶುಭಸಂಖ್ಯೆ: 9

ಮಿಥುನ: ಸಾಲದಿಂದ ಮುಕ್ತಿ ಸಿಗುವ ದಿನ. ವಿನಾಕಾರಣ ದಂಡ ಕಟ್ಟುವಂತೆ ಆಗಬಹುದು. ಗೆಳೆಯರ ಕಷ್ಟದಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 3

ಕಟಕ: ಮನೆಯ ಮರುನಿರ್ಮಾಣಕ್ಕೆ ಚಾಲನೆ ಸಿಗುವುದು. ತೀರ್ಥಯಾತ್ರೆ ಯೋಗ. ಆಲಸ್ಯ ಮನೋಭಾವ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 4

ಸಿಂಹ: ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಸಾಧಾರಣ ಲಾಭ. ಸ್ನೇಹಿತರಿಂದ ಅವಾಚ್ಯ ನಿಂದನೆ. ಶುಭಸಂಖ್ಯೆ: 3

ಕನ್ಯಾ: ದಂಪತಿಯಲ್ಲಿ ವಿರಸ. ಸಮಾಧಾನ ಮುಖ್ಯ. ಸ್ತ್ರೀಯರು ತಾಳ್ಮೆಯಿಂದ ವರ್ತಿಸಿ. ಹಣಕಾಸಿನಲ್ಲಿ ಮುಗ್ಗಟ್ಟು.ಕಾಡಲಿದೆ. ಶುಭಸಂಖ್ಯೆ: 6

ತುಲಾ: ಸೌಜನ್ಯದಿಂದ ಇರಿ. ಶಿವನನ್ನು ಶ್ರದ್ಧೆಯಿಂದ ಅರ್ಚಿಸಿ. ಮಕ್ಕಳಿಂದ ನೆಮ್ಮದಿ ಸಿಗುವುದು. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 6

ವೃಶ್ಚಿಕ: ಮಗನ ವಿವಾಹದ ಚಿಂತೆ ಆವರಿಸುವುದು. ಆಹಾರ ಸೇವನೆಯಲ್ಲಿ ವ್ಯತ್ಯಾಸ. ಅನಾರೋಗ್ಯದ ಭಯ. ಪರ ಊರಿಗೆ ಪ್ರಯಾಣ. ಶುಭಸಂಖ್ಯೆ: 7

ಧನುಸ್ಸು: ವಾದ-ವಿವಾದಗಳಲ್ಲಿ ಸೋಲು. ದೂರ ಪ್ರಯಾಣ ಮಾಡಬೇಕಾಗುವುದು. ಮಾತುಗಳಿಂದ ಅನರ್ಥ. ಷೇರು ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 6

ಮಕರ: ಪತ್ನಿಗೆ ಅನಾರೋಗ್ಯ. ವ್ಯಾಪಾರ ವ್ಯವಹಾರದಲ್ಲಿ ಲಾಭ, ಅತಿಯಾದ ತಿರುಗಾಟ. ಹೃದಯ ಸಂಬಂಧಿತ ಅನಾರೋಗ್ಯದ ಸಾಧ್ಯತೆ. ಶುಭಸಂಖ್ಯೆ: 9

ಕುಂಭ: ಕಂಪ್ಯೂಟರ್ ವ್ಯಾಪಾರಿಗಳಿಗೆ ದೈಹಿಕ ತೊಂದರೆ ಕಾಡೀತು. ಇಷ್ಟ ಕಾರ್ಯಗಳಲ್ಲಿ ಸಿದ್ಧಿ. ಹಿರಿಯರಿಂದ ಆಶೀರ್ವಾದ ಪಡೆಯಿರಿ. ಶುಭಸಂಖ್ಯೆ: 3

ಮೀನ: ಇಷ್ಟ ವಸ್ತುಗಳ ಖರೀದಿ. ಪಿತ್ರಾರ್ಜಿತ ಆಸ್ತಿ ದೊರೆಯಲಿದೆ. ವಾಹನ ಚಾಲಕರಿಗೆ ತೊಂದರೆ ಸಾಧ್ಯತೆ. ರಾಜಕೀಯದಲ್ಲಿ ಏಳಿಗೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net